ಸುದ್ದಿ

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇನ್ನಿಲ್ಲ.

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೃದಯಘಾತದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 67 ವರ್ಷ ವಯಸ್ಸಿನ ಸುಷ್ಮಾ ಸ್ವರಾಜ್ ಬಿಜೆಪಿ ಪಕ್ಷದಲ್ಲಿ ಪ್ರಬಲ ಮಹಿಳಾ ನಾಯಕಿಯಾಗಿ ಹೆಸರು ಮಾಡಿದ್ದರು. ತುರ್ತು ಪರಿಸ್ಥಿತಿ ಸಂದರ್ಭದ ನಂತರ ಬಿಜೆಪಿ ಪಕ್ಷ ಸೇರಿದ್ದರು. ಚಂಡಿಗಡ್‍ನಲ್ಲಿ ಕಾನೂನು ಪದವಿ ಪಡಿದಿದ್ದರು.

Related image

1977 ಹರಿಯಾಣ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದರು. 1998ರಲ್ಲಿ ದೆಹಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮೋದಿ ಅವರ ಮೊದಲ ಅವಧಿಯಲ್ಲಿ ವಿದೇಶಾಂಗ ಸಚಿವೆಯಾಗಿ ದಿಟ್ಟತನದಿಂದ ಕಾರ್ಯನಿರ್ವಹಿಸಿದ್ದರು. 1952 ಫೆಬ್ರವರಿ 14ರಂದು ಜನಿಸಿದ್ದ ಸುಷ್ಮಾ ಸ್ವರಾಜ್ ಇಂದು ವಿಧಿವಶರಾಗಿದ್ದಾರೆ.

Image result for sushma swaraj

ಕರ್ನಾಟಕದಲ್ಲಿ ಬಳ್ಳಾರಿಯ ಭಾಗದಲ್ಲಿ ವರಮಹಾಲಕ್ಷ್ಮಿ ಹಬ್ಬದಲ್ಲಿ ಪ್ರತಿ ವರ್ಷವೂ ಕೂಡ ಭಾಗವಹಿಸಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದರು. ಸಾವಿನ ಕೆಲ ಹೊತ್ತಿನ ಹಿಂದೆಯಷ್ಟೇ ಅರ್ಟಿಕಲ್ 370 ವಿಧಿ ರದ್ದಾಗಿದ್ದು, ನನಗೆ ಅತೀವ ಸಂತಸÀ ತಂದಿದೆ ಎಂದು ಟ್ವೀಟ್ ಮಾಡಿದ್ದರು. ವಿಧಿ ಅವರನ್ನು ಈ ವರ್ಷ ವರಮಹಾಲಕ್ಷ್ಮಿ ಹಬ್ಬ ಹತ್ತಿರ ಇರುವಾಗಲೇ ಕರೆದುಕೊಂಡಿದೆ. ದೇಶ ಒಬ್ಬ ಅಪ್ರತಿಮ ನಾಯಕಿಯನ್ನು ಕಳೆದುಕೊಂಡಿದೆ. ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ.

Related image

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!