ಸುದ್ದಿ

ಜೂನ್ 1 ವಿಶ್ವ ಹಾಲು ದಿನ / June 1 World Milk Day

ಜೂನ್ 1 ವಿಶ್ವ ಹಾಲು ದಿನ.ಪರಿಸರ ದಿನ, ಜನಸಂಖ್ಯಾ ದಿನ, ಹೀಗೆ ಹಲವಾರು ದಿನಾಚರಣೆಗಳನ್ನು ಆಚರಿಸುವ ರೀತಿ ಪ್ರತಿವರ್ಷ ಜೂನ್ 1ನ್ನು ವಿಶ್ವ ಹಾಲಿನ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಾಲು ಅತ್ಯಂತ ಪೌಷ್ಟಿಕಾಂಶವುಳ್ಳದ್ದು, ಮಕ್ಕಳಿಂದ ಮುದುಕರವರೆಗೂ ಹಾಲನ್ನು ಸೇವಿಸುತ್ತಾರೆ. ಹಾಲು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಮನ್ನಣೆ ಪಡೆದಿದ್ದು ವಿಶ್ವವ್ಯಾಪಿ ಇದನ್ನು ಬಳಸುತ್ತಾರೆ.

ವಿಶ್ವ ಹಾಲು ದಿನದ ಇತಿಹಾಸ: ವಿಶ್ವ ಹಾಲು ದಿನವವನ್ನು ಪ್ರಥಮವಾಗಿ ಆರಂಭಿಸಿದ್ದು ಜೂನ್ 1 2001ರಲ್ಲಿ ಇದನ್ನು ಸಂಯುಕ್ತ ರಾಷ್ಟ್ರಗಳ ಆಹಾರ ಸಂಸ್ಥೆಯವರು(ಈಂಔ) ಅನುಷ್ಠಾನಗೊಳಿಸಿದರು. ಜೂನ್ 1 ನೇ ತಾರೀಖು ಆಯ್ಕೆಯಾಗಲು ಕಾರಣವಿಷ್ಟೇ ಬಹುತೇಕ ರಾಷ್ಟ್ರಗಳಲ್ಲಿ ಹಿಂದಿನಿಂದ ಈ ದಿನವನ್ನು ಹಾಲು ದಿನಾಚರಣೆಯನ್ನಾಗಿ ಆಚರಿಸುತ್ತಿದ್ದರು. ಆಗಾಗಿ ಜೂನ್ 1ವನ್ನು ವಿಶ್ವ ಹಾಲು ದಿನವನ್ನಾಗಿ ಆಯ್ಕೆ ಮಾಡಲಾಗಿದೆ.

ಆಚರಣೆಯ ಮಹತ್ವ: ಜನಸಾಮಾನ್ಯರಲ್ಲಿ ನೈಸರ್ಗಿಕ ಹಾಲು, ಹಾಲಿನ ಮೂಲ, ಹಾಲಿನಲ್ಲಿರುವ ಪೌಷ್ಟಿಕ ಅಂಶಗಳ ಹಾಗೂ ಹಾಲಿನ ಉತ್ಪನ್ನಗಳ ಬಗ್ಗೆ ಜಾಗೃತಿ ಹೆಚ್ಚಿಸಲು ಹಾಗೂ ಪ್ರಪಂಚದಾದ್ಯಂತ ಹಾಲಿನ ಆರ್ಥಿಕ ಪ್ರಾಮುಖ್ಯತೆಯನ್ನು ತಿಳಿಸಿಕೊಡುವುದಕ್ಕೆ ಈ ಆಚರಣೆ ಮಹತ್ವ ಪಡೆದುಕೊಂಡಿದೆ. ಹಾಲನ್ನು ಜಾಗತಿಕ ಆಹಾರವಾಗಿ ವಿಶ್ವ ಹಾಲು ದಿನಾಚರಣೆಯಲ್ಲಿ ಬಿಂಬಿಸಲಾಗುತ್ತಿದೆ. ವಿವಿಧ ಪ್ರಾಯೋಜಿತ ವ್ಯವಸ್ಥೆಯೊಂದಿಗೆ ಇಂಟರ್ ನ್ಯಾಷನಲ್ ಡೇರಿ ಫೇಡರೇಷನ್ ರವರು ಒಂದು ವೆಬ್‍ಸೈಟನ್ನು ಲಾಂಚ್‍ಮಾಡಿದ್ದು, ವಿವಿಧ ಪ್ರಾಯೋಜಕತ್ವ ಚಟುವಟಿಕೆಗಳ ಮೂಲಕ ಹಾಲಿನ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವುವ ಕೆಲಸವವನ್ನು ಮಾಡಲಾಗುತ್ತಿದೆ.

ವಿಶ್ವ ಹಾಲು ದಿನಾಚರಣೆಯ ಕಾರ್ಯಕ್ರಮಗಳು:ಈ ಹಾಲಿನ ದಿನಾಚರಣೆಯನ್ನು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯಮಟ್ಟದ ಸದಸ್ಯರ ಸಹಯೋಗದೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಸಂದೇಶಗಳನ್ನು ಸಾರುವ ಹಲವಾರು ಕಾರ್ಯಕ್ರಗಳನ್ನು ಮಾಡಲಾಗುತ್ತದೆ. ಹಾಲಿನ ಮೂಲಕ ಆರೋಗ್ಯ ಮತ್ತು ಪೌಷ್ಟಿಕಾಂಶಗಳ ಲಾಭಗಳು ವಿಷಯದ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಹಾಗೂ ಗೃಹಿಣಿಯರಿಗೆ ಹಾಲಿನ ಉತ್ಪನ್ನಗಳನ್ನು ಬಳಸಿ ಆಹಾರ ತಯಾರಿಸುವ ಸ್ಪರ್ಧೆ, ಮಕ್ಕಳಿಗೆ ಹಾಲಿನ ಮಹತ್ವದ ಚಿತ್ರ ಬಿಡಿಸುವ ಸ್ಪರ್ಧೆ, ಚರ್ಚಾಸ್ಪರ್ಧೆಗಳು ಹೀಗೆ ವಿವಿಧ ರೀತಿಯ ಚಟುವಟಿಕಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಹಾಲಿನ ದಿನವನ್ನು ಆಚರಿಸಲಾಗುತ್ತದೆ.

ಕೆಎಂಎಫ್‍ನಲ್ಲಿ ವಿಶ್ವಹಾಲು ದಿನ ಆಚರಣೆ:ಪ್ರತಿವರ್ಷ ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ವಿಶ್ವ ಹಾಲು ದಿನಚರಣೆಯನ್ನು ಆಚರಿಸಲಾಗುತ್ತಿದ್ದು, ಹಾಲಿನ ಮಹತ್ವವನ್ನು ಎಲ್ಲರಿಗೂ ತಿಳಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಗುತ್ತಿದೆ. ಕರ್ನಾಟಕ ಸರ್ಕಾರದ ಮಹತ್ವಪೂರ್ಣ ಯೋಜನೆಗಳಲ್ಲೊಂದಾದ ಕ್ಷೀರಭಾಗ್ಯ ಯೋಜನೆಯನ್ನು ಸಹ ವಿಶ್ವ ಹಾಲು ದಿನಾಚರಣೆಯೆಂದೇ ಜಾರಿಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 1ಕೋಟಿಗೂ ಅಧಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಹಾಲನ್ನು ವಿತರಿಸುವ ಮಹತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ಇದು ಅತ್ಯಂತ ಜನಪ್ರಿಯವಾಗಿರುತ್ತದೆ. ಜೂನ್ 1 2019ರಂದುಕೂಡ ಕೆಎಂಎಫ್ ಕೇಂದ್ರ ಕಛೇರಿಯಲ್ಲಿ ವಿಶ್ವಹಾಲು ದಿನಾಚರಣೆಯನ್ನು ಆಚರಿಸಲಾಗುತ್ತಿದೆ.


2019ರ ವಿಶ್ವ ಹಾಲು ದಿನಾಚರಣೆಯ ಧ್ಯೆಯ ವಾಕ್ಯ: “Drink Milk: Today and everyday”( ಹಾಲನ್ನು ಕುಡಿಯಿರಿ ಇಂದು ಮತ್ತು ಎಂದೆಂದಿಗೂ.)
-ನವೀನ್ ರಾಮನಗರ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!