ಕೆಎಂಎಫ್ ಸುದ್ದಿ

ರಾಷ್ಟ್ರೀಯ ಹೈನು ಮಹಾಮಂಡಳಿ ಸುವರ್ಣ ಮಹೋತ್ಸವ ಕೆ.ಎಂ.ಎಫ್. ಮಾರುಕಟ್ಟೆ ವಿಸ್ತರಣೆಗೆ ಪ್ರಶಸ್ತಿಯ ಗರಿ

ಬೆಂಗಳೂರು: ದೇಶದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ರಾಷ್ಟ್ರೀಯ ಸಹಕಾರಿಹೈನುಗಾರಿಕೆ ಮಹಾ ಮಂಡಳ (ಎನ್‍ಸಿಡಿಎಫ್‍ಐ) ಸುವರ್ಣ ಮಹೋತ್ಸವಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಹಾಲು ಮತ್ತು ಹಾಲಿನ ಉತ್ಪಾದನೆ ಕ್ಷೇತ್ರದಲ್ಲಿಸಲ್ಲಿಸಿದ ಗಣನೀಯ ಸೇವೆ ಹಿನ್ನೆಲೆಯಲ್ಲಿ ಕೆಎಂಎಫ್‍ಗೆ ಪ್ರಶಸ್ತಿಯ ಭಾಗ್ಯ ಒಲಿದುಬಂದಿದೆ. ಎನ್‍ಸಿಡಿಎಫ್‍ಐ ಕಳೆದ ಐದು ವರ್ಷಗಳ ಅವಧಿಯಲ್ಲಿ 5 ಸಾವಿರ ಕೋಟಿರೂ.ಗೂ ಹೆಚ್ಚು ವ್ಯವಹಾರ ನಡೆಸಿದ್ದರೆ, ಇದರಲ್ಲಿ ಕೆಎಂಎಫ್ ಸಂಸ್ಥೆಯೊಂದೇ2,400 ಕೋಟಿ ರೂ. ವ್ಯಾಪಾರ-ವಹಿವಾಟು ನಡೆಸಿದ್ದಕ್ಕೆ ಈ ಗೌರವ ಸಂದಿದೆ.


ಗುಜರಾತ್‍ನ ಗಾಂಧಿನಗರದಲ್ಲಿ ಎನ್‍ಸಿಡಿಎಫ್‍ಐ ಸುವರ್ಣ ಮಹೋತ್ಸವಸಮಾರಂಭದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಅವರುಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸಿ. ಸತೀಶ್ ಅವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಮಿತ್ ಷಾ ಅವರು ದೇಶದಲ್ಲಿ ಹೈನೋದ್ಯಮದಲ್ಲಿ ಅಮೂಲ್‍ಸಂಸ್ಥೆ ಮೊದಲ ಸ್ಥಾನದಲ್ಲಿದ್ದರೆ, ಕೆಎಂಎಫ್ ಎರಡನೇ ಸ್ಥಾನದಲ್ಲಿರುವುದು ವಿಶೇಷಎಂದು ಅಭಿನಂದಿಸಿದರು. ನೆರೆ ಹೊರೆ ರಾಜ್ಯಗಳಲ್ಲಿಯೂ ‘ನಂದಿನಿ’ ಬ್ರ್ಯಾಂಡ್‍ಹೆಸರುವಾಸಿಯಾಗಿದ್ದು, ಕರ್ನಾಟಕದ ಹೈನೋದ್ಯಮದ ಬೆಳವಣಿಗೆಗೆ ಹೆಚ್ಚುಸಹಕಾರಿಯಾಗಿದೆ. ತಮಿಳುನಾಡಿನಲ್ಲಿ ಸಹಕಾರಿ ಸಂಘಗಳು ಬೆಳೆಯಬೇಕಾಗಿದ್ದು,ದೇಶದಾದ್ಯಂತ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.
ಹೈನೋದ್ಯಮದಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕಿದ್ದು, ಅವರನ್ನು ಪೆÇ್ರೀತ್ಸಾಹಿಸುವಕೆಲಸನಡೆಯಬೇಕಿದೆ. ಆ ಮೂಲಕ ಸ್ತ್ರೀಯರು ಆರ್ಥಿಕವಾಗಿ ಬಲಾಢ್ಯರಾಗಲು ಅನುಕೂಲವಾಗಲಿದೆ ಎಂದ ಷಾ ಸಹಕಾರಿ ಸಂಸ್ಥೆಗಳು ತಮ್ಮ ದೈನಂದಿನದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ಕೃಷಿ ಪ್ರಧಾನವಾಗಿರುವ ದೇಶದಲ್ಲಿಇದೇ ವರ್ಷ 40ನೇ ಅಂತರ ರಾಷ್ಟ್ರೀಯ ಹೈನುಗಾರಿಕೆ ಸಮ್ಮೇಳನ ಉದ್ದೇಶಿಸಲುನಿರ್ಧರಿಸಲಾಗಿದೆ. ಎಂದು ತಿಳಿಸಿದರು. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕಬಿ.ಸಿ.ಸತೀಶ್ ಸೇರಿ, ರಾಜ್ಯ ಹಾಗೂ ರಾಷ್ಟ್ರದ ಹಲವು ಸಹಕಾರಿ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!