ಕೆಎಂಎಫ್ ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಶ್ರೀ ಡಾ: ಡಿ. ವಿರೇಂದ್ರ ಹೆಗ್ಗಡೆಯವರಿಗೆ ಬಮೂಲ್ ವತಿಯಿಂದ ಗುರುವಂದನೆ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ವತಿಯಿಂದ ಇಂದು ಬಮೂಲ್‍ನ ನಂದಿನಿ ಹಾಲು ಉತ್ಪನ್ನ ಸಂಕೀರ್ಣ ಶಿವನಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಶ್ರೀ ಡಾ: ಡಿ. ವಿರೇಂದ್ರ ಹೆಗ್ಗಡೆಯವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು.

ಗುರುವಂದನೆ ಸ್ವೀಕರಿಸಿ ಮಾತನಾಡಿದ ಧರ್ಮಾಧಿಕಾರಿ ಡಾ: ಡಿ. ವಿರೇಂದ್ರ ಹೆಗ್ಗಡೆಯವರು ರೈತರ ಬದುಕು ಕಷ್ಟದಾಯಕವಾಗಿದ್ದು  ರೈತರು ಬೆಳೆಯುವ ಬೆಳೆಗಳಿಗೆ  ಬೆಲೆ ಸ್ಥಿರವಾಗಿರದೇ ಅಸ್ಥಿರತೆಯಿಂದ ಕೂಡಿರುತ್ತದೆ. ಆದರೆ ಹೈನುಗಾರಿಕೆಯಲ್ಲಿ ಹಾಲಿನ ದರ ಸ್ಥಿರವಾಗಿರುವುದರಿಂದ ಹಾಲು ಉತ್ಪಾದಕರಿಗೆ ಯಾವುದೇ ತೊಂದರೆ ಇರುವುದಿಲ್ಲವೆಂದರು. ಜೊತೆಗೆ ಹಾಲಿಗೆ ನೀಡುತ್ತಿರುವ ದರವನ್ನು ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಪ್ರೋತ್ಸಾಹಿಸಲು ತಿಳಿಸಿದರು. ಮಕ್ಕಳಿಗೆ ಉಚಿತವಾಗಿ ನೀಡುತ್ತಿರುವ ಹಾಲನ್ನು ಪೌಚ್‍ಗಳ ಮೂಲಕ ವಿತರಿಸಲು ಸರ್ಕಾರ ಕ್ರಮಕೈಗೊಳ್ಳಬೇಕೆಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಡಿ.ಕೆ ಸುರೇಶ್‍ರವರು ನಿನ್ನೆ ತಾನೇ ರಾಷ್ಟ್ರಪತಿಗಳು ಡಾ:. ಡಿ. ವೀರೆಂದ್ರ ಹೆಗ್ಗಡೆಯವರನ್ನು ರಾಜ್ಯ ಸಭಾ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದ್ದು, ರಾಜ್ಯ ಸಭಾ ಸದಸ್ಯರಾಗಿ ಮೊದಲ ಕಾರ್ಯಕ್ರಮ ಇದಾಗಿರುವುದು ಅತ್ಯಂತ ಸಂತೋಷವಾಗಿದೆ. ಜೊತೆಗೆ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು. ರಾಜಕಾರಣಿಗಳು ಅಧಿಕಾರಿಕ್ಕಾಗಿ ಸೇವೆ ಮಾಡುತ್ತಾರೆ ಆದರೆ ಖಾವಂದರರು ಸಮಾಜದ ಒಳಿತಿಗಾಗಿ ಯಾವುದೇ ಸ್ವಾರ್ಥವಿಲ್ಲದೇ ಸೇವೆ ಸಲ್ಲಿಸುತ್ತಾರೆ. ಇಂತಹ ಮಹನೀಯರು ಅಪರೂಪವೆಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಕೆಎಂಎಫ್ ಎಂ.ಡಿ ಶ್ರೀ ಬಿ.ಸಿ ಸತೀಶ್, ಬಮುಲ್ ಆಡಳಿತ ಮಂಡಳಿಯ ಎಲ್ಲಾ ಸದಸ್ಯರುಗಳು ಹಾಗೂ ಬಮುಲ್ ಅಧಿಕಾರಿ/ಸಿಬ್ಬಂದಿಗಳು ಮತ್ತು ಸುಮಾರು 8 ಸಾವಿರ ಹಾಲು ಉತ್ಪಾದಕರು ಉಪಸ್ಥಿತರಿದ್ದರು.

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!