ಚನ್ನಪಟ್ಟಣ :- ಪುನೀತ್ ರಾಜಕುಮಾರ್ ಅಭಿನಯದ ಗಂಧದಗುಡಿ ಚಲನಚಿತ್ರವನ್ನು ಶಾಲಾ ವಿದ್ಯಾರ್ಥಿಗಳಿಗೆ ವೀಕ್ಷಣೆ ಮಾಡಿಸುವುದರ ಮೂಲಕ ರೋಟರಿ ಟಾಯ್ಸ್ ಸಿಟಿ ಸಂಸ್ಥೆಯು ವಿಶಿಷ್ಟವಾಗಿ 67 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿತು .
ಪಟ್ಟಣದ ಮಂಗಳವಾರಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಗಳ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಶನಿವಾರ ಪಟ್ಟಣದ ಸ್ಪನ್ ಸಿಲ್ಕ್ ಮುಂಭಾಗದಿಂದ ಪುನೀತ್ ಭಾವಚಿತ್ರ,ಕನ್ನಡ ಬಾವುಟಗಳನ್ನು ಹಿಡಿದು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಭುವನೇಶ್ವರಿ ಮಾತೆಗೆ ಜೈಕಾರ ಕೂಗುತ್ತಾ ಮೆರವಣಿಗೆ ಸಾಗಿ ಪಟ್ಟಣದ ಶಿವಾನಂದ ಚಿತ್ರಮಂದಿರಕ್ಕೆ ತೆರಳಿ ಎಲ್ಲಾ ವಿದ್ಯಾರ್ಥಿಗಳಿಗೂ ರೋಟರಿ ವತಿಯಿಂದ ಹಣ ಪಾವತಿಸಿ ಗಂಧದಗುಡಿ ಚಲಚಿತ್ರವನ್ನು ವೀಕ್ಷಣೆ ಮಾಡಿಸಲಾಯಿತು.ನಂತರ ಚಿತ್ರಮಂದಿರದ ಆವರಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರೋಟರಿ ಟಾಯ್ಸ್ ಸಿಟಿ ಶಾಖೆಯ ಅಧ್ಯಕ್ಷ ಬೈ ಶ್ರೀನಿವಾಸ್ ಮಾತನಾಡಿ ಕನ್ನಡದ ಅಸ್ಮಿತೆಗಾಗಿ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ. ನವೆಂಬರ್‌ನಲ್ಲಿ ಎಲ್ಲರಿಗೂ ಕನ್ನಡದ ನೆನಪಾಗುತ್ತದೆ. ನಾವು ಕೇವಲ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡಿಗರಾದರೆ ಸಾಲದು, ಪ್ರತಿನಿತ್ಯ ನಾವು ಕನ್ನಡಿಗರಾಗಬೇಕು. ಕನ್ನಡವೇ ನಮ್ಮ ಉಸಿರಾಗಬೇಕು ಎಂದರು .
ರೋಟರಿ ಟಾಯ್ಸ್ ಸಿಟಿ ಶಾಖೆಯ ಉಪಾಧ್ಯಕ್ಷ ಶೇಖರ್ ಲಾಡ್ ಮಾತನಾಡಿ ಕನ್ನಡ ನಮ್ಮ ನೆಲದ ಭಾಷೆ ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ,ಅನ್ಯ ಭಾಷೆ ಕಲಿಯುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ,ಆದರೆ ಮಾತೃಭಾಷೆ ಕನ್ನಡ ನಮ್ಮ ಉಸಿರಾಗಬೇಕು ,ಕನ್ನಡ ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಪರಂಪರೆ ಉಳಿಯಲು ಸಾಧ್ಯ ಆದ್ದರಿಂದ ಪ್ರತಿಯೊಬ್ಬರೂ ಕನ್ನಡದ ಉಳಿವಿಗೆ ಟೊಂಕ ಕಟ್ಟಿ ನಿಲ್ಲಬೇಕು ಎಂದರು. ರೋಟೇರಿಯನ್ ಯೋಗೇಶ್ ಚಕ್ಕೆರೆ ಮಾತನಾಡಿ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು. ಪ್ರತಿಯೊಬ್ಬರು ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲಿಯೇ ಮಾತನಾಡುವುದು, ಬರೆಯುವುದು ಹಾಗೂ ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುವುದು ಹಾಗೂ ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡವನ್ನು ಕಲಿಸುವ ಮೂಲಕ ನಮ್ಮ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ, ಬೆಳೆಸುವ ಸಂಕಲ್ಪ ಮಾಡಬೇಕು. ಕನ್ನಡ ಭಾಷೆ ನಮ್ಮ ಮನದೊಳಗೆ ಸದಾ ಹಸಿರಾಗಿರಬೇಕು. ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು .
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ನಿತಿನ್ ,ಖಜಾಂಚಿ ಸಮೀಕ್ಷಾ, ಕ್ಲಬ್ ಅಡ್ವೈಸರ್ ಬಿ .ಎಂ. ನಾಗೇಶ್, ನಗರಸಭಾ ಸದಸ್ಯರಾದ ,ಕಂಠಿ ,ಚಂದ್ರು , ಪದಾಧಿಕಾರಿಗಳಾದ ಪ್ರಕಾಶ್ ,ಜಯರಾಮ್ , ಗಂಗೆದೊಡ್ಡಿ ಬೋರೇಗೌಡ , ಕಿರಣ್ , ರಘು (ಐಟಿಸಿ), ಶ್ರೀನಿವಾಸ್ ಮೂರ್ತಿ ,ರಾಮಸ್ವಾಮಿ, ಮಾಸ್ತಿ ಗೌಡ ,ತೇಜಸ್ ,ಅರ್ಜುನ, ಧನುಷ್ ,ಚಂದು ,ಗಂಗಾಧರ್ , ವೈ.ಟಿ.ಹಳ್ಳಿ ಶಿವು, ಮಹದೇವ ,ದಿಲೀಪ್ ,ನಂದೀಶ್ ,ಚಿಕ್ಕವಿಠಲೇನಹಳ್ಳಿ ಲೋಕೇಶ್, ಮಂಗಳವಾರಪೇಟೆ ಶಾಲೆಯ ಮುಖ್ಯ ಶಿಕ್ಷಕರಾದ ಬಸವರಾಜು ,ಶಿಕ್ಷಕರಾದ ರಂಗನಾಥ್ ,ಈರಾನಾಯಕ್ , ಭವ್ಯ, ಅನುಸೂಯ,ಸುನಿತಾ , ರೇಣುಕಾ, ಪುಟ್ಟಪ್ಪ ,ರಾಜಲಕ್ಷ್ಮಿ ಸೇರಿದಂತೆ ರೋಟರಿ ಸಂಸ್ಥೆಯ್ ಹಲವರು ಉಪಸ್ಥಿತರಿದ್ದರು . ಸಂಸ್ಥೆ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.