ನಮ್ಮ ಸುತ್ತಲು ಒಮ್ಮೆ ಶ್ರೀಮಂತರ ಬದುಕನ್ನು ಗಮನಿಸಿದಾಗ ಸಾಕಷ್ಟು ಮಂದಿ ಶ್ರೀಮಂತಿಯ ಪ್ರದರ್ಶನವನ್ನು ತೋರಿಸುತ್ತಾ ಅಹಂನಿಂದ ಬದುಕುತ್ತಿರುವುದು ನೋಡಿರುತ್ತೇವೆ ಇಂತವರ ನಡುವೆ ಸಿರಿವಂತರಾಗಿದ್ದು ಕೂಡ ಸರಳತೆಯಲ್ಲಿ ಬದುಕುತ್ತಿರುವ ಇನ್ಪೋಷಿಸ್ ಫೌಂಡೇಷನ್ ನ ಸುಧಾಮೂರ್ತಿಯವರ ಬದುಕು ಎಲ್ಲರಿಗೂ ಮಾದರಿ.
ಸಾಕಷ್ಟು ಶ್ರೀಮಂತಿಕೆಯಿದ್ದರು ಸರಳತೆಯಿಂದ ಬದುಕನ್ನು ಬದುಕುತ್ತಿರುವ ಶ್ರೀಮತಿ ಸುಧಾಮೂರ್ತಿಯವರು ಎಲ್ಲರಿಗೂ ಮಾದರಿ ಮತ್ತು ಆದರ್ಶಮಯ ವ್ಯಕಿತ್ವ ಎಂದರೆ ಅತಿಶೋಕ್ತಿಯಲ್ಲ! ಇತ್ತಿಚೇಗೆ ಜೀ ವಾಹಿನಿ ನೋಡುತ್ತಿರಬೇಕಾದರೆ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು ಅದರಲ್ಲಿ ರಮೇಶ್ ಅರವಿಂದ್ ಸರಳವಾಗಿ ಸುಂದರವಾಗಿ ನಿರೂಪಣೆ ಮಾಡುತ್ತಿದ್ದರು. ಹೆಮ್ಮೆಯ ಕನ್ನಡತಿ ಪ್ರಶಸ್ತಿಯನ್ನು ಪಡೆಯಲು ಬಂದ ಸುಧಾಮೂರ್ತಿಯವರನ್ನು ಕಂಡು ರಮೇಶ್ ಅರವಿಂದ್ ಅಮ್ಮ ನಿಮ್ಮ ಸರಳತೆ ನೋಡಿದರೆ ತುಂಬಾ ಖುಷಿಯಾಗುತ್ತೇ. ಚಿತ್ರದಲ್ಲಿ ನೋಡುತ್ತಿದ್ದೇನೆ ಸಾಮಾನ್ಯರಂತೆ ಹೂ ಕಟ್ಟುತ್ತಿದ್ದಿರಿ, ಒಂದು ಚಿತ್ರದಲ್ಲಿ ತರಕಾರಿ ಹೆಚ್ಚುತ್ತಿದ್ದಿರಿ ಎಂದು ಅಭಿಮಾನದಿಂದ ಕೇಳಿದಾಗ ಸುಧಾಮ್ಮ ಹೇಳಿದ ಒಂದು ಮಾತು ಅಲ್ಲಿದ್ದ ಎಲ್ಲರಿಗೂ ನೀತಿ ಪಾಠದಂತಿತ್ತು.
ಮನುಷ್ಯನಿಗೆ ದುಡ್ಡು ಬಂದಾಗ ಮಾನವೀಯತೆ ಮರೆತು ಹೋಗಬಾರದು ಹಾಗಾಗಿ ನಾನು ಕೂಡ ಸರಳತೆಯಲ್ಲೆ ಖುಷಿಯನ್ನು ಪಡೆಯುತ್ತೇನೆ. ಸಣ್ಣ ಸಣ್ಣ ಕೆಲಸಗಳು ನಮ್ಮ ಆನಂದವನ್ನು ಹೆಚ್ಚಿಸುತ್ತವೆ. ರಾಯರ ಮಠದಲ್ಲಿ ತರಕಾರಿ ಹೆಚ್ಚುತ್ತೇನೆ. ವರ್ಷಕೊಮ್ಮೆ ತಿರುಪತಿಗೆ ಹೋಗಿ ಹೂ ವನ್ನು ಕಟ್ಟಿ ಬರುತ್ತೇನೆಂದರು ಇದು ಸುಧಾಮೂರ್ತಿಯವರ ಸರಳತೆಯ ಬದುಕು. ಅದಕ್ಕೆ ಅಲ್ವಾ ಸುಧಾಮ್ಮ ಎಲ್ಲರಿಗೂ ಅಚ್ಚು ಮೆಚ್ಚು.
ಈ ಲೇಖನ ಓದಿ ಸುಮ್ಮನಾಗಬೇಡಿ, ಲೈಕ್ ಮಾಡಿ ಶೇರ್ ಮಾಡಿ ನಮ್ಮ ಹೆಮ್ಮೆ ನಮ್ಮ ಸುಧಾಮೂರ್ತಿ ಸಮಸ್ತರಿಗೂ ತಲುಪಿಸಿ.