ಸುದ್ದಿ

ಸಾವಯವ ಕೃಷಿಕ ನಾಡೋಜ ನಾರಾಯಣ ರೆಡ್ಡಿ ಇನ್ನಿಲ್ಲ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಮರಳೇನಹಳ್ಳಿಯ ಸಾವಯವ ಕೃಷಿಕ ನಾಡೋಜ ಎಲ್ ನಾರಾಯಣ ರೆಡ್ಡಿ (80)ಅವರು ನಿಧನರಾಗಿದ್ದಾರೆ.

ನಾರಾಯಣರೆಡ್ಡಿಯವರು ಸಾಮಾನ್ಯ ಬಡ ರೈತಕುಟುಂಬದಲ್ಲಿ ಹುಟ್ಟಿ ಹಂತ ಹಂತವಾಗಿ ಉನ್ನತ ಮಟ್ಟಕ್ಕೆ ಬೆಳೆದವರು, ಹರೆಯದಲ್ಲಿ ಕೇವಲ 2 ರೂ.ಕೂಲಿಗೆ ಹೋಟೇಲ್‍ನಲ್ಲಿ ಕೆಲಸ ಮಾಡಿದ್ದ ವರ್ತರೂ ನಾರಾಯಣ ರೆಡ್ಡಿ ಕೃಷಿಯತ್ತ ಬಂದು ತಮ್ಮ ಬಳಿಇದ್ದ ಕೇವಲ 1 ಎಕರೆ ಜಮೀನಿನಲ್ಲಿ ರಾಗಿ ಬೆಳೆ ಬೆಳೆಯುವ ಮೂಲಕ ಕೃಷಿ ಬದುಕಿಗೆ ತಮ್ಮನ್ನು ತೊಡಗಿಸಿಕೊಂಡಿದ್ದರು.

ಜಪಾನಿನ ಮಸನವೋ ಫುಕುವೋಕಾ ಅವರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ಸಿಯಾಗಿದ್ದ ನಾರಾಯಣ ರೆಡ್ಡಿಅವರು ನಾಡಿನ ರೈತರಿಗೆ ಮಾಗದರ್ಶಿಯಾಗಿದ್ದರು. ಕೆಪಿ ಪೂರ್ಣ ಚಂದ್ರತೇಜಸ್ವಿ ಅವರ ಮೇಲು ಫುಕುವೋಕಾ ಪ್ರಭಾವ ಬೀರಿದ್ದರು. ತೇಜಸ್ವಿ ಅವರ ಸಹಜ ಕೃಷಿ ಪುಸ್ತಕದಲ್ಲಿ ವರ್ತೂರು ನಾರಾಯಣರೆಡ್ಡಿ ಅವರ ಸಾವಯವ ಕೃಷಿ ಬಗ್ಗೆ ಪ್ರಸ್ತಾಪಮಾಡಿದ್ದರು.


ಸರಳತೆಯನ್ನು ಮೈಗೂಡಿಸಿಕೊಂಡಿದ್ದ ವರ್ತೂರು ನಾರಾಯಣ ರೆಡ್ಡಿ ನೂರಾರು ಕೋಟಿಯ ಒಡೆಯರಾಗಿದ್ದು ರೋಚಕ ಇತಿಹಾಸ ಇದರ ಹಿಂದೆ ಅವರ ಶ್ರಮ, ಪ್ರಯತ್ನ, ತ್ಯಾಗ ಕುಟುಂಬದವರ ಪ್ರೋತ್ಸಾಹ ಇದೆ. ಇವರು ಓದಿದ್ದು ಕಡಿಮೆಯಾದರು ಕೂಡ ಇವರು ಅಪಾರ ಜ್ಞಾನವಂತರು ಮಾತಿಗೆ ನಿಂತರೆ ಎಲ್ಲರೂ ನಿಬ್ಬೆರಗಾಗುವಂತೆ ಸಾವಯವ ಕೃಷಿಯಬಗ್ಗೆ ಮಾತನಾಡುತ್ತಿದ್ದರು.

ನಾರಾಯಣರೆಡ್ಡಿಯವರ ಭಾಷಣದ ವಿಡಿಯೋಗಳು ಯೂಟ್ಯೂಬ್‍ನಲ್ಲಿ ಇದ್ದು, ಸಾರ್ವಕಾಲಿಕವಾಗಿ ಅದರ ಉಪಯೋಗವನ್ನು ಪ್ರತಿಯೊಬ್ಬರು ಪಡೆಯಬಹುದಾಗಿದೆ. ಪ್ರಜಾವಾಣಿ ಪತ್ರಿಕೆಯಲ್ಲಿ ಕೃಷಿಗೆ ಸಂಬಂಧಿಸಿದ ಪ್ರಶ್ನೋತ್ತರ ಅಂಕಣದಲ್ಲಿ ರೈತರ ಸಮಸ್ಯೆಗಳಿಗೆ ಸರಳ ಪರಿಹಾರ ನೀಡುವ ಮೂಲಕ ರೈತರಿಗೆ ಮಾರ್ಗದರ್ಶಿಯಾಗಿದ್ದರು.

ಸರಳತೆಯ ಬದುಕನ್ನು ಬದುಕಿ ಸಾವಯುವ ಕೃಷಿಯಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದ ನಾರಾಯಣರೆಡ್ಡಿಯವರು ಪ್ರತಿಯೊಬ್ಬರಿಗೂ ಆದರ್ಶ. ನಾರಾಯಣರೆಡ್ಡಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿಯ ಈ ನುಡಿನಮನ ಅರ್ಪಣೆ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!