ದೇಶದಲ್ಲಿ ಕೋರೊನಾ ಕಾಲಿಟ್ಟು ಜನತಾ ಕಪ್ರ್ಯೂ ಘೋಷಣೆಯಿಂದ ಲಾಕ್‍ಡೌನ್‍ಗಳು ಜಾರಿಯಾಗಿ ಮುಗಿಯುವವರೆಗೂ ಒಂದೇ ಒಂದು ಕೊರೊನಾ ಸೋಂಕು ಕಾಲಿಡದ ಜಿಲ್ಲೆಯಲ್ಲಿ ರಾಮನಗರವೂ ಒಂದಾಗಿತ್ತು. ಲಾಕ್‍ಡೌನ್ ತೆರೆವುಗೊಳಿಸಿದ ನಂತರ ಮಾಗಡಿ ಪಟ್ಟಣದಲ್ಲಿ ಒಬ್ಬ ಸೊಂಕೀತರು ಕಾಣಿಸಿಕೊಂಡು ಪ್ರಾರಂಭವಾದ ಸೋಂಕು ಇಂದು 148ಕ್ಕೆ ಬಂದು( 25.06.2020) ನಿಂತಿದೆ.
ಈ ಮಹಾನ್ ವ್ಯಕ್ತಿಯ ಸಾಧನೆಗಳನ್ನು ಓದಿ. ಅಚ್ಚರಿಯಾಗುತ್ತೆ.
ಗುರುವಾರ ರಾಮನಗರದ ಕೋವಿಡ್ 19 ಆಸ್ಪತ್ರೆಯಿಂದ 11 ಜನ ಸೋಂಕಿತರು ಗುಣಮುಖರಾಗುವ ಮೂಲಕ ಜಿಲ್ಲೆಯ ಜನತೆಗೆ ಧೈರ್ಯ ಬಂದಂತಾಗಿದೆ. ಜಿಲ್ಲೆಯಲ್ಲಿ ಕೋರೊನಾ ಸೋಂಕಿತರು ಶೀಘ್ರವಾಗಿ ಗುಣಮುಖರಾಗುತ್ತಿದ್ದು. ಇದು ನಿಜಕ್ಕೂ ಸಂತಸದ ವಿಷಯವಾಗಿದೆ.
ಗುಣಮುಖರಾಗಿ ಬಿಡುಗಡೆ ಹೊಂದಿದ ಸೋಂಕಿತರನ್ನು ಪುಷ್ಪ ನಮನದ ಮೂಲಕ ಜಿಲ್ಲಾಧಿಕಾರಿ, ಪೋಲಿಸ್ ಅಧೀಕ್ಷಕರು, ಆರೋಗ್ಯ ಅಧಿಕಾರಿಗಳು ಇಂದು ಬೀಳ್ಕೋಟ್ಟರು. ಪ್ರಸ್ತುತ ಜಿಲ್ಲೆಯಲ್ಲಿ 148 ಕೋರೊನಾ ಸೋಂಕಿತ ಪ್ರಕರಣಗಳಿದ್ದು, ಅದರಲ್ಲಿ ಒಟ್ಟು 17 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 127 ಸಕ್ರಿಯ ಪ್ರಕರಣಗಳಿದ್ದು. ಎಲ್ಲರ ಆರೋಗ್ಯವು ಸ್ಥಿರವಾಗಿದೆ. ಇಬ್ಬರೂ ಕೋರೊನಾ ಸೋಂಕಿತರು ಐ.ಸಿ.ಯೂ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.