ರೋಟರಿ ಸಿಲ್ಕ್ ಸಿಟಿ ರಾಮನಗರ ಸದಾ ಕ್ರೀಯಾಶೀಲವಾಗಿ ಒಂದಿಲ್ಲೊಂದು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬರುತ್ತಿರುವುದು ನಿಮ್ಮೆಲ್ಲರಿಗೂ ತಿಳಿದ ವಿಷಯ.
ಇತ್ತಿಚೇಗಷ್ಟೇ ಪೋಲೀಸ್ ಅಧೀಕ್ಷಕರ ಕಛೇರಿಯ ಆವರಣದಲ್ಲಿ ಇಂದಿರಾ ನಗರ ಕ್ಲಬ್ ಸಹಯೋಗದಲ್ಲಿ ಹಣ್ಣು ಬಿಡುವ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಮತ್ತು ದಿನಾಂಕ 25 ಜೂನ್ 2020ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗಾಗಿ ಸುಮಾರು 4000 ಮಾಸ್ಕ್‍ಗಳನ್ನು ರೋಟರಿ ಕ್ಲಬ್ ರಾಮನಗರ ಸಹಯೋಗದಲ್ಲಿ ವಿತರಣೆ ಹಾಗೂ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗಿತ್ತು.
ಇಂದು ರಾಮನಗರ ತಾಲ್ಲೂಕಿನ ಗ್ರಾಮೀಣ ಭಾಗದ ಹಿಂದುಳಿದ ಹಳ್ಳಿಗಳ ಸರ್ಕಾರಿ ಶಾಲೆಗಳಲ್ಲಿ 1ರಿಂದ 5ನೇ ತರಗತಿ ಓದುತ್ತಿರುವ ಮಕ್ಕಳಿಗೆ 250 ಜೊತೆ ಸಮವಸ್ತ್ರ ವಿತರಿಸಲು ( ಕೋವಿಡ್ ಹಿನ್ನೆಲೆ ಶಾಲೆಗಳು ರಜೆಯಿರುವ ಕಾರಣ) ಬಿ.ಇ.ಓ ಕಛೇರಿಯ ನಗರ ಕ್ಲಸ್ಟರ್ ಅಧಿಕಾರಿ ಶ್ರೀ ಮೃತ್ಯುಂಜಯರವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಶ್ರೀ ಎ.ಜೆ.ಸುರೇಶ್ ರೋ. ಮೂರ್ತಿ, ರೋ. ದೀಪಕ್, ರೋ. ರಾಜು ರೋ. ಪ್ರದೀಪ್ ಉಪಸ್ಥಿತರಿದ್ದರು.