ಕೆಎಂಎಫ್ ಸುದ್ದಿ

“ನಂದಿನಿ ಸಿಹಿ ಉತ್ಸವದ ಚಾಲನೆ ಜೊತೆಗೆ ನಂದಿನಿ ಸಕ್ಕರೆರಹಿತ ಸಿಹಿ ಉತ್ಪನ್ನಗಳ ಬಿಡುಗಡೆ.

ಕರ್ನಾಟಕ ಹಾಲು ಮಹಾಮಂಡಳಿಯು ರಾಜ್ಯದಎಲ್ಲಾ ವರ್ಗದ ಗ್ರಾಹಕರಿಗೆಕೈಗೆಟುಕುವದರದಲ್ಲಿ ರುಚಿ ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು “ನಂದಿನಿ” ಬ್ಯ್ರಾಂಡ್ ಅಡಿಯಲ್ಲಿ ಕಳೆದ 40 ವರ್ಷಗಳಿಂದ ಒದಗಿsಸುತ್ತಾ ಬರುತ್ತಿದ್ದು, ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಗ್ರ್ರಾಹಕರ ಆಯ್ಕೆಯ ನೆಚ್ಚಿನ ಬ್ಯ್ರಾಂಡ್‍ ಆಗಿದೆ. ಉತ್ಕøಷ್ಟ ಗುಣಮಟ್ಟದ ಉತ್ಪನ್ನಗಳ ಜೊತೆಗೆ ಕಾಲಕಾಲಕ್ಕೆ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಸಹ ನೀಡುತ್ತಾ ಬರುತ್ತಿದ್ದು,  ಕರ್ನಾಟಕ ಜನತೆಯ ಅಚ್ಚುಮೆಚ್ಚಿನ ಬ್ಯ್ರಾಂಡ್‍ಆಗಿದೆ.

ನಂದಿನಿ ಸಿಹಿ ಉತ್ಪನ್ನಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವ ಸಲುವಾಗಿ “ನಂದಿನಿ ಸಿಹಿ ಉತ್ಸವ” ವನ್ನು ಈ ಹಿಂದಿನಿಂದಲೂ ಆಚರಿಸಲಾಗುತ್ತಿರುತ್ತದೆ. ಅದರಂತೆ 2020 ನೇ ವರ್ಷದಲ್ಲಿಯೂ ಸಹ ಆಗಸ್ಟ್ ಹಾಗು ಡಿಸೆಂಬರ್ ಮಾಹೆಗಳಲ್ಲಿ ಸಿಹಿ ಉತ್ಸವವನ್ನು ಆಚರಿಸಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಸಿಹಿ ಉತ್ಪನ್ನಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಸಹಕಾರಿಯಾಗಿರುತ್ತದೆ. ನಂದಿನಿ ಸಿಹಿ ಉತ್ಸವದ ಆಚರಣೆಯಿಂದ ಸಿಹಿ ಉತ್ಪನ್ನಗಳ ಮಾರಾಟ ಪ್ರಮಾಣವು ಪ್ರತಿ ಮಾಹೆಯಾನ ಶೇ.16 ರಷ್ಟುಏರಿಕೆಯಾಗಿರುತ್ತದೆ.
ಗ್ರಾಹಕರು ಈ ರೀತಿ ಉತ್ಸವವನ್ನು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸುತ್ತಿರುವುದರಿಂದ ಈ ಬಾರಿಯು ಆಗಸ್ಟ್ ಮಾಹೆಯಲ್ಲಿ ಪ್ರಾರಂಭವಾಗುತ್ತಿರುವ ಶ್ರಾವಣ ಮಾಸದಲ್ಲಿ ಹಬ್ಬಗಳ ಪ್ರಯುಕ್ತ ಗ್ರಾಹಕರಿಗೆ ಕೆಎಂಎಫ್ ವತಿಯಿಂದ ನಂದಿನಿ ಸಿಹಿ ಉತ್ಸವ, ಹಾಗು ಹೆಚ್ಚುವರಿಯಾಗಿ 2 ಹೊಸ ಗ್ರಾಹಕರ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.

ಯೋಜನೆ(1): ದಿನಾಂಕ 19.08.2021 ರಿಂದ 15 ದಿನಗಳ ಕಾಲ ರಾಜ್ಯದ್ಯಾಂತ “ನಂದಿನಿ ಸಿಹಿ ಉತ್ಸವ” ಆಚರಿಸಲಾಗುತ್ತಿದ್ದು, ನಂದಿನಿ ಸಿಹಿ ಉತ್ಪನ್ನಗಳಾದ ಮೈಸೂರ್‍ಪಾಕ್, ಪೇಡಾ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಬಾದಾಮ್/ಕ್ಯಾಶು/ಡ್ರೈಪ್ರೂಟ್ರ್ಸ್/ ಕೋಕೋನಟ್/ಚಾಕೋಲೇಟ್ ಬರ್ಫಿಗಳು, ಕುಂದ, ಜಾಮೂನ್, ರಸಗುಲ್ಲಾ, ಸಿರಿಧಾನ್ಯ ಲಾಡು, ಸಿರಿಧಾನ್ಯ ಹಾಲಿನ ಪುಡಿ, ಚಕ್ಕಿ ಲಾಡು, ಸಿರಿಧಾನ್ಯ ಪಾಯಸ, ಸಿರಿಧಾನ್ಯ ಸಿಹಿ ಪೊಂಗಲ್, ಎಲ್ಲಾ ಸಿಹಿ ಉತ್ಪನ್ನಗಳು, ಕುಕ್ಕೀಸ್‍ಗಳ ಮಾರಾಟದರದ ಮೇಲೆ ಶೇ.10 ರಷ್ಟುರಿಯಾಯಿತಿ ಯನ್ನು ನೇರವಾಗಿ ಗ್ರಾಹಕರಿಗೆ ನೀಡಲಾಗುತ್ತ್ತಿದೆ.

ಗ್ರಾಹಕರ ಬೇಡಿಕೆಗಳನ್ನು ಪರಿಗಣಿಸಿ, ಮಧುಮೇಹಿಗಳು ಮತ್ತು ಆಹಾರ ಕಾಳಜಿ ಇರುವವರ ಅನುಕೂಲಕ್ಕಾಗಿ ಹೊಸದಾಗಿ ಸಕ್ಕರೆರಹಿತ ಉತ್ಪನ್ನಗಳನ್ನು ಗ್ರಾಹಕರಿಗಾಗಿ ಈ ದಿನ ಬಿಡುಗಡೆ ಮಾಡಲಾಗುತ್ತಿದೆ. ಈ ಹೊಸ ಉತ್ಪನ್ನಗಳ ಮಾರಾಟದರದಲ್ಲಿಯೂ ಸಹ ಶೇ.10 ರಷ್ಟುರಿಯಾಯಿತಿ ನೀಡಲಾಗುತ್ತಿದೆ.
• ಸಕ್ಕರೆರಹಿತ ಪೇಡ,
• ಸಕ್ಕರೆರಹಿತಕೇಸರಿ ಪೇಡ,
• ಸಕ್ಕರೆರಹಿತ ಬೆಸನ್ ಲಾಡು,
• ಸಕ್ಕರೆರಹಿತಕೊಕೊನೇಟ್ ಬರ್ಫಿ
• ಸಕ್ಕರೆರಹಿತಚಾಕೋಲೇಟ್ ಬರ್ಫಿ

ಮಧುಮೇಹಿಗಳು ಮತ್ತು ಆಹಾರ ಕಾಳಜಿ ಇರುವವರಿಗಾಗಿ ಸಕ್ಕರೆ ರಹಿತ ನಂದಿನಿ ಸಿಹಿ ಉತ್ಪನ್ನಗಳ ಬಿಡುಗಡೆ

ಯೋಜನೆ(2): ನಂದಿನಿ ನೈಸರ್ಗಿಕ ಹಾಗು ಆಯುರ್ವೇದಿಕ್ ಗುಣವುಳ್ಳ ಐಸ್‍ಕ್ರೀಮ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗ್ರಾಹಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಒಂದುಕೊಂಡರೆ ಮತ್ತೊಂದನ್ನುಉಚಿತವಾಗಿ ನೀಡುವಯೋಜನೆಯನ್ನು ಸಹ ಜಾರಿಗೊಳಿಸಲಾಗುತ್ತಿದೆ. (ಸಮಾನ ಮಾರಾಟದರದ 125 ಮಿಲಿ ಪ್ಯಾಕ್‍ಗೆ ಮಾತ್ರಅನ್ವಯ)

ನ್ಯಾಚುರಲ್‍ಐಸ್‍ಕ್ರೀಂಅನ್ನು ನೈಜ ಹಣ್ಣಿನ ತಿರಳನ್ನು ಬಳಸಿ ಸ್ಟ್ರಾಬೆರ್ರಿ , ಸೀಬೆ, ಸಪೋಟ, ಸೀತಾಫ¯, ಹಲಸು, ಮಾವು, ಲಿಚಿ ಮತ್ತು ಎಳನೀರು ಐಸ್‍ಕ್ರೀಂಗಳನ್ನು ತಯಾರಿಸಿಲಾಗಿದೆ ಜೊತೆಗೆ ಪಾರಂಪರಿಕಆರೋಗ್ಯವರ್ಧಕ ಗಳನ್ನು ಬಳಸಿ ಆಯುರ್ವೇದ ಗುಣವುಳ್ಳ ಅರಿಶಿನ, ಶುಂಠಿ ಮತ್ತುಜೇನುತುಪ್ಪ, ಚ್ಯವನಪ್ರಾಶ್‍ಐಸ್ ಕ್ರೀಂಗಳನ್ನು ತಯಾರಿಸಲಾಗಿದೆ. ಈ ಎಲ್ಲಾಐಸ್‍ಕ್ರೀಂ ಮಾದರಿಗಳ ಮೇಲೆ 1 ಕ್ಕೆ 1 ಉಚಿತಯೋಜನೆ ಜಾರಿಗೊಳಿಸಲಾಗಿದೆ.

ಯೋಜನೆ(3): ನಂದಿನಿ ಬ್ರ್ಯಾಂಡ್‍ನಲ್ಲಿ ಸ್ಟ್ರಾಬೆರಿ, ಸೀಬೆ, ಏಲಕ್ಕಿ, ಅನಾನಸ್ ಮತ್ತು ಮಾವು ಸ್ವಾದದ 5 ವಿವಿಧ ಶ್ರೀಖಂಡ್‍ಗಳು ಲಭ್ಯವಿದ್ದು, ಈ ಉತ್ಪನ್ನದ ಲಭ್ಯತೆ ಬಗ್ಗೆ ಗ್ರಾಹರಲ್ಲಿ ಹೆಚ್ಚಿನಅರಿವು ಮೂಡಿಸುವ ಸಲುವಾಗಿ ಒಂದುಕೊಂಡರೆ ಮತ್ತೊಂದುಉಚಿತ (1+1) ಯೋಜನೆಯನ್ನು ಸಹ ಜಾರಿಗೊಳಿಸಲಾಗಿದೆ. ಶ್ರೀಖಂಡ್ ಅನ್ನು ನೇರವಾಗಿ ಸೇವಿಸಬಹುದಾಗಿದೆಅಥವಾ ದಿನನಿತ್ಯದ ಉಪಹಾರಗಳಾದ ಚಪಾತಿ, ಪೂರಿಯೊಂದಿಗೆ ಸಹ ಮೇಲಿನ ಸ್ವಾದಗಳಲ್ಲಿ ಸವಿಯಬಹುದಾಗಿದೆ.

ದಿನಾಂಕ: 19.08.2021 ರಂದು ಕೆಎಂಎಫ್ ಕೇಂದ್ರ ಕಛೇರಿಯಲ್ಲಿ ಮೇಲಿನ ಎಲ್ಲಾ ಯೋಜನೆಗಳಿಗೆ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಬಿ.ಸಿ.ಸತೀಶ್, ಕೆಸಿಎಸ್ ರವರು ಸಾಂಕೇತಿಕವಾಗಿ ಚಾಲನೆ ನೀಡಿದರು. ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರು ರಾಜ್ಯದ್ಯಾಂತ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಹಾಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!