ಸುದ್ದಿ

ಕಾಫಿ ಡೇ ಎಂ.ಡಿ. ಸಿದ್ದಾರ್ಥ್ ನಾಪತ್ತೆ ಕೇಸ್? ಏನಾಗಿದೆ ಓದಿ.

ದೇಶ ಕಂಡ ವರ್ಣರಂಜಿತ ರಾಜಕಾರಣಿ ಎಸ್. ಎಂ. ಕೃಷ್ಣಾ ಅಳಿಯ ಕಾಫಿ ಡೇ ಎಂ.ಡಿ. ಸಿದ್ದಾರ್ಥ್ ನಿನ್ನೆ (29.07.2019) ಮಂಗಳೂರಿನ ಸಮೀಪ ನೇತ್ರಾವತಿ ನದಿ ಸೇತುವೆ ಬಳಿಯಲ್ಲಿ ನಾಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ಮೂಡಿದ್ದು, ತೀವ್ರತರವಾದ ಶೋಧ ಕಾರ್ಯ ಮುಂದುವರಿದಿದೆ.

78ರಲ್ಲೂ ಭರ್ಜರಿ ಸ್ಟೆಪ್ಸ್ ಹಾಕ್ತಾಳೆ ಅಜ್ಜಿ! ಉತ್ಸಾಹ ಅಂದ್ರೆ ಇದು. ಓದಿ


ನಿನ್ನೇ ತನ್ನ ಚಾಲಕನೊಂದಿಗೆ ಇನೋವ್ ಕಾರಿನಲ್ಲಿ ಬೆಂಗಳೂರಿನಿಂದ ಹೊರಟ ಸಿದ್ದಾರ್ಥ್ ಸಕಲೇಶಪುರಕ್ಕೆ ಹೋಗು ಎಂದೇಳಿ ಸಕಲೇಶಪುರ ತಲುಪುತ್ತಿದ್ದಂತೆ ಮನಸ್ಸು ಬದಲಿಸಿ ಮಂಗಳೂರಿಗೆ ಹೋಗು ಎಂದು ಚಾಲಕನಿಗೆ ಹೇಳಿದ್ದಾರೆ. ನಂತರ ಕೇರಳ ರಸ್ತೆ ಹೋಗುವ ಮಾರ್ಗದಲ್ಲಿ ಕಾರು ನಿಲ್ಲಿಸಿ ನೇತ್ರಾವತಿ ನದಿಯ ಸೇತುವೆ ಬಳಿ ವಾಕಿಂಗ್ ಮಾಡುವುದಾಗಿ ಹೇಳಿ ಚಾಲಕನನ್ನು ಕಾರಿನಲ್ಲೆ ಇರು ಎಂದು ಹೋಗಿದ್ದಾರೆ. ತುಂಬಾ ಸಮಯವಾದರೂ ಸಾಹೇಬ್ರೂ ಬರಲಿಲ್ಲವೆಂದು ಚಾಲಕ ಕರೆ ಮಾಡಿದಾಗ ಸಿದ್ದಾರ್ಥ್ ಪೋನ್ ಸ್ವೀಚ್ ಆಪ್ ಆಗಿತ್ತು. ಇದರಿಂದ ಗಾಬರಿಗೊಂಡ ಚಾಲಕ ಮನೆಯವರಿಗೆ ಮಾಹಿತಿ ನೀಡಿ ಸಮೀಪದ ಪೋಲಿಸ್ ಠಾಣೆಗೆ ದೂರು ನೀಡಿದ್ದಾನೆ.

ನೀರು ಕುಡಿಯುವುದರಿಂದ ಆಗುವ ಪ್ರಯೋಜನ ಓದಿ

ಸಿದ್ದಾರ್ಥ್ ಒಬ್ಬ ಶಿಸ್ತಿನ ಮತ್ತು ಸಂಯಮದ ವ್ಯಕ್ತಿಯಾಗಿದ್ದು ಸಾವಿರಾರು ಮಂದಿಗೆ ಉದ್ಯೋಗದಾತರಾಗಿದ್ದಾರೆ. ಕಾಫಿ ಡೇಯಲ್ಲಿ ಕನ್ನಡಿಗರಿಗೆ ಆದ್ಯತೆ ಕೊಟ್ಟು ಕನ್ನಡಿಗರ ಹೃದಯಗೆದ್ದ ಅಪ್ರತಿಮ ಉದ್ಯಮಿ ಸಿದ್ದಾರ್ಥ್ ಸಾವಿರಾರು ಎಕರೆ ಕಾಫಿ ತೋಟ ಸಾವಿರಾರು ಟನ್ ಕಾಫಿ ಉತ್ಪಾದನೆ ಎಕ್ಸ್‍ಪೋರ್ಟ್ ವ್ಯಾವಹಾರ ಇವೆಲ್ಲವನ್ನೂ ಅತ್ಯಂತ ಶ್ರದ್ದೆಯಿಂದ ಕಟ್ಟಿದ್ದ ಸಿದ್ದಾರ್ಥ್ ನಾಪತ್ತೆಯಾಗಿದ್ದು, ಅವರ ಹುಡುಕಾಟಕ್ಕಾಗಿ ಮುಳುಗು ತಜ್ಞರು ಶೋದ ನಡೆಸಿದ್ದಾರೆ. ಇದಲ್ಲದೆ ಕೇಂದ್ರ ಸರ್ಕಾರದ ನೇರವನ್ನು ಕೋರಿ ಶೋಧನಾ ಕಾರ್ಯಕ್ಕೆ ಹೇಲಿಕಾಪ್ಟರ್ ಬಳಕೆ ಕೂಡ ಮಾಡಲಾಗುತ್ತಿದ್ದು, ಅತ್ಯಂತ ಗಂಭೀರ ಪ್ರಕರಣ ಇದಾಗಿದೆ.


ಕೆಲ ದಿನಗಳ ಹಿಂದೆ ಆದಾಯ ತೆರಿಗೆ ತನಿಖೆಗೆ ಒಳಪಟ್ಟಿದ್ದ ಸಿದ್ದಾಥ್ ತುಂಬಾ ಮನನೊಂದಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಬಗ್ಗೆ ಅವರು ತಮ್ಮ ಕಾಫಿ ಡೇ ಆಡಳಿತ ಮಂಡಳಿಗೆ ಮತ್ತು ಸಿಬ್ಬಂದಿಗೆ ಬರೆದ ಪತ್ರದಲ್ಲಿ ತುಂಬಾ ಭಾವನಾತ್ಮಕವಾಗಿ ತಮ್ಮ ಮನದ ನೋವುಗಳನ್ನು ಬರೆದಿದ್ದಾರೆ. ಸಾಲಕ್ಕೆ ಎದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರ ಅಥವಾ ಇನ್ನೇನಾದರು ಆಗಿದೀಯಾ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಒಟ್ಟಾರೆ ಸಿದ್ದಾರ್ಥ ರವರ ಕಣ್ಮರೆಯಿಂದ ಎಸ್.ಎಂ. ಕೃಷ್ಣರವರ ಮನೆಯಲ್ಲಿ ನೀರವ ಮೌನ ಆವರಿಸಿದೆ. ಸಾಲಕ್ಕಿಂತ ಅವರ ಆಸ್ತಿ ಮೌಲ್ಯ ಮೂರು ಪಟ್ಟು ಹೆಚ್ಚಿದ್ದು ಸಾಲಕ್ಕೆ ಹೆದರಿ ಈ ರೀತಿ ಮಾಡಿಕೊಂಡಿರುವುದಿಲ್ಲ ಎಂಬುದು ಆಪ್ತರ ವಾದ.

 

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!