ಇಂದು ಗೆಳೆತನದ ದಿನ, ಪ್ರತಿ ವರ್ಷ ಸೆಪ್ಟಂಬರ್ ಮೊದಲ ಭಾನುವಾರ ಗೆಳೆತನದ ದಿನವನ್ನಾಗಿ ಪ್ರಪಂಚದ್ಯಾಂತ ಆಚರಿಸುತ್ತಾರೆ. ಗೆಳೆತನವೆಂಬುದು ನಿಜಕ್ಕೂ ರಕ್ತ ಸಂಬಂಧಗಳನ್ನು ಮೀರಿದ್ದು, ಗೆಳತನದಲ್ಲಿ ನಿಷ್ಕಲ್ಮಶವಾದ ಭಾವನೆ ಇದ್ದಾರೆ ನಿಜಕ್ಕೂ ಗೆಳೆತನ ಅತ್ಯಂತ ಶ್ರೇಷ್ಠವಾದದ್ದು ಎಂಬುದು ಎಲ್ಲರು ಒಪ್ಪಲೇ ಬೇಕಾದ ಅಂಶ. ಆದರೆ ನೈಜ ಗೆಳೆತನಗಳು ಕಡಿಮೆಯಾಗಿ ಉದ್ದೇಶಿತ ಗೆಳತನವೆಂಬುದು ಇತ್ತಿಚೇಗೆ ಹೆಚ್ಚಾಗುತ್ತಿದೆ. ಕಾರಣ ಇದು ವಾಟ್ಸ್‍ಪ್ ಮತ್ತು ಫೇಸ್‍ಬುಕ್ ಕಾಲ.
ಹೌದು ಅಪರಿಚಿತವಾಗಿ ವಾಟ್ಸ್‍ಪ್‍ನಲ್ಲಿ ಬಂದು ಬಿಳುವ ಒಂದು ಹಲೋ ಮೆಸೆಜ್‍ನಿಂದ ಗೆಳೆತನ ಶುರುವಾಗಿಬಿಡುತ್ತದೆ. ಫೇಸ್‍ಬುಕ್ ನಲ್ಲಿ ಅಪರಿಚಿತ ವ್ಯಕ್ತಿ ಕಳುಹಿಸುವ ಒಂದು ಫ್ರೇಡ್ಸ್ ರಿಕ್ವೇಸ್ಟ್ ಗೆಳೆತನದ ಪ್ರಾರಂಭಕ್ಕೆ ಮುನ್ನುಡಿ ಬರೆದು ಬಿಡುತ್ತದೆ. ಎಚ್ಚರಿಕೆಯಿರಲಿ ಸ್ನೇಹ, ಗೆಳೆತನವೆಂಬುದು ಪಾಸ್ಟ್ ಪುಡ್ ತರ ಸಿಗುವ ಸರಕಲ್ಲ! ಅದು ಪುಟ್ಟ ಗಿಡವಾಗಿ ಮರವಾಗುವ ಒಂದು ಕ್ರಿಯೆಯೆಂಬುದು ಸದಾ ನೆನಪಿರಲಿ. ನೈಜ ಗೆಳೆತನ ಮಾಡಿಕೊಳ್ಳುವುದಲ್ಲ, ಅದಾಗೇ ಅದು ಆಗುವುದು. ನಿಮಗೆ ಅಚ್ಚರಿಯಾದರು ಇದು ಸತ್ಯ.
ನಿಮ್ಮ ಬಾಲ್ಯವನೊಮ್ಮೆ ನೆನಪಿಸಿಕೊಳ್ಳಿ ಬಾಲ್ಯದ ಗೆಳೆಯರು/ಗೆಳತಿಯರು ಎಷ್ಟೋಂದು ಆತ್ಮಿಯರಾಗಿದ್ದರು, ಇಂದಿಗೂ ಅವರ ನೆನಪು ನಿಮ್ಮಿಂದ ಮಾಸಿ ಹೋಗಿರುವುದಿಲ್ಲ. ಎಷ್ಟೋ ಮಂದಿ ಇಂದಿಗೂ ಬಾಲ್ಯದ ಗೆಳೆಯರ ಜೊತೆ ಸಂಪರ್ಕದಲ್ಲಿರುತ್ತಾರೆ. ಕಾರಣ ಇಷ್ಟೇ ಅಲ್ಲಿ ನಿಷ್ಕಲ್ಮಶವಾದ ಪ್ರೀತಿ ಇತ್ತು, ಆತ್ಮೀಯತೆ ಇತ್ತು, ಗೆಳೆತನದ ಹಿಂದೇ ಯಾವುದೋ ಉದ್ದೇಶಗಳಿರಲಿಲ್ಲ ಅಲ್ಲಿ ಇದ್ದದ್ದು ಕೇವಲ ಗೆಳೆತನ ಅಷ್ಟೇ. ಆದರೆ ಬೆಳೆಯುತ್ತಾ ಬೆಳೆಯುತ್ತಾ ದೊಡ್ಡವರಾದ ಮೇಲೆ ಆಗುವ ಗೆಳೆತನಗಳ ಬಗ್ಗೆ ಸದಾ ಎಚ್ಚರಿಕೆ ಇರಲೇ ಬೇಕು ಏಕೆಂದರೆ ಗೆಳೆತನ ಬಯಸುವ ವ್ಯಕ್ತಿಯ ಹಿಂದೇ ಯಾವುದಾದರು ಉದ್ದೇಶವಿದೇಯ ಆ ಉದ್ದೇಶದಿಂದ ನಮಗೆ ಏನಾದರು ಹಾನಿಯಾಗುತ್ತದ ಎಂಬುದನ್ನು ಪರೀಕ್ಷಿಸಿಕೊಂಡು ಗೆಳೆತನವನ್ನು ಮಾಡಬೇಕು. ಏಕೆಂದರೆ ಪ್ರತಿಯೊಂದು ಪರಿಚಯವು ಗೆಳೆತನವಾಗುವುದಿಲ್ಲ. ಪರಿಚಯವಿಲ್ಲದೆ ಗೆಳೆತವೂ ಆಗುವುದಿಲ್ಲ. ಆದರೆ ಗೆಳೆತನ ಮಾಡುವ ಮುನ್ನ ಎಚ್ಚರಿಕೆಯಿಂದರಬೇಕು. ಇಲ್ಲದಿದ್ದರೆ ಸಾಕಷ್ಟು ಪಶ್ಚಾತಾಪ ಪಡಬೇಕಾಗುತ್ತದೆ.
ಒಮ್ಮೆ ಗೆಳೆಯ/ಗೆಳತಿ ಅಂತ ಒಪ್ಪಿಕೊಂಡ ಮೇಲೆ ಎಂದಿಗೂ ದ್ರೋಹ ಬಗೆಯುವ ಕೆಲಸ ಮಾಡಲೇ ಬಾರದು, ಗೆಳೆತನಕ್ಕೆ ಒಂದು ಗೌರವ ಸೀಗಬೇಕಾದರೆ ಗೆಳೆಯ/ಗೆಳತಿ ನಿಮ್ಮ ಜೊತೆ ಇಲ್ಲದೇ ಇದ್ದಾಗಲು ಅವರ ಬಗ್ಗೆ ಗೌರವಯುತವಾಗಿ ಮಾತನಾಡುವುದನ್ನು ಕಲಿತುಕೊಳ್ಳಿ, ಒಮ್ಮೆ ನಿಮ್ಮ ಸ್ನೇಹದ ಪ್ರಪಂಚದಲ್ಲಿ ಅವರಿಗೆ ಜಾಗಕೊಟ್ಟ ಮೇಲೆ ಅವರನ್ನು ಪ್ರಾಮಾಣಿಕತೆಯಿಂದ ಗೌರವಿಸಿ. ಇಲ್ಲವೆಂದರೆ ಅವರನ್ನು ಗೆಳೆಯ/ಗೆಳತಿ ಅಂತ ಯಾರೊಂದಿಗೂ ಹೇಳಿಕೊಳ್ಳಲೇಬಾರದು. ಯಾವುದೇನೆ ಇರಲಿ ಗೆಳೆತನವೆಂಬುದು ಅತ್ಯಂತ ಶ್ರೇಷ್ಟವಾದದ್ದು ಅದಕ್ಕೆ ಎಲ್ಲರೂ ಗೌರವ ಕೋಡುವುದನ್ನು ಕಲಿಯೋಣ.