ನಮ್ಮ ರಾಮನಗರ

ಪಬ್ಲಿಕ್‌ ಟಿವಿ ವರದಿಗಾರ ಹನುಮಂತು ಪತ್ನಿಗೆ ಕೆಎಂಎಫ್‌ನಲ್ಲಿ ಉದ್ಯೋಗ: ಡಾ. ಅಶ್ವತ್ಥನಾರಾಯಣ

ಅಪಘಾತದಲ್ಲಿ ಮೃತಪಟ್ಟ ಪಬ್ಲಿಕ್ ಟಿವಿ ವಾಹಿನಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಅವರ ಪತ್ನಿಗೆ ಕೆಎಂಎಫ್‌ ಜಿಲ್ಲಾ ಒಕ್ಕೂಟದಲ್ಲಿ ಕೆಲಸ ಕೊಡಿಸುವುದಾಗಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ಭರವಸೆ ನೀಡಿದ್ದಾರೆ.

ಹಾರೋಹಳ್ಳಿಯ ಪಡುವಣಗೆರೆಯಲ್ಲಿರುವ ಹನುಮಂತು ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಅವರು, ಕೆಎಂಎಫ್‌ ಅಧ್ಯಕ್ಷರಿಗೆ ಪತ್ರ ಬರೆದು, ಅವರ ಜತೆ ಮಾತನಾಡಿ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹನಮಂತು ಅವರ ಪತ್ನಿ ಎನ್‌. ಶಶಿಕಲಾ ಅವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದರು. ಜತೆಗೆ, ಸರ್ಕಾರದ ಕಡೆಯಿಂದ ಬರಬೇಕಿರುವ 5 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಹೇಳಿದ್ದಾರೆ.

ಈಗಾಗಲೇ ಹನುಮಂತು ಕುಟುಂಬಕ್ಕೆ ಹೆಚ್ ಡಿ ಕುಮಾರಸ್ವಾಮಿ ಯವರು ೫ ಲಕ್ಷ ಹಾಗೂ ಡಿ.ಕೆ ಸುರೇಶ್ ರವರು ೫ ಲಕ್ಷ ಚೆಕ್ ನೀಡಿದ್ದಾರೆ.
ರಾಮನಗರ ಜೈಲಿನಲ್ಲಿ ಪಾದರಾಯನಪುರ ಪುಂಡರನ್ನು ಇಟ್ಟಿದ್ದಾಗ ವರದಿ ಮಾಡಿ ತೆರಳುತ್ತಿದ್ದ ಸಂದರ್ಭದಲ್ಲಿ ಪಬ್ಲಿಕ್ ಟಿ ವಿ ವರದಿಗಾರ ಹನುಮಂತು ಅಪಘಾತದಲ್ಲಿ ನಿಧನರಾಗಿದ್ದರು.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!