ಸಾಮಾನ್ಯವಾಗಿ ನಾವೆಲ್ಲರೂ ದೈಹಿಕವಾಗಿ ಗಟ್ಟಿಮುಟ್ಟಾಗಿರಲು ತುಂಬಾ ಇಷ್ಟಪಡುತ್ತೇವೆ. ದೈಹಿಕವಾಗಿ ಗಟ್ಟಿಯಾಗಬಹುದು ಆದರೆ ಮಾನಸಿಕವಾಗಿ ಗಟ್ಟಿಯಾಗುವುದು ಅಷ್ಟು ಸುಲಭವಲ್ಲ! ಆತ್ಮಬಲದ ಶಕ್ತಿಯ ಬಗ್ಗೆ ಇರುವ ಈ ಕಥೆ ನಿಮ್ಮ ಬದುಕನ್ನೇ ಬದಲಿಸಬಹುದು ಓದಿ.
ಒಬ್ಬ ರಾಜ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಆ ಆನೆ ಪ್ರತಿಯುದ್ದದಲ್ಲೂ ಮುನ್ನುಗ್ಗಿ ಧೈರ್ಯದಿಂದ ಯುದ್ದಭೂಮಿಯಲ್ಲಿ ರಾಜನಿಗೆ ಗೆಲುವನ್ನು ತಂದು ಕೊಡಲು ಶ್ರಮಿಸುತ್ತಿತ್ತು. ಪ್ರತಿ ಬಾರಿಯೂ ಆ ಅನೆಯಿಂದಾಗಿ ರಾಜ ಯುದ್ದದಲ್ಲಿ ಗೆಲುವಿನ ಸಿಹಿಯನ್ನು ಸವಿಯುತ್ತಿದ್ದ, ಹೀಗೆ ಕೆಲಸ ಮಾಡುತ್ತಿದ್ದ ಆನೆಗೂ ವಯಸ್ಸಾಗುತ್ತಾ ಬಂತು ಇದನ್ನು ಗಮನಿಸಿದ ರಾಜ ಆನೆಯನ್ನು ಇನ್ನೂ ಮುಂದೆ ಯುದ್ದಕ್ಕೆ ಕರೆದುಕೊಂಡು ಹೋಗುವುದು ಬೇಡವೆಂದು ತೀರ್ಮಾನಿಸಿ, ಆನೆಯ ಮೇಲಿನ ಅಕ್ಕರೆಯಿಂದ ಅದನ್ನು ಆಭಯಾರಣ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳುವಂತೆ ಸೈನಿಕರಿಗೆ ಸೂಚಿಸಿದ.
ಆನೆ ಕಾಲಕ್ರಮೇಣ ಮಂಕಾಗುತ್ತಾ ಬಂತು, ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಮೇಲೆಬರಲು ಸಾಧ್ಯವಾಗದೆ ಒದ್ದಾಡುತ್ತಿತ್ತು, ಇದನ್ನು ಗಮನಸಿದ ಸೈನಿಕರು ಆನೆಯನ್ನು ನೀರಿನಿಂದ ಮೇಲೆ ತರಲು ಪ್ರಯತ್ಸಿಸಿದರು ಆದರೂ ಆನೆ ಕೆಸರಿನಿಂದ ಮೇಲೆಳಲು ಆಗಲೇ ಇಲ್ಲ. ಈ ವಿಷಯವನ್ನು ರಾಜನ ಗಮನಕ್ಕೆ ತಂದಾಗ ತಕ್ಷಣ ಸೈನಿಕರೊಂದಿಗೆ ಆನೆ ಇದ್ದ ಸ್ಥಳಕ್ಕೆ ಬಂದ ರಾಜ ಚಿಂತಾಕ್ರಾಂತನಾದ ತುಂಬು ಪ್ರೀತಿಯ ಆನೆ ಕೆಸರಿನಲ್ಲಿ ಸಿಕ್ಕಿಕೊಂಡಿರುವುದು ರಾಜನ ಮನಸ್ಸಿಗೆ ತುಂಬ ಬೇಸರವಾಯಿತು. ಆಗ ತಕ್ಷಣ ಮಂತ್ರಿಯನ್ನು ಕರೆಯಿಸಿ ಏನಾದರು ಮಾಡಿ ಆನೆಯನ್ನು ಕೆಸರಿನಿಂದ ಮೇಲಕ್ಕೆ ಬರುವಂತೆ ಮಾಡಲು ಸೂಚಿಸಿದ. ತಕ್ಷಣ ಮಂತ್ರಿ ಈ ಸಣ್ಣ ಕೆಲಸಕ್ಕೆ ಇಷ್ಟೊಂದು ಚಿಂತೆ ಏಕೆ ರಾಜ ಎಂದು ನಗುತ್ತಾ ಸೈನಿಕರಿಗೆ ರಣ ಕಹಳೆಯನ್ನು ಮೊಳಗಿಸಲು ಸೂಚಿಸಿದ. ರಣ ಕಹಳೆಯ ಸದ್ದು ಆನೆಯ ಕಿವಿಗೆ ಬಿದ್ದೊಡನೆ ತನ್ನ ಆತ್ಮಬಲದಿಂದ ಆನೆ ಸಲಿಸಾಗಿ ಕೆಸರಿನಿಂದ ಮೇಲೆ ಬಂತು. ರಾಜನಿಗೆ ತುಂಬಾ ಖಷಿಯಾಯಿತು.
ಆಗ ಮಂತ್ರಿ ಹೇಳಿದ ಪ್ರಭು ಶರೀರ ಬಲವೊಂದೆ ಬದುಕಲ್ಲ ,ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು. ಆ ಸ್ಪೂರ್ತಿ ಬದುಕಲು ಪ್ರೇರೆಪಿಸಿದಾಗ ಮಾತ್ರ ಬದುಕುವ ಛಲ ಬರುತ್ತದೆ. ಆ ಸ್ಪೂರ್ತಿ ನಮ್ಮ ಮೇಲೆ ನಮ್ಮವರು ಇಟ್ಟಿರುವ ಭರವಸೆ, ಪ್ರೀತಿಗಳಿಂದ ಸಿಗುತ್ತದೆ. ಒಂದು ಭರವಸೆಯ ಮಾತು! ನಿಷ್ಕಲ್ಮಶ ನಗು, ಪ್ರೀತಿ ಇಷ್ಟೇ ಸಾಕು! ಧೈರ್ಯದಿಂದ ಬದುಕಲು.
ಈ ಕಥೆಯ ಮೂಲ ಗೊತ್ತಿಲ್ಲ ವಾಟ್ಸಪ್‍ನಲ್ಲಿ ಹರಿದಾಡುತ್ತಿತ್ತು! ಈ ಕಥೆ ನಿಮಗೆ ಮತ್ತು ನಿಮ್ಮ ಬದುಕಿಗೆ ಒಂದಿಷ್ಟು ಸ್ಪೂರ್ತಿಕೊಡಲಿ. ನಿಮ್ಮ ಅಂತ:ಶಕ್ತಿಯನ್ನು ಬಲಪಡಿಸಿಕೊಂಡು ಬದುಕಿನಲ್ಲಿ ಗೆಲ್ಲಲು ಹೊರಡಿ.
-ನವೀನ್ ರಾಮನಗರ