ನಮ್ಮ ರಾಮನಗರ

ರೋಟರಿ ಸಿಲ್ಕ್ ಸಿಟಿ, ರಾಮನಗರ ಪದವಿ ಸ್ವೀಕಾರ ಸಮಾರಂಭ

ರೋಟರಿ ಸಿಲ್ಕ್ ಸಿಟಿ ರಾಮನಗರ 2022-23ನೇ ಸಾಲಿನ ಅಧ್ಯಕ್ಷರಾಗಿ ರೋ. ಶಿವರಾಜ ಆರ್ ಕಾರ್ಯದರ್ಶಿಯಾಗಿ ರೋ. ಇಶಾಂತ್ ಎಸ್. ಬಿ. ( ಸುನೀಲ್) ರವರು ದಿನಾಂಕ 05.07.2022ರಂದು ಆರ್.ವಿ.ಸಿ.ಎಸ್. ಕನ್ವೇನ್‍ಷನ್ ಹಾಲ್ ರಾಮನಗರ ಇಲ್ಲಿ ನಡೆಯುವ ಸಮಾರಂಭದಲ್ಲಿ ಪದವಿ ಸ್ವೀಕಾರ ಮಾಡಲಿದ್ದಾರೆ. ಇವರ ಜೊತೆ ಸಿಲ್ಕ್ ಸಿಟಿ 2022-23 ನೇ ಸಾಲಿನ ಆಡಳಿತ ಮಂಡಳಿ ನೂತನ ನಿರ್ದೇಶಕರು ಪದವಿ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಏಳು ಜನ ನೂತನ ಸದಸ್ಯರು ರೋಟರಿ ಸಿಲ್ಕ್ ಸಿಟಿ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ಇದೇ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಒಟ್ಟು 6 ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಇಬ್ಬರಿಗೆ ಸನ್ಮಾನ ಮತ್ತು ಚಿಗುರು ಫೌಂಡೇಷನ್(ರಿ) ಮತ್ತು ರೋಟರಿ ಸಿಲ್ಕ ಸಿಟಿ ರಾಮನಗರ ಸಹಯೋಗದಲ್ಲಿ ನಡೆದಿದ್ದ ಕೃಷ್ಣವೇಷ ಅಲಂಕಾರ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆಯಾಗಲಿದೆ.

ಕಾರ್ಯಕ್ರಮದಲ್ಲಿ ಅನುಸ್ಥಾನ ಅಧಿಕಾರಿಯಾಗಿ PDG.Rtn.Flt.Lt. ಕೆ.ಪಿ. ನಾಗೇಶ್‍ರವರು ಮತ್ತು ಮುಖ್ಯ ಅತಿಥಿಗಳಾಗಿ ಜೋನ್ ಗವರ್ನರ್ ರೋ. ಎಲ್. ಸಿದ್ದಪ್ಪಾಜಿ, ಅಸಿಸ್ಟೆಂಟ್ ಗರ್ವನರ್ ರೋ. ಭರತ್ ರವರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷರಾದ ರೋ. ಸೋಮಶೇಖರ್ ರಾವ್ ಮತ್ತು ನಿರ್ಗಮಿತ ಕಾರ್ಯದರ್ಶಿ ರೋ. ಚಂದ್ರಪ್ಪ (ಶೇಖರ್) ಉಪಸ್ಥಿತರಿರುತ್ಥಾರೆ.

ರೋಟರಿ ಸಿಲ್ಕ್ ಸಿಟಿ, ರಾಮನಗರ 2021-22ನೇ ಸಾಲಿನಲ್ಲಿ 117 ಜನಪರ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದ್ದು, ಎಂದಿನಂತೆ ಈ ಭಾರಿಯು 25 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

-Naveen  Director Public Image Roatry silk city Ramangara

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!