ನಮ್ಮ ರಾಮನಗರ

ಬೆಂಗಳೂರಿನ ಜನ ಬದುಕುಳಿಯಬೇಕಾದರೆ ಕನಿಷ್ಠ 20 ದಿನ ಲಾಕ್‍ಡೌನ್ ಮಾಡಿ.

ಕೋರೊನಾ ಅಟ್ಟ ಹಾಸ ಎಲ್ಲೆಡೆ ವ್ಯಾಪಿಸಿದ್ದು ಸಿಲಿಕಾನ್ ಸಿಟಿ ಅತ್ಯಂತ ಅಪಾಯಕಾರಿಯಾಗಿದೆ. ದಿನೇ ದಿನೇ ಸೋಂಕಿತರು ಹೆಚ್ಚಾಗುತ್ತಿದ್ದು. ಬೆಂಗಳೂರಿನ ಜನ ಪ್ರತಿ ಕ್ಷಣ ಆತಂಕದಲ್ಲಿ ಜೀವಿಸುವಂತಾಗಿದೆ. ಕೊವೀಡ್ ಆಸ್ಪತ್ರೆಗಳ ಕರ್ಮಕಾಂಡವನ್ನು ಜನ ಮಾಧ್ಯಮಗಳಲ್ಲಿ ನೋಡಿ ಬೆಚ್ಚಿಬಿಳುತ್ತಿದ್ದಾರೆ.

HD Kumaraswamy Says He 'Worked Like a Slave' for Congress But ...

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬೆಂಗಳೂರಿನ ಜನ ಬದುಕುಳಿಯಬೇಕಾದರೆ ಕನಿಷ್ಠ 20 ದಿನ ಲಾಕ್‍ಡೌನ್ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಹೆಚ್.ಡಿ.ಕೆ ಯ ಪೂರ್ಣ ಟ್ವಿಟ್ ಈ ರೀತಿ ಇದೆ.


ಜನರ ಪ್ರಾಣದ ಜೊತೆ ಚೆಲ್ಲಾಟ ನಿಲ್ಲಿಸಿ. ಕೆಲವೇ ಪ್ರದೇಶಗಳಲ್ಲಿ ಸೀಲ್ ಡೌನ್ ಲಾಕ್‍ಡೌನ್ ಮಾಡಿದರೆ ಪ್ರಯೋಜನವಿಲ್ಲಜ. ಬೆಂಗಳೂರು ನಿವಾಸಿಗಳು ಬದುಕುಳಿಯಬೇಕಾದರೆ ಈ ಕೂಡಲೇ ಕನಿಷ್ಠ 20 ದಿನ ಸಂಪೂರ್ಣ ಲಾಕ್‍ಡೌನ್ ಮಾಡಿ. ಇಲ್ಲವಾದಲ್ಲಿ ಬೆಂಗಲೂರು ಮತ್ತೊಂದು ಬ್ರೆಜಿಲ್ ಆಗಲಿದೆ. ಜನರ ಆರೋಗ್ಯ ಮುಖ್ಯವೇ ಹೊರತು ಆರ್ಥಿಕತೆಯಲ್ಲ. ಬಡವರು, ಕಾರ್ಮಿಕರಿಗೆ ಕೂಡಲೇ ಪಡಿತರ ವಿತರಿಸಿ.

ರಾಜ್ಯದ 50ಲಕ್ಷ ಮಂದಿ ಶ್ರಮಿಕ ವರ್ಗಕ್ಕೆ ತಲಾ ಐದು ಸಾವಿರ ರೂಪಾಯಿ ಪರಿಹಾರ ನೀಡಬೇಕು. ಚಾಲಕರು. ನೇಕಾರರು, ಮಡಿವಾಳರು ಸೇರಿದಂತೆ ವಿವಿಧ ವರ್ಗಕ್ಕೆ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿರುವ ಪರಿಹಾರ ದಕ್ಕಿಲ್ಲ. ಬರಿ ಪ್ಯಾಕೇಜ್ ಘೋಷಣೆ ಮಾಡಿದರೆ ಸಾಲದು. ಅದರ ಅನುಷ್ಠಾನಕ್ಕೆ ತಕ್ಷಣ ಕಾಯೋನ್ಮುಖರಾಗಬೇಕು. ಪ್ಯಾಕೇಜ್ ಘೋಷಣೆ ಮಾಡಿ, ಸರ್ಕಾರ ಅಂಗೈಯಲ್ಲಿ ಅರಮನೆ ತೋರಿಸಬಾರದು.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!