ದಿ: ಚಿರಂಜೀವಿ ಸರ್ಜಾರವರ ಪತ್ನಿ ನಟಿ ಮೇಘನಾ ರಾಜ್ ಅವರಿಗೆ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಜೂನಿಯರ್ ಚಿರಂಜೀವಿ ಸರ್ಜಾ ಆಗಮನವಾಗಿದೆ. ಚಿರು ಕುಟುಂಬದಲ್ಲಿ ಸಂಭ್ರಮ ಮೂಡಿದೆ.
(22.10.2020)ಇಂದು ಚಿರು ಮತ್ತು ಮೇಘನಾ ರವರ ನಿಶ್ಚಿರ್ತಾವಾದ ದಿನ ಈ ದಿನವೇ ಮಗು ಜನನವಾಗಿರುವುದು ಎಲ್ಲರಲ್ಲೂ ಸಂತಸ ಮೂಡಿದೆ. ಮಗು ಈ ದಿನ 11.07ಕ್ಕೆ ಜನನವಾಗಿದ್ದು, ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಚಿರು ಕುಟಂಬದ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು.
ಚಿರಂಜೀವಿ ಸರ್ಜಾ ಜೂನ್ 7 ರಂದು ಹೃದಯಘಾತದಿಂದ ವಿಧಿವಶರಾಗಿದ್ದರು. ಈ ಸಂದರ್ಭದಲ್ಲಿ ಮೇಘನಾ ತುಂಬು ಗರ್ಭಿಣಿಯಾಗಿದ್ದರು. ಇಡೀ ಕರ್ನಾಟಕವೇ ದುಖ:ದಲ್ಲಿ ಭಾಗಿಯಾಗಿದ್ದು, ತುಂಬಾ ಜನ ಇಂತಹ ನೋವು ಯಾವ ಹೆಣ್ಣಿಗೂ ಬರಬಾರದು ಎಂದು ಮರುಗಿದ್ದರು. ಈಗ ಆ ನೋವೆಲ್ಲಾ ಮಾಯವಾಗಿ ಚಿರು ಕುಟುಂಬದಲ್ಲಿ ಸಂತಸ ಮೂಡುವಂತಾಗಿದೆ.
ಏನೆ ಆಗಲಿ ಬದುಕು ಅನಿರೀಕ್ಷಿತಗಳ ಗೂಡು ನೋವು ನಲಿವು ಎಲ್ಲವೂ ಭಗವಂತನ ಲೀಲೆ. ಜೂನಿಯರ್ ಚಿರಂಜೀವಿ ನೂರು ವರ್ಷ ಚೀರಂಜೀವಿಯಾಗಿ ಬಾಳಲಿ ಮೇಘನಾ ಬದುಕಲ್ಲಿ ಮತ್ತೇ ಸಂತಸ ಸದಾ ಮೂಡಲಿ ಎಂಬುದು ನಮ್ಮ ಆಶಯ.