ನಮ್ಮ ರಾಮನಗರ

ರಾಮನಗರ ಇಂದು ಸೋಂಕಿತರು 1 ಪ್ರಕರಣ ಮಾತ್ರ. ಓದಿ

ರಾಮನಗರ, ಜುಲೈ 14 :- ಜಿಲ್ಲೆಯಲ್ಲಿ ಒಂದು ಕರೋನಾ ಪಾಸಿಟಿವ್ ಪ್ರಕರಣ ಇಂದು ಚನ್ನಪಟ್ಟಣದಲ್ಲಿ ವರದಿಯಾಗಿದೆ ಇವರನ್ನು ರಾಮನಗರದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.

ಒಟ್ಟು ಪ್ರಕರಣ: ಇದುವರೆಗೆ ಜಿಲ್ಲೆಯಲ್ಲಿ 390 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕನಕಪುರ 85, ಮಾಗಡಿ 136, ಚನ್ನಪಟ್ಟಣ 72 ಮತ್ತು ರಾಮನಗರದ 97 ಪ್ರಕರಣಗಳು ಸೇರಿವೆ.ಸಕ್ರಿಯ ಪ್ರಕರಣ:* ಜಿಲ್ಲೆಯಲ್ಲಿ ದಾಖಲಾಗಿರುವ 390 ಪ್ರಕರಣಗಳ ಪೈಕಿ 250 ಜನರು ಗುಣಮುಖರಾಗಿದ್ದರೆ, ಇನ್ನೂ 131 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಕನಕಪುರ 03, ಮಾಗಡಿ 59, ಚನ್ನಪಟ್ಟಣ 33 ಮತ್ತು ರಾಮನಗರದ 36 ಪ್ರಕರಣಗಳು ಸೇರಿವೆ.

ಗುಣಮುಖ : ಜಿಲ್ಲೆಯಲ್ಲಿ ಈವರೆಗೆ ಒಟ್ಟು 250 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಕನಕಪುರ 82, ಮಾಗಡಿ 69, ಚನ್ನಪಟ್ಟಣ 39 ಮತ್ತು ರಾಮನಗರದ 60 ಜನರು ಸೇರಿದ್ದಾರೆ.ಸಾವು : ಮಾಗಡಿ ತಾಲ್ಲೂಕಿನಲ್ಲಿ ಇಂದು 77 ವರ್ಷದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇದೂ ಸೇರಿದಂತೆ ಮಾಗಡಿ ತಾಲ್ಲೂಕಿನಲ್ಲಿ 8 ಜನ ಮೃತರಾದಂತಾಗಿದೆ. ರಾಮನಗರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 9 ಮಂದಿ ನಿಧನರಾಗಿದ್ದಾರೆ.

ಜಿಲ್ಲಾ ಆರೋಗ್ಯ ಇಲಾಖೆ ವರದಿ: ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಬಿಡುಗಡೆ ಮಾಡಿರುವ ಮಂಗಳವಾರ (ಜುಲೈ 14) ವರದಿಯಲ್ಲಿ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 12541 (ಹೊಸದಾಗಿ ಇಂದಿನ 330 ಸೇರಿ). ಒಟ್ಟು 4511 ಜನ 14 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 298 ಜನರು ಇಂದು ಹೋಂ ಕ್ವಾರಂಟೈನ್ ಅವಧಿಯನ್ನು ಪೂರೈಸಿದ್ದು, ಇವರ ಒಟ್ಟಾರೆ ಸಂಖ್ಯೆ 3600ಕ್ಕೆ ಏರಿಕೆಯಾಗಿದೆ.

ಜ್ವರ ತಪಾಸಣೆಃ ಜ್ವರ ತಪಾಸಣಾ ಕೇಂದ್ರದಲ್ಲಿ ಇಂದು 60 ಜನರು ತಪಾಸಣೆಗೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ 3541 ಮಂದಿ ತಪಾಸಣೆಗೆ ಮಾಡಿಸಿಕೊಂಡಿದ್ದಾರೆ. ಕ್ವಾರಂಟೈನ್ಃ ಒಟ್ಟು 8 ಜನರು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಇನ್ಸಟ್ಯೂಷನಲ್ ಕ್ವಾರಂಟೈನ್ ಗೆ ಇಂದು 30 ಜನ ಸೇರ್ಪಡೆಯಾಗುವುದರೊಂದಿಗೆ ಒಟ್ಟಾರೆ ಸಂಖ್ಯೆ 333ಕ್ಕೆ ಏರಿಕೆಯಾಗಿದೆ.

ಮಾದರಿ ಸಂಗ್ರಹಃ ಇಂದು ಹೊಸದಾಗಿ 336 ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ.ಇದುವರೆಗೆ ಒಟ್ಟು 12885 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು 10337 ಪರೀಕ್ಷಾ ವರದಿಯ ಫಲಿತಾಂಶ ನಕಾರಾತ್ಮಕವಾಗಿರುತ್ತದೆ. ಇಂದಿನ 336 ಬಾಕಿ ವರದಿ ಸೇರಿ ಒಟ್ಟು 1897 ಪ್ರಕರಣಗಳ ವರದಿಯನ್ನು ನಿರೀಕ್ಷಿಸಲಾಗಿದೆ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!