ಕೋವಿಡ್ 19 ಸೋಂಕು ತಡೆಯುವ ನಿಟ್ಟಿನಲ್ಲಿ ಲಾಕ್‍ಡೌನ್ ಅನಿವಾರ್ಯವಾದ ಈ ಸಂದರ್ಭದಲ್ಲಿ ರಕ್ತದ ಅಭಾವ ಸಾಕಷ್ಟಿತ್ತು ಇದನ್ನು ಮನಗಂಡ ಆರ್ಯವೈಶ್ಯ ಮಹಾಸಭಾವತಿಯಿಂದ ವಾಸವಿ ಜಯಂತಿ ಅಂಗವಾಗಿ ರಕ್ತದಾನ ಶಿಬಿರವನ್ನು ಎಲ್ಲೆಡೆಯೂ ಆಯೋಜಿಸುವಂತೆ ಕರೆನೀಡಲಾಗಿತ್ತು. ಅದರಂತೆ ರಾಮನಗರದಲ್ಲಿ ವಾಸವಿ ವಿದ್ಯಾನಿಕೇತನ ಟ್ರಸ್ಟ್ ಮತ್ತು ರೋಟರಿ ಸಿಲ್ಕ್ ಸಿಟಿ ಸಹಯೋಗದಲ್ಲಿ ಮತ್ತು ಆರ್ಯವೈಶ್ಯ ಸಂಘಟನೆಗಳೊಂದಿಗೆ ನಗರದ ಕನ್ನಿಕಾ ಮಹಲ್‍ನಲ್ಲಿ ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಈ ರಕ್ತದಾನ ಶಿಬಿರವನ್ನು ಆರ್.ಪಿ. ರವಿಶಂಕರ್ ಅಧ್ಯಕ್ಷರು ಆರ್ಯವೈಶ್ಯ ಮಹಾಸಭಾ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘಟನೆಗಳ ಪ್ರಮಖರಾದ ಕೆ.ಆರ್. ನಾಗೇಶ್, ಕೆ.ವಿ. ಉಮೇಶ್, ಜಿಲ್ಲಾ ಆರೊಗ್ಯ ಇಲಾಖೆಯ ರಕ್ತನಿಧಿ ವಿಭಾಗದ ಉಸ್ತುವಾರಿ ಡಾ: ಕುಮಾರ್, ಅಧಿಕಾರಿ ನಳಿನಾ, ರೋಟರಿ ಸಿಲ್ಕ್ ಸಿಟಿಯ ಅಧ್ಯಕ್ಷರಾದ ರೋ. ಎ.ಜೆ. ಸುರೇಶ್ ಕಾರ್ಯದರ್ಶಿ ರೋ. ಶಿವರಾಜು, ರೋಟರಿ ಸಿಲ್ಕ್ ಸಿಟಿಯ ಪದಾಧಿಕಾರಿಗಳಾದ ರೋ. ಗೋಪಾಲ್, ರೋ. ಪ್ರಭಾಕರ್ ರೋ. ಲತಾಗೋಪಾಲ್, ರೋ. ರವಿ. ರೋ. ರಘುಕುಮಾರ್ ರೋ. ಪ್ರಕಾಶ್ ರೋ. ಗುರುಮೂರ್ತಿ ರೋ. ಧರಾಜ್ ರೊ. ಉಮಾಶಂಕರ್ ಬೆಳ್ಳಿರಕ್ತನಿಧಿ ರೋ.ರಾಮು ಉಪಸ್ಥಿತರಿದ್ದರು.
ಸದರಿ ರಕ್ತದಾನ ಶಿಬಿರವನ್ನು ಜೀವಾಮೃತ ಮತ್ತು ಬೆಳ್ಳಿರಕ್ತ ನಿಧಿಯವರು ನಿರ್ವಹಿಸಿದರು. ಸುಮಾರು 150ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಗಿದ್ದು. ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿದರು. ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ಈ ರಕ್ತದಾನ ಶಿಬಿರವನ್ನು ಕೊರೊನಾ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ನಡೆಸಲಾಗಿದ್ದು, ಸಂಗ್ರಹವಾದ ರಕ್ತವನ್ನು ರಾಮನಗರ ಜಿಲ್ಲಾ ಆರೋಗ್ಯ ಇಲಾಖೆಯ ರಕ್ತ ಸಂಗ್ರಹ ಘಟಕಕ್ಕೆ ನೀಡಲಾಯಿತು.
-ರೋ. ನವೀನ್ , ಪಬ್ಲಿಕ್ ಇಮೇಜ್, ರೋಟರಿ ಸಿಲ್ಕ್ ಸಿಟಿ, ರಾಮನಗರ