ಸುದ್ದಿ

ಯುಪಿಎಸ್ಸಿ ಅಣಕು ಸಂದರ್ಶನ- ರವಿ ಡಿ. ಚೆನ್ನಣ್ಣವರ್ IPS

ಕರ್ನಾಟಕದ ಸಿಂಗಂ ಎಂದೇ ಜನಪ್ರಿಯರಾಗಿರುವ ದಕ್ಷ, ನಿಷ್ಟಾವಂತ ಐ.ಪಿ.ಎಸ್. ಅಧಿಕಾರಿ ರವಿ ಡಿ. ಚೆನ್ನಣ್ಣವರ್ ಕೇಂದ್ರ ಲೋಕ ಸೇವಾ ಆಯೋಗ ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಇದೇ ಜನವರಿ 20ರಂದು ತಮ್ಮ ಕಛೆರಿ ಉಪ್ಪಾರಪೇಟೆ ಪಶ್ಚಿಮ ವಿಭಾಗ ಉಪ ಪೊಲೀಸ್ ಆಯುಕ್ತ ಕಛೆರಿಯಲ್ಲಿ ಅಣುಕು ಸಂದರ್ಶನವನ್ನು ಏರ್ಪಡಿಸಿದ್ದಾರೆ.

ಯುಪಿಎಸ್‍ಸಿ ಮುಖ್ಯ ಪರೀಕ್ಷೆ ಬರೆದು ಫೆಬ್ರವರಿ 19ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಈ ಸಂದರ್ಶನ ಏರ್ಪಡಿಸಿದ್ದು, ಇದರ ಸದುಉಪಯೋಗವನ್ನು ಬಳಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ. ಗೋಪಿನಾಥನ್, ಬಳ್ಳಾರಿಯ ಸಿಇಒ ರಾಜೇಂದ್ರ, ಕೊಪ್ಪಳದ ಸಿಇಒ ವೆಂಕಟ್ ರಾಜ್, ಚಿಕ್ಕಬಳ್ಳಾಪುರ ವಿಭಾಗಾಧಿಕಾರಿ ಗುರುದತ್ ಹೆಗಡೆ, ಬೆಂಗಳೂರು ಲೋಕಾಯುಕ್ತ ಎಸ್‍ಪಿ ಎಂ.ಎಸ್. ಮೊಹಮ್ಮದ್ ಸುಜೀತ್ ಹಾಗೂ ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಲಿದ್ದಾರೆ.

ಈ ಅಣಕು ಸಂದರ್ಶನದಲ್ಲಿ ಭಾಗವಹಿಸಲು www.yesupse.com ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿರುತ್ತದೆ. ಸದಾ ಲವಲವಿಕೆಯಿಂದ ದುಷ್ಟರಿಗೆ ಸಿಂಹ ಸ್ವಪ್ನವಾಗಿರುವ ರವಿ ಡಿ. ಚೆನ್ನಣ್ಣವರ್ ಈ ಕಾರ್ಯ ಯಶಸ್ವಿಯಾಗಲಿ. ಯುವ ಸಮೂಹ ಇಂತವಹರ ಆದರ್ಶವನ್ನು ಮೈಗೂಡಿಸಿಕೊಂಡು ಉನ್ನತ ಹುದ್ದೆಗಳಿಗೆ ಆಯ್ಕೆಯಾಗಲಿ.

-Naveen Ramanagara

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!