ಈ ಸಾಲುಗಳು ಓದಲಿಕ್ಕೆ ಚೆಂದ ಆದರೆ ಬದುಕು ಇವೆಲ್ಲವನ್ನೂ ಕೊಡಬೇಕಲ್ಲವೇ ಅಂತ ಪ್ರಶ್ನೆ ಉದ್ಭವಿಸುತ್ತೆ ಅಲ್ವಾ? ನಿಜ ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ತಾಪತ್ರಯ ಸಮಸ್ಯೆ ಹೀಗೆ ಅಸಮಾಧಾನ ಇದ್ದೇ ಇರುತ್ತದೆ. ಬದುಕಿನಲ್ಲಿ ಇವೆಲ್ಲವನ್ನೂ ಎದುರಿಸುತ್ತಾ ಸಂತಸ ನೆಮ್ಮದಿ ಸಂತೃಪ್ತಿಯಿಂದ ಬದುಕುವುದೇ ಜೀವನ ಕಲೆ.
ಬಾಲ್ಯ ಎಷ್ಟೊಂದು ಚೆಂದವಿತ್ತು ನೋಡು ನೋಡುತ್ತಾ ಕಳೆದು ಹೋಯಿತು, ಪ್ರೈಮರಿ ಸ್ಕೂಲ್, ಹೈಸ್ಕೂಲ್, ಕಾಲೇಜು ಎಲ್ಲವೂ ಮುಗಿದು ಕೊನೆಗೊಂದು ಉದ್ಯೋಗ ಮದುವೆ ಮಕ್ಕಳು ಸಂಸಾರ ಹೀಗೆ ಜೀವನದ ರೋಟಿನು. ಇದು ಎಲ್ಲರಿಗೂ ಆಗಿರುತ್ತದೆ. ಇದರಲ್ಲೇ ಈ ಬದುಕನ್ನು ಕಳೆದು ಬಿಡುತ್ತಾರೆ. ಇರುವುದೊಂದೇ ಬದುಕು ಈ ಸುಂದರ ಬದುಕನ್ನು ಹೇಗೆ ಕಳೆಯಬೇಕೆಂದು ಇವತ್ತಿಗೂ ಎಷ್ಟೋ ಜನರಿಗೆ ಗೊತ್ತಿಲ್ಲ!
ಒಂದು ದಿನಕ್ಕೆ ಇಪ್ಪತ್ತಾಲ್ಕು ಗಂಟೆಗಳು ಈ ಇಪ್ಪತ್ತಾಲ್ಕು ಗಂಟೆಗಳನ್ನು ನೀವು ಯಾವ ರೀತಿ ವಿಂಗಡಿಸಿಕೊಂಡು ಬದುಕು ನಡೆಸುತ್ತಿದ್ದೀರಿ ಯೋಚಿಸಿದ್ದಿರಾ? ಇಲ್ಲ ಪ್ರತಿ ದಿನ ಬೆಳಗ್ಗೆ ಆಗುತ್ತದೆ ಅದೇ ರೋಟಿನು ಕೆಲಸ ಮತ್ತದೇ ವೀಕೆಂಡ್ ಮೂಡ್ ಅದೇ ರೋಟಿನು. ನಿಮ್ಮ ದಿನಚರಿಯನ್ನೊಮ್ಮೆ ಬದಲಾಯಿಸಿ ನೋಡಿ ಬದುಕು ಎಷ್ಟು ಚೆಂದ ಇರುತ್ತೇ ಅನುಭವಿಸಿ.ಒಂದೊಳ್ಳೆ ಪುಸ್ತಕ ಓದುವ ಹವ್ಯಾಸ, ಸಂಗೀತ ಕೇಳಲ್ಲೊಂದು ಸಮಯ, ಪ್ರಕೃತಿ ಮಧ್ಯೆ ಕಳೆದುಹೋಗಿ, ಅದು ಸರಿಯಿಲ್ಲ ಇದು ಸರಿಯಿಲ್ಲ ಗೊಣಗೊದು ಬಿಟ್ಟು ಬಿಡಿ, ಅವರು ಹೀಗೆ ಇವರು ಹೀಗೆ ನಿಮ್ಮ ತಲೆಯಿಂದ ಕಿತ್ತಾಗಿ, ಈ ಬದುಕು ನಿಮಗಾಗಿ ಇದೇ ನಿಮ್ಮ ಇಷ್ಟಪಟ್ಟರವನ್ನ ಪ್ರೀತಿಸಿ, ನಿಮ್ಮ ಕುಟುಂಬ, ನಿಮ್ಮ ಬದುಕು ಸಾಧಿಸಬಹುದಾದ ಕನಸುಗಳು, ಪುಟ್ಟ ಪುಟ್ಟ ಸಂತಸವನ್ನು ಮನತುಂಬಿ ಅನುಭವಿಸಿ.
-Naveen Ramangara