ಸುದ್ದಿ

ಜಾನಪದ ಲೋಕದಲ್ಲಿ, ಜಾನಪದ ಲೋಕೋತ್ಸವ 2019

ಕರ್ನಾಟಕ ಜಾನಪದ ಪರಿಷತ್ತು, ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಸರ್ಕಾರ ಪ್ರವಾಸಿ ಜಾನಪದ ಲೋಕೋತ್ಸವ 2019, ಕಾರ್ಯಕ್ರಮ ಪ್ರತಿವರ್ಷದಂತೆ ಈ ವರ್ಷ ಜಾನಪದ ಲೋಕ ಬೆಂಗಳೂರು ಮೈಸೂರು ಹೆದ್ದಾರಿ ರಾಮನಗರ ಇಲ್ಲಿ ಫೆಬ್ರವರಿ 16 ಮತ್ತು 17 ರಂದು ಎರಡು ದಿನಗಳ ಕಾಲ ನಡೆಯಲಿದ್ದು, ಇಲ್ಲಿ ವೈವಿದ್ಯಮಯ ಜಾನಪದ ಕುಣಿತ ಹಾಗೂ ಗೀತಗಾಯನ ಕರಕುಶಲ ಮೇಳದ ಪ್ರಾತ್ಯಕ್ಷಿಕೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ನಾಡೋಜ ಹೆಚ್.ಎಲ್ ನಾಗೇಗೌಡರ ಕನಸಿನ ಕೂಸು ಜಾನಪದ ಲೋಕ ಇಲ್ಲಿ ಜಾನಪದಕ್ಕೆ ಸಂಬಂಧಿಸಿದ ಹಳೆ ತಲೆಮಾರಿನ ಹಲವಾರು ವಸ್ತುಗಳು ಸಂಗ್ರಹಾಲಯದಲ್ಲಿ ಪ್ರದರ್ಶನಗೊಳ್ಳುತ್ತಿವೆ. ನಶಿಸಿ ಹೊಗುತ್ತಿರುವ ಜಾನಪದ ಕಲೆಗಳಿಗೆ ಜೀವ ತುಂಬಿ ಶಾಶ್ವತವಾದ ಒಂದು ವೇದಿಕೆಯನ್ನು ರೂಪಿಸಿದ್ದು, ದಿವಂಗತ ಡಾ: ಹೆಚ್.ಎಲ್. ನಾಗೇಗೌಡರು ಕರ್ನಾಟಕದ ಗ್ರಾಮೀಣ ಭಾಗದ ಉದ್ದಗಲಕ್ಕೂ ಸಂಚರಿಸಿ ಮಾಹಿತಿ ಕಲೆ ಹಾಕಿ ಜಾನಪದವನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಿ ಯಶಸ್ಸನ್ನು ಕಂಡವರು. ಪ್ರತಿವರ್ಷ ಜಾನಪದ ಲೋಕೋತ್ಸವ ಕಾರ್ಯಕ್ರಮವನ್ನು ನಡೆಸುತ್ತಿದ್ದು ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ಹೋರ ರಾಜ್ಯಗಳಿಂದ ಕಲಾವಿದರನ್ನು ಆಹ್ವಾನಿಸಿ ಅವರ ಕಲೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗುತ್ತದೆ. ಲೋಕೋತ್ಸವದಲ್ಲಿ ವಿಶೇಷವಾಗಿ ಜಾನಪದ ಲೋಕೋತ್ಸವ ಪ್ರಶಸ್ತಿಗಳನ್ನು ಅರ್ಹ ಕಲಾವಿದರಿಗೆ ಪ್ರದಾನ ಮಾಡಲಾಗುತ್ತದೆ.

ಜಾನಪದ ಲೋಕೋತ್ಸವ 2019 ಕಾರ್ಯಕ್ರಮವು ಶ್ರೀ.ಟಿ. ತಿಮ್ಮೇಗೌಡರು ಐ.ಎ.ಎಸ್.(ನಿ) ಅಧ್ಯಕ್ಷರು ಕರ್ನಾಟಕ ಜಾನಪದ ಪರಿಷತ್ತು, ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಉದ್ಘಾಟನೆಯನ್ನು ಪ್ರೋ. ಡಿ.ಬಿ. ನಾಯಕ್, ಕುಲಪತಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ, ಗೊಟಗೋಡಿರವರು ನೆರವೇರಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಅನ್ನದಾನೇಶ್ವರ ಸ್ವಾಮೀಜಿಗಳು ಆದಿಚುಂಚನಗಿರಿ ಶಾಖಾಮಠ, ರಾಮನಗರ ವಹಿಸಲಿದ್ದು, ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಆದಿತ್ಯ ನಂಜರಾಜ್‍ರವರು ನಡೆಸಿಕೊಡಲಿದ್ದಾರೆ. ಅನೇಕ ಗಣ್ಯರ ಉಪಸ್ಥಿತಿ ಇರಲಿದೆ. ಈ ಕಾರ್ಯಕ್ರಮದ ನಿರ್ವಹಣೆ ಡಾ: ಕುರುವ ಬಸವರಾಜ್ರವರದು.

ರಾಮನಗರ ಮತ್ತು ಚನ್ನಪಟ್ಟಣದ ಮಧ್ಯೆ ಇರುವ ಜಾನಪದ ಲೋಕಕ್ಕೆ ಫೆಬ್ರವರಿ 16 ಮತ್ತು 17 ರಂದು ತಪ್ಪದೇ ಕುಟುಂಬ ಸಮೇತರಾಗಿ ಬನ್ನಿ. ವಿಶೇಷವಾಗಿ 16ನೇ ತಾರೀಖು ಮದ್ಯಾಹ್ನ 2.30ಕ್ಕೆ ಹೆಚ್.ಎಲ್ ನಾಗೇಗೌಡರ ಕೃತಿ ನನ್ನೂರು ಬೈರ್ನಳ್ಳಿ ಶಿವರಾಮ್ ನಿರ್ದೇಶನದಲ್ಲಿ ನಾಟಕ ಪ್ರದರ್ಶನವಿದೆ
-ನವೀನ್ ರಾಮನಗರ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!