ಮಧುಮೇಹಿಗಳು ಮತ್ತು ಆಹಾರ ಕಾಳಜಿ ಇರುವವರಿಗಾಗಿ ಸಕ್ಕರೆ ರಹಿತ ನಂದಿನಿ ಸಿಹಿ ಉತ್ಪನ್ನಗಳ ಬಿಡುಗಡೆಯನ್ನು ಇಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಿ.ಸಿ. ಸತೀಶ್ ರವರು ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಸಾಂಕೇತಿಕವಾಗಿ ಬಿಡುಗಡೆಗೊಳಿಸಿದರು. ಸಕ್ಕರೆ ರಹಿತ 5 ಸಿಹಿ ಉತ್ಪನ್ನಗಳ ವಿಶೇಷತೆಗಳನ್ನು ತಿಳಿದುಕೊಳ್ಳೋಣ ಬನ್ನಿ .
1) ನಂದಿನಿ ಸಕ್ಕರೆರಹಿತ ಪೇಡಾ: ಮಧುಮೇಹಿಗಳಿಗೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವಜನರಿಗೆಇದು ವರದಾನ. ನಂದಿನಿ ಸಕ್ಕರೆರಹಿತ ಪೇಡಾ, ಹಾಲಿನ ಪೌಷ್ಠಿಕತೆ ಮತ್ತು ಉತ್ಕ್ರಷ್ಟರುಚಿಯನ್ನು ಹೊಂದಿದೆ. ನಂದಿನಿ ಸಕ್ಕರೆರಹಿತ ಪೇಡಾದಲ್ಲಿನ ಸಿಹಿ ರುಚಿಯ ಘಟಕಗಳು ನೈಸರ್ಗಿಕ ಮೂಲಗಳಾಗಿದ್ದು,ನೈಸರ್ಗಿಕ ಮೂಲದ ಆಹಾರಗಳನ್ನು ಸೇವಿಸಲು ಆದ್ಯತೆ ನೀಡುವ ಜನರಿಗೆ ಪ್ರಯೋಜನಕಾರಿಯಾಗಿದೆ.
2) ನಂದಿನಿ ಸಕ್ಕರೆರಹಿತಕೇಸರ್ ಪೇಡಾ: ಮಧುಮೇಹ ಸ್ನೇಹಿ ಸಿಹಿ ತಿಂಡಿಗಳಿಗಾಗಿ ನಿಮ್ಮ ಹುಡುಕಾಟ ಇಲ್ಲಿ ಕೊನೆಗೊಳ್ಳುತ್ತದೆ. ಕೇಸರಿ ಪರಿಮಳ ಮತ್ತು ಹಾಲಿನ ಉತ್ಕ್ರಷ್ಟತೆಯೊಂದಿಗೆ, ಸಮೃದ್ಧ ಮತ್ತು ರುಚಿಕರವಾದ ಈ ಸಿಹಿ ತಿನಿಸು, ಆರೋಗ್ಯದ ಬಗ್ಗೆ ಕಾಳಜಿ ಹೊಂದಿದಂತಹವರಿಗೆ ಸೂಕ್ತವಾಗಿದೆ ಮತ್ತು ಪ್ರತಿ ವಿಶೇಷ ಸಂದರ್ಭಕ್ಕೂ ಹೊಂದುವಂತಹದ್ದಾಗಿದೆ.
3) ನಂದಿನಿ ಸಕ್ಕರೆರಹಿvಬೇಸನ್ ಲಡ್ಡು: ನಂದಿನಿ ತುಪ್ಪ ಹಾಗೂ ಕಡಲೇಹಿಟ್ಟಿನ ಸಾಂಪ್ರದಾಯಿಕರುಚಿಯನ್ನು ಹೊಂದಿರುವ ಬೇಸನ್ ಲಡ್ಡು, ಸಕ್ಕರೆಯಿಂದ ಮುಕ್ತವಾಗಿದೆ. ಮತ್ತು ಹಬ್ಬದಊಟಕ್ಕೆ ಸೂಕ್ತ ಜೊತೆಯಾಗಿದೆ.ಸಕ್ಕರೆಯರುಚಿಗೆ ಸಮಾನವಾದ ಸ್ಟೀವಿಯಾದ ಮಧುರರುಚಿಯುಎಲ್ಲಾ ಆಚರಣೆಗಳಿಗೆ ಮುದವನ್ನು ನೀಡುತ್ತದೆ.
4) ನಂದಿನಿ ಸಕ್ಕರೆರಹಿತಚಾಕೋಲೇಟ್ ಬರ್ಫಿ:ಚಾಕೊಲೇಟ್ ನೊಂದಿಗೆ ಗಾಢವಾದ ಹಾಲು ಆಧಾರಿತ ಸಿಹಿ ತಿನಿಸು ಎಲ್ಲರಿಗೂ ಪ್ರಿಯವಾಗಬಲ್ಲ ರುಚಿ ಹೊಂದಿದ್ದು, ಸಕ್ಕರೆ ಸೇವನೆಯನ್ನು ಕಡಿತಗೊಳಿಸಲು ಬಯಸುವವರಿಗೆ ಸಕ್ಕರೆಗೆ ಸರಿಸಮಾನವಾದ ಉತ್ತಮ ರುಚಿ ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿ ಲಭ್ಯ.ಈ ಸಿಹಿತಿನಿಸು ಸಾರ್ವಕಾಲಿಕವಾಗಿಯೂ ಶಕ್ತಿವರ್ಧಕವಾಗಿದೆ.
5) ನಂದಿನಿ ಸಕ್ಕರೆರಹಿತ ಕೊಕೋನಟ್ ಬರ್ಫಿ: ಹಾಲಿನ ಪದಾರ್ಥಗಳೊಂದಿಗೆ ತೆಂಗಿನಕಾಯಿತುರಿಯ ಶ್ರೇಷ್ಠತೆಯುಉತ್ತಮರುಚಿಯನ್ನು ನೀಡುತ್ತದೆ. ಅತ್ಯಲ್ಪ ಕ್ಯಾಲೊರಿಗಳನ್ನು ಹೊಂದಿದ್ದು, ಬರ್ಫಿಯಲ್ಲಿರುವ ಸ್ಟೀವಿಯಾ ಸಕ್ಕರೆಗೆಆರೋಗ್ಯಕರ ಪರ್ಯಾಯವಾಗಿದೆ. ಮದುವೆಅಥವಾ ಶುಭ ಸಮಾರಂಭಗಳಿರಲಿ, ಪ್ರತಿಆಚರಣೆಯ ಅವಿಭಾಜ್ಯ ಅಂಗವಾಗಿ ಪ್ರತಿ ಸಂದರ್ಭಕ್ಕೂಉತ್ತಮ ಮೌಲ್ಯವನ್ನು ನೀಡುತ್ತದೆ.
“ನಂದಿನಿ ಸಿಹಿ ಉತ್ಸವದ ಚಾಲನೆ ಜೊತೆಗೆ ನಂದಿನಿ ಸಕ್ಕರೆರಹಿತ ಸಿಹಿ ಉತ್ಪನ್ನಗಳ ಬಿಡುಗಡೆ.
(*ಗರಿಷ್ಠ ಮಾರಾಟದರ ಪ್ರತಿ 100 ಗ್ರಾಂ ಸಕ್ಕರೆರಹಿತ ಪೇಡಾ, ಕೇಸರ್ ಪೇಡಾ, ಬೇಸನ್ ಲಾಡು- ರೂ. 45/-*ಗರಿಷ್ಠ ಮಾರಾಟದರ ಪ್ರತಿ 100 ಗ್ರಾಂ ಸಕ್ಕರೆರಹಿತಕೋಕೋನಟ್ ಬರ್ಫಿ ಮತ್ತುಚಾಕೋಲೇಡ್ ಬರ್ಫಿ- ರೂ.50/-)