ಜಮ್ಮು ಕಾಶ್ಮೀರದ ಆವಂತಿಪೋರಾದಲ್ಲಿ ನಡೆದ ನೀಚ ಉಗ್ರರ ಆತ್ಮಹುತಿ ದಾಳಿಗೆ ಭಾರತ ಮಾತೆಯ ಹೆಮ್ಮೆಯ 43 ಯೋಧರು ಹುತಾತ್ಮರಾಗಿದ್ದಾರೆ. 25ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆತ್ಮಹತ್ಯಾ ಬಾಂಬರ್ ಒಬ್ಬ ಸ್ಕಾರ್ಪಿಯೋ ಕಾರಿನಲ್ಲಿ 350ಕೆಜಿ ಸ್ಪೋಟಕಗಳನ್ನು ತುಂಬಿಸಿಕೊಂಡು ಸಿಆರ್‍ಪಿಎಫ್ ಯೋಧರು ತೆರಳುತಿದ್ದ ಬಸ್‍ಗೆ ಡಿಕ್ಕಿ ಹೊಡೆಸಿ ಬಾಂಬ್ ಸ್ಪೋಟಿಸಿದ್ದಾನೆ. ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಈ ಭೀಮತ್ಸ ದಾಳಿಯನ್ನು ನಡೆಸಿದೆ. ಈಗಾಗಲೇ ಪ್ರಧಾನಿ ಯವರು ಯೋಧರ ತ್ಯಾಗ ವ್ಯರ್ಥವಾಗಲು ಬಿಡಲ್ಲ ವೆಂಬ ಸಂದೇಶವನ್ನು ನೀಡಿದ್ದಾರೆ. ಪಕ್ಷಾತೀತವಾಗಿ ಎಲ್ಲರೂ ಈ ಘಟನೆಯನ್ನು ಖಂಡಿಸಿದ್ದು, ಉಗ್ರರಿಗೆ ತಕ್ಕ ಪಾಠ ಕಲಿಸಬೇಕೆಂದು ಅಗ್ರಹಿಸಿದ್ದಾರೆ.
ಈ ಭೀಮತ್ಸ ದುರ್ಘಟನೆಯಲ್ಲಿ ಸಕ್ಕರೆ ನಗರದ ಮಂಡ್ಯದ ವೀರ ಯೋಧ ಹೆಚ್. ಗುರು ಕೂಡ ಹುತಾತ್ಮರಾಗಿದ್ದಾರೆ. ಇವರು ಸಿ.ಆರ್.ಪಿ.ಎಫ್‍ನ 82ನೇ ಬೆಟಾಲಿಯನ್ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆ.ಎಂ. ದೊಡ್ಡಿ ಸಮೀಪದ ಗುಡಿಗೆರೆ ಗ್ರಾಮದ ಕೃಷಿಕ ಹೊನ್ನಯ್ಯ ಅವರ ಪುತ್ರ ವೀರಯೋಧ ಹೆಚ್. ಗುರು ಕಳೆದ 6 ತಿಂಗಳ ಹಿಂದೆಷ್ಟೇ ವಿವಾಹವಾಗಿದ್ದರು. ಇದೀಗ ಗುರು ಅವರ ಹುತಾತ್ಮರಾದ ಸುದ್ದಿಕೇಳಿ ಇಡೀ ಕುಟುಂಬ ನೋವಿನಲ್ಲಿ ತತ್ತರಿಸಿದೆ.
ದೇಶದ ರಕ್ಷಣೆಗಾಗಿ ಹೆಮ್ಮೆಯಿಂದ ಮಿಲಿಟರಿ ಪಡೆಗೆ ಸೇರಿದ್ದ ಯೋಧರು ದೇಶಕ್ಕಾಗಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಭಾರತ ಮಾತೆಯ ಪ್ರತಿಯೊಬ್ಬರೂ ಇವರ ತ್ಯಾಗಕ್ಕೆ ಗೌರವ ನಮನ ಸಲ್ಲಿಸೋಣ. ಹುತಾತ್ಮ ಯೋಧರ ಕುಟುಂಬಗಳಿಗೆ ನೋವನ್ನು ಭರಿಸುವ ಶಕ್ತಿ ಭರಿಸಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ. ಭಾರತ ಮಾತೆಯ ಕೋಟಿ ಕೋಟಿ ಜನರ ಶಾಪ ಪಾಪಿ ಉಗ್ರರಿಗೆ ತಟ್ಟದೆಬಿಡದು. ಜೈ. ಹಿಂದ್. (ಪ್ರತಿಯೊಬ್ಬರೂ ಶೇರ್ ಮಾಡುವ ಮೂಲಕ ಭಾವಪೂರ್ಣ ನಮನ ಸಲ್ಲಿಸಿ)