ನಮ್ಮ ರಾಮನಗರ: ಬಿಡದಿ ಸುದ್ದಿ: ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕ ( ಅಸಿಸ್ಟೆಂಟ್ ಕಂಟ್ರೋಲರ್ )ಹುದ್ದೆಗೆ ಬಿಡದಿ ಹೋಬಳಿ ಹೆಜ್ಜಾಲ ಸಮೀಪದ ಜುಟ್ಟನಪಾಳ್ಯ ಗ್ರಾಮದ ಬಿ.ಶಿಲ್ಪಾ ಆಯ್ಕೆಯಾಗಿದ್ದಾರೆ.
ಬಸವರಾಜು ಮತ್ತು ಜಯಲಕ್ಷ್ಮಿ ಎಂಬ ಟೈಲರ್ ದಂಪತಿಗಳ ಪುತ್ರಿ ಬಿ.ಶಿಲ್ಪಾ ಅವರು ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕೆಎಎಎಸ್ ಪರೀಕ್ಷೆಯಲ್ಲಿ ಒಟ್ಟು 910.75 ಅಂಕ ಗಳಿಸಿ ಅಂತಿಮ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬಿ.ಶಿಲ್ಪಾ ಅವರು ಬೆಂಗಳೂರಿನ ಬಸವನಗುಡಿ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಬಿ.ಕಾಂ ಪದವಿ ಪರೀಕ್ಷೆಯಲ್ಲಿ 5ಚಿನ್ನದ ಪದಕ ಪಡೆದಿದ್ದರು. 2018-19ನೇ ಸಾಲಿನಲ್ಲಿ ಬೆಂಗಳೂರು ವಿವಿ ನಡೆಸಿದ ಎಂ.ಕಾಂ ಪರೀಕ್ಷೆಯಲ್ಲೂ 5 ಬಂಗಾರದ ಪದಕ ಗಳಿಸಿದ್ದರು. ಓದುವ ಎಲ್ಲಾ ಮಕ್ಕಳಿಗೂ ಇವರು. ಸ್ಪೂರ್ತಿಯಾಗಿದ್ದಾರೆ.
News Credit: vk