ನಮ್ಮ ರಾಮನಗರ

ರಾಮ್ ಘಡ್ ರಾಕರ್ಸ್ ಚಾರಣ -5 |Ramghad Rockers Trekking –

ರಾಮನಗರ ರೋಟರಿ ಸಿಲ್ಕ್ ಸಿಟಿ ಸದಸ್ಯರು ಮತ್ತು ಚಾರಣಪ್ರಿಯರು ಸೇರಿ ರಾಮನಗರ ಜಿಲ್ಲೆಯ ಬೆಟ್ಟಗಳನ್ನು ಪರಿಚಯಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಚಾರಣ ತಂಡಕ್ಕೆ ರಾಮ್ ಘಡ್ ರಾಕರ್ಸ್ ಅಂತ ಹೆಸರಿಟ್ಟಿದ್ದು. ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷರಾದ ರೋ. ಎಲ್ ಪ್ರಭಾಕರ್ ರವರನ್ನು ತಂಡದ ನಾಯಕರಾಗಿ ಆಯ್ಕೆ ಮಾಡಿ. ಈಗಾಗಲೇ 5 ಚಾರಣಗಳು ಮಾಡಲಾಗಿರುತ್ತದೆ. ಚಾರಣ ಸಂದರ್ಭದಲ್ಲಿ ವಿಡಿಯೋ ಮಾಡಿ ಅದನ್ನು ಚಿಗುರು ಟಿ.ವಿ ಮತ್ತು ನಮ್ಮ ರಾಮನಗರ ಫೇಸ್ ಬುಕ್ ಪುಟದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ವಿಡಿಯೋಗಳನ್ನು ಸಾವಿರಾರು ಜನರು ನೋಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ .

ರಾಮದೇವರ ಬೆಟ್ಟ, ಕೋಣನಕಲ್ ಬೆಟ್ಟ, ಯತಿರಾಯಸ್ವಾಮಿ ಬೆಟ್ಟ, ಮುತ್ತುರಾಯಸ್ವಾಮಿ ಬೆಟ್ಟ ಹೀಗೆ 5 ಬೆಟ್ಟಗಳನ್ನು ಚಾರಣಮಾಡಿ, ಬೆಟ್ಟಗಳ ಪರಿಚಯ ಮಾಡಿಕೊಡಲಾಗಿದೆ. ಕೇವಲ ಚಾರಣ ಮಾತ್ರವಲ್ಲ ಜೊತೆಗೆ ಸೀಡ್ ಬಾಲ್ ಗಳನ್ನ್ನು ತಯಾರಿಸಿ ಬೆಟ್ಟದ ಮೇಲೆ ಆಸುಪಾಸು ಅವುಗಳನ್ನು ಭೂಮಿಗೆ ಹಾಕಿ ಗಿಡಬೆಳೆಸುವ ಉತ್ತಮ ಕೆಲಸಕ್ಕೂ ಈ ಟೀಮ್ ಮುಂದಾಗಿದೆ. ಚಾರಣ ಮಾಡಿದ ಸವಿ ನೆನಪಿಗಾಗಿ ಸಸಿಯನ್ನು ನೆಡುವ ಕಾರ್ಯವನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಪ್ರಕೃತಿ ಎಷ್ಟು ಮುಖ್ಯ ಎಂಬ ಅರಿವನ್ನು ಮೂಡಿಸಲಾಗುತ್ತದೆ.

ಈ ಚಾರಣ ತಂಡದ ವಿಶೇಷವೆಂದರೆ ಪ್ರಕೃತಿಗೆ ಯಾವುದೇ ರೀತಿ ಹಾನಿ ಮಾಡದೇ ಚಾರಣ ಸಮಯ ಉಪಯೋಗಿಸಸುವ ಪ್ರತಿಯೊಂದು ತ್ಯಾಜ್ಯ ವಸ್ತುಗಳನ್ನು ಒಂದು ಚೀಲದಲ್ಲಿ ಹಾಕಿ ಕಸದ ತೊಟ್ಟಿಗೆ ಹಾಕುವ ಕೆಲಸವನ್ನು ಈ ತಂಡದ ಸದಸ್ಯರು ಮಾಡುತ್ತಿದ್ದಾರೆ. ಈ ಚಾರಣ ತಂಡದಲ್ಲಿ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾದ ರೋ. ರವಿಕುಮಾರ್, ಸಂಸ್ಥಾಪಕ ಅಧ್ಯಕ್ಷರಾದ ರೋ.ಬಿ. ಗೋಪಾಲ್ ಸಿಲ್ಕ್ ಸಿಟಿಯ ರೋ. ಕೆ.ವಿ. ಉಮೇಶ್, ರೋ. ಎ .ಜೆ . ಸುರೇಶ್ , ರೋ. ಸೋಮಶೇಖರ್ ರಾವ್, ರೋ. ಉಮಾಶಂಕರ್, ರೋ.ಶಿವರಾಜ್, ರೋ ಧನರಾಜ್ , ರೋ. ರಘುಕುಮಾರ್ , ರೋ. ಪ್ರಕಾಶ್ , ರೋ. ಪರಮೇಶ್ , ರೋ. ಶೇಖರ್ , ರೋ ಮಂಜುನಾಥ್ ಸೇರಿದಂತೆ ಎಲ್ಲ ಸದಸ್ಯರು ಚಾರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮತ್ತು ಚಾರಣ ಪ್ರಿಯರು ಹಾಗೂ ಚಾರಣದ ಮಾರ್ಗದರ್ಶಿಗಳಾಗಿ ದೈಹಿಕ ಶಿಕ್ಷಕರಾದ ಶಾಂತರಾಜ್ , ಅನಿಲ್ , ನಿವೃತ್ತ ಯೋಧರು, ಹೀಗೆ ಅನೇಕ ಪ್ರಕೃತಿ ಪ್ರಿಯರು ಚಾರಣ ತಂಡದಲ್ಲಿ ಇದ್ದಾರೆ.

ಚಿಗುರು ಟಿ.ವಿ  link https://www.youtube.com/channel/UCP2QXRwuOMb9Fc1SyjOsZxw

ನಮ್ಮ ರಾಮನಗರ ಫೇಸ್ ಬುಕ್ ಪುಟ link  https://www.facebook.com/nammaramanagaram

-ರೋ. ನವೀನ್ ರಾಮನಗರ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!