ನಮ್ಮ ರಾಮನಗರ

ಇದೇ ಡಿಸೆಂಬರ್ 26ಕ್ಕೆ “ಕಾಲಭೈರವ ಪುರಾಣ” ಎಂಬ ದೊಡ್ಡಾಟ ಪ್ರದರ್ಶನ

ಕೃಷ್ಣಾಪುರದೊಡ್ಡಿಯ ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸ್ಪಂದನ ಚಾರಿಟಬಲ್ ಟ್ರಸ್ಟ್ ರಾಮನಗರ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಡಿಸೆಂಬರ್ 26ಕ್ಕೆ    ಸಂಜೆ 4ಗಂಟೆಗೆ ರಾಮನಗರದ ಅಂಬೇಡ್ಕರ್ ಭವನದಲ್ಲಿ  ಕಾಲ ಭೈರವ ಪುರಾಣಂ ಎಂಬ ದೊಡ್ಡಾಟ ಪ್ರದರ್ಶನವನ್ನು ಹಮ್ಮಿಕೊಂಡಿದೆ.
ವಿಧಾನ ಪರಿಷತ್ ಸದಸ್ಯ ಸಿಎಂ ಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಅರ್ಚಕರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸುವರು.


ಕಾರ್ಯಕ್ರಮದಲ್ಲಿ ಪುರಸಭೆ ಬಿಡದಿ ಸ್ಥಾಯಿ ಸಮಿತಿ ಅಧ್ಯಕ್ಷರು ಮಾಜಿ ಸಿ ಉಮೇಶ್ ರಾಮನಗರ ನಗರಸಭೆ ಪೌರಾಯುಕ್ತ  ಬಿ ನಂದಕುಮಾರ್ ದೊಡ್ಡಬಳ್ಳಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ ದಯಾನಂದ ರಾಮನಗರ ಜಿಲ್ಲಾ ರಂಗಭೂಮಿ ಒಕ್ಕೂಟದ ಅಧ್ಯಕ್ಷ ಬೈರೇಗೌಡ ಅರ್ಜುನ್ ರಾಕ್ ಮಾಲೀಕರು ಉಮಾಶಂಕರ್ ಜೆಬಿಟಿ ಬಿಡದೆ ನಿರ್ದೇಶಕ ಬಿ ಎನ್ ಗಂಗಣ್ಣ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ರವಿಕುಮಾರ್ ಎನ್ ರಂಗಭೂಮಿ ಕಲಾವಿದ ಎಲ್ ಪ್ರಸಾದ್ ಭಾರತ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಎ ಬಿ ಗಂಗಾಧರ್ ಅರೆಹಳ್ಳಿ ಸಮಾಜ ಸೇವಕ ಟಿ ರಾಮಕೃಷ್ಣ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಾಲಭೈರವ ಪುರಾಣ ದೊಡ್ಡಾಟದ ಭಾಗವತಿಕೆಯನ್ನು ಬಸವರಾಜ ಶಿಗ್ಗಾಂವ ನಿರ್ವಹಿಸುವರು. ಮುಖವರ್ಣಿಕೆ ಮತ್ತು ವೇಷಭೂಷಣ ಶಂಕರ ಅರ್ಕಸಾಲಿ ಶಿಗ್ಗಾಂವ, ಗೋಪಾಲ ಯಂಕಪ್ಪನವರ ಮೇಳದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಚನ್ನಬಸಪ್ಪ ಬೆಂಡಿಗೇರಿ, ಹೇಮಂತಕುಮಾರ ಭಜಂತ್ರಿ, ಫಕ್ಕೀರೇಶ ಕೊಂಡಾಯಿ ಇರುವರು. ಕಾಲಭೈರವ ಪುರಾಣ ದೊಡ್ಡಾಟ ರಚನೆ, ನಿರ್ದೇಶನ ಮತ್ತು ವಿನ್ಯಾಸ ಡಾಕ್ಟರ್ ಎಂ ಬೈರೇಗೌಡ. ಕಾಲಭೈರವ ಪುರಾಣ ದೊಡ್ಡಾಟದಲ್ಲಿ ಕಲಾವಿದರು ಬಸವರಾಜ ಎನ್ ನವೀನ್ ನಾಯಕ್ ಮಹೇಶ್ ಟಿಸಿ. ದಾಕ್ಷಾಯಿಣಿ. ಪವಿತ್ರ ಜಿಎಚ್. ಭವ್ಯ. ಶ್ವೇತಾ ಟಿ. ಸ್ನೇಹ ಎಲ್ಎಸ್. ಸಚಿತ್ರ. ರಮ್ಯಾ. ತೇಜಶ್ರೀ ಬಿಎಸ್. ಜಲಜ  ಅಭಿನಯಿಸುವರು ಎಂದು ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿಟಿ ದಿನೇಶ್ ಬಿಳಗುಂಬ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!