ಜಗತ್ತಿನಲ್ಲಿ ಇವತ್ತು ಜನಸಂಖ್ಯೆ ಪ್ರಮಾಣ ಅತೀ ವೇಗವಾಗಿ ಏರಿಕೆಯಾಗುತ್ತಿದೆ. ಇದರಿಂದಾಗಿ ದೊಡ್ಡ ದೊಡ್ಡ ನಗರಗಳಲ್ಲಿ ಜನರಿಗೆ ವಾಸಿಸಲು ಮನೆಗಳೇ ಸಿಗುತ್ತಿಲ್ಲ. ಹೀಗಿರುವಾಗ ಸ್ವಂತ ಮನೆ ಹೊಂದುವುದು ದೂರದ ಮಾತು. ಇದರ ನಡುವೆ ಹಾಂಕಾಂಗ್ ಹೊಸ ಪ್ಲಾನ್ ಮಾಡಿದೆ.
ಕೃತಕ ದ್ವೀಪ ನಿರ್ಮಾಣ ಮಾಡಿ ಅಲ್ಲೊಂದು ನಗರ ನಿರ್ಮಾಣಕ್ಕೆ ಪ್ಲಾನ್ ಮಾಡಿದೆ. ಅದು ಬರೋಬ್ಬರಿ 79 ಶತಕೋಟಿ ಡಾಲರ್ ಮೊತ್ತದ ಯೋಜನೆಯಾಗಿದೆ. ಈ ಮೂಲಕ ಹಾಂಕಾಂಗ್ ಸರ್ಕಾರ, ಮನೆಯ ಕೊರತೆಯನ್ನು ನೀಗಿಸುವ ಕೆಲಸಕ್ಕೆ ಮುಂದಾಗಿದೆ. ಆದ್ರೆ, ಇದು ವರ್ಷದಲ್ಲಿ ಮುಗಿಯುವ ಯೋಜನೆ ಅಲ್ಲ. ಯಾಕಂದರೆ, ಇದು ಶುರುವಾಗುವುದೇ 2025ರಲ್ಲಿ.
ಕುಂದಾನಗರಿಯ ಜಲಧಾರೆ
ಹಾಂಕಾಂಗ್ ನಲ್ಲಿ ಅತಿ ದೊಡ್ಡ ದ್ವೀಪವಾದ ಲಾಂಟುವ ಪ್ರದೇಶದ ಸುತ್ತಲಿನ 2,471 ಎಕರೆ ಜಾಗದಲ್ಲಿ ಕೃತಕ ನಗರ ಸೃಷ್ಟಿಗೆ ಮುಂದಾಗಿದೆ. ಇದರಲ್ಲಿ ಒಟ್ಟು 2 ಲಕ್ಷದ 60 ಸಾವಿರ ಫ್ಲ್ಯಾಟ್ ಗಳು ಇರಲಿವೆಯಂತೆ. ಇವುಗಳಲ್ಲಿ ಶೇ. 70ರಷ್ಟು ಸಾರ್ವಜನಿಕರಿಗೆ ನೀಡಲಾಗುವುದು. ಈ ಯೋಜನೆ 2025ರಲ್ಲಿ ಶುರುವಾಗಿ 2032ರ ವೇಳೆ ಕಂಪ್ಲೀಟ್ ಆಗುತ್ತೆ ಅಂತಾ ಹಾಂಕಾಂಗ್ ಸರ್ಕಾರ ತಿಳಿಸಿದೆ.
ಸಮುದ್ರದ ಆಳದಲ್ಲಿರುವ ಮಣ್ಣನ್ನು ತೆಗೆದು ಅದಕ್ಕೆ ಮರಳು ತುಂಬಲಾಗುತ್ತೆ. ಅದರ ಮೇಲೆ ಪಿಲ್ಲರ್ ಗಳನ್ನು ನಿರ್ಮಿಸಿ ಕೃತಕ ದ್ವೀಪವನ್ನು ನಿರ್ಮಿಸಲಾಗುತ್ತಿದೆ. ಇದೆಲ್ಲ ಮಾಡುವಾಗು ಕಡಲ ಜೀವಿಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಇದರ ಜೊತೆಗೆ ಸಮುದ್ರ ಮಾಲಿನ್ಯ ಸಹ ಆಗುವ ಅಪಾಯವಿದೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಹೆಚ್ಚು ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಅಂತಾ ಸ್ಪಷ್ಟಪಡಿಸಲಾಗಿದೆ.
ಇನ್ನು ಹಾಂಕಾಂಗ್ ಸರ್ಕಾರದ ಈ ಯೋಜನೆ ಸಕ್ಸಸ್ ಆದಲ್ಲಿ ಆಗುವ ಲಾಭ ನಷ್ಟದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯಲಿದೆ.