ಮಹಿಳೆ ಇವತ್ತು ಬರೀ ನಾಕು ಗೋಡೆ ಮಧ್ಯೆಯಿಲ್ಲ. ದೇಶದ ಚುಕ್ಕಾಣಿ ಹಿಡಿಯುವ ಮಟ್ಟಕ್ಕೆ ಬೆಳೆದಿದ್ದಾಳೆ. ಅವಳ ಶಕ್ತಿಯನ್ನ ಇನ್ನಷ್ಟು ಹೆಚ್ಚು ಮಾಡಲು.. ಆಕೆಗೆ ಸಿಗಬೇಕಾದ ಗೌರವ ಸಿಗಲು ಇಲ್ಲೊಂದು ತಂಡ ವಿಶ್ವಪರ್ಯಟನೆ ಮಾಡ್ತಿದೆ.ಮಹಿಳೆಯರನ್ನ ಗೌರವದಿಂದ ಕಾಣಿ ಅನ್ನೋ ಜಾಗೃತಿ ಮೂಡಿಸಲು ಮೂವರು ಯಂಗ್ ಲೇಡಿಗಳು ರೆಡಿಯಾಗಿದ್ದಾರೆ. ಉತ್ತರ ಪ್ರದೇಶದ ಸುರತ್ ನ ಈ ಮೂವರು ಬೈಕ್ ಮೇಲೆ ಬರೋಬ್ಬರಿ 23 ರಾಷ್ಟ್ರಗಳನ್ನ ಸುತ್ತಲು ರೆಡಿಯಾಗಿದ್ದಾರೆ. ಈ ಮೂಲಕ ‘ನಾರಿ ಗೌರವ್’ ಕ್ಯಾಂಪಿಯೇನ್ ಶುರು ಮಾಡಲಿದ್ದಾರೆ.
ಕಾಫಿ ಡೇ ಎಂ.ಡಿ. ಸಿದ್ದಾರ್ಥ್ ನಾಪತ್ತೆ ಕೇಸ್? ಏನಾಗಿದೆ ಓದಿ.
ಜೂನ್ 5ರಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ, ವಾರಣಾಸಿ ಮೂಲಕ ಡಾ.ಸಾರಿಕಾ ಮೆಹ್ತಾ, ಜಿನಾಲ್ ಶಾ ಹಾಗೂ ರುತಾಲಿ ಪಟೇಲ್ ತಮ್ಮ ಪಯಣ ಶುರು ಮಾಡಲಿದ್ದಾರೆ. ಡಾ.ಸಾರಿಕಾ ಮೆಹ್ತಾ, ‘ಬೈಕ್ ಕ್ವೀನ್’ ಅನ್ನೋ ಸಂಸ್ಥೆ ಹುಟ್ಟು ಹಾಕಿದ್ದಾರೆ. ಇದರ ಮುಖೇನ ಮಹಿಳೆಯರ ರಕ್ಷಣೆ ಹಾಗೂ ಅವರಿಗೆ ಸಿಗಬೇಕಾದ ಗೌರವ ಕುರಿತು ಅಭಿಯಾನ ಶುರು ಮಾಡಿದ್ದಾರೆ.
ಈ ಪಿಯಾನೋ ನುಡಿಸಲು ಮೂರು ಮಹಡಿ ಹತ್ತಬೇಕು!
ಭಾರತ, ನೇಪಾಳ, ಭೂತಾನ್, ಮೈನ್ಮಾರ್, ಚೀನಾ, ಕರ್ಗಿಸ್ಥಾನ, ಉಜ್ಬೇಕೀಸ್ಥಾನ್, ಕಝಕಿಸ್ಥಾನ್, ರಷ್ಯಾ, ಲಥಿವಾ, ಜರ್ಮನಿ, ಆಸ್ಟ್ರೀಯಾ, ಸ್ವಿರ್ಜರ್ ಲೆಂಡ್, ಫ್ರಾನ್ಸ್, ನೆದರ್ ಲೆಂಡ್, ಸ್ಪೇನ್ ಸೇರಿದಂತೆ ಏಷ್ಯಾ, ಯೂರೋಪ್ ಹಾಗೂ ಆಫ್ರಿಕಾ ಖಂಡಗಳ 23 ದೇಶಗಳನ್ನ ಸುತ್ತುವ ಮೂಲಕ ಈ ಅಭಿಯಾನ ನಡೆಸಲಿದ್ದಾರೆ. ಈ ವೇಳೆ ಭಾರತೀಯ ಕುಟುಂಬಗಳು, ಭಾರತೀಯ ರಾಯಭಾರಿಗಳನ್ನ, ಹೈಕಮಿಷನರ್ ಗಳನ್ನ, ಬೈಕ್ ರೈಡರ್ಸ್ ಭೇಟಿಯಾಗಲಿದ್ದಾರೆ.
ವೈದ್ಯ ಸಾರಿಕಾ ಮೆಹ್ತಾ ಈ ಹಿಂದೆ, ವಿಶ್ವ ಆರೋಗ್ಯ ಸಂಸ್ಥೆಯ ಸಹಾಯದಿಂದ ಯೂರೋಪ್, ಆಫ್ರಿಕಾ ಹಾಗೂ ರಷ್ಯ ದೇಶಗಳಲ್ಲಿ ಅಭಿಯಾನ ಕೈಗೊಂಡಿದ್ದರು. ಇದೀಗ ಇವಳ ಜೊತೆ ಗೃಹಣಿ ಜಿನಲ್ ಶಾ ಹಾಗೂ ವಿದ್ಯಾರ್ಥಿನಿ ರುತಾಲಿ ಪಟೇಲ್ ಸೇರಿಕೊಂಡಿದ್ದಾರೆ. ಇದು ಇವರಿಗೆ ಮೊದಲ ವಿಶ್ವಪರ್ಯಟನೆಯ ಅಭಿಯಾನವಾಗಿದೆ.