ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ವಿಭಾಗವು ಕಾವೇರಿ ತಟದಲ್ಲಿ ಮುತ್ತತ್ತಿ ರಾಯನ ದರ್ಶನ ಎಂಬ ಹೆಸರಿನಲ್ಲಿ ವಿಶೇಷ ಟೂರ್ ಪ್ಯಾಕೇಜ್‍ನಡಿ ಸಾರಿಗೆ ಬಸ್ ಕಾರ್ಯಾಚರಣೆ ಪ್ರಾರಂಭಿಸಿದೆ.
ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಟು ಹಾರೋಹಳ್ಳಿ-ಕನಕಪುರ ಮಾರ್ಗವಾಗಿ ಚುಂಚಿಪಾಲ್ಸ್, ಶಿವನಾಂಕರೇಶ್ವರ ದೇವಸ್ಥಾನ, ಮೇಕೆದಾಟು, ಸಂಗಮ ಮುತ್ತತ್ತಿ, ಗಗನಚುಕ್ಕಿಗೆ ಈ ವಿಶೇಷ ಬಸ್ ಸಂಚರಿಸಲಿದೆ. ವಯಸ್ಕರಿಗೆ ₹ 450 ಹಾಗೂ ಮಕ್ಕಳಿಗೆ ₹ 300 ದರ ನಿಗದಿಪಡಿಸಲಾಗಿದೆ.ಪ್ರತಿ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಂದು ಈ ವಿಶೇಷ ಬಸ್ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಹೊರಡಲಿದೆ. ಚುಂಚಿಪಾಲ್ಸ್ ಬೆಳಿಗ್ಗೆ 9.30 ರಿಂದ 10.30 ರವರೆಗೆ, ಶಿವಾನಂಕರೇಶ್ವರ ದೇವಸ್ಥಾನ ಬೆಳಿಗ್ಗೆ 11ರಿಂದ ರಿಂದ 11.45, ನಂತರ ಮಧ್ಯಾಹ್ನ 12 ಗಂಟೆಗೆ ಸಂಗಮ ತಲುಪಲಿದೆ.
12ರಿಂದ 2-15 ರವರಗೆ ಸಂಗಮ ಮತ್ತು ಮೇಕೆದಾಟು ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 2.15ಕ್ಕೆ ಸಂಗಮದಿಂದ ಹೊರಟು 3.15ಕ್ಕೆ ಮುತ್ತತ್ತಿ ತಲುಪಲಿದೆ. ಮಧ್ಯಾಹ್ನ 3.15 ರಿಂದ 3.45 ರವರಗೆ ಮುತ್ತತ್ತಿಯ ಆಂಜನೇಯ ಸ್ವಾಮಿ ದೇವಸ್ಥಾನದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ನಂತರ ಗಗನಚುಕ್ಕಿ ಜಲಪಾತಕ್ಕೆ ಹೊರಟು ಸಂಜೆ 5 ರಿಂದ 7 ಗಂಟೆಯವರೆಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ರಾತ್ರಿ 7 ಗಂಟೆಗೆ ಗಗನಚುಕ್ಕಿಯಿಂದ ಹೊರಟು ಬೆಂಗಳೂರಿಗೆ ರಾತ್ರಿ 9.30ಕ್ಕೆ ವಾಪಸ್ ಆಗಲಿದೆ. ಉಪಾಹಾರ ಹಾಗೂ ಊಟವನ್ನು ಪ್ರವಾಸಿಗರೇ ಮಾಡಿಕೊಳ್ಳಬೇಕಿದೆ. ಪ್ರವಾಸ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಂಚಲನಾಧಿಕಾರಿ ಪುರುಷೋತ್ತಮ, ಮೊಬೈಲ್ 77609 90852, ಅಥವಾ ಕೆ.ಎಸ್.ಆರ್.ಟಿ.ಸಿ. ಕಾಲ್ ಸೆಂಟರ್ ನಂ.080-26252625 ಸಂಪರ್ಕಿಸುವಂತೆ ರಾಮನಗರ ಪ್ರಾದೇಶಿಕ ಸಾರಿಗೆ ನಿಯಂತ್ರಣಾಧಿಕಾರಿ ಮಹೇಶ್ ತಿಳಿಸಿದ್ದಾರೆ.
ಬರಹಕೃಪೆ: ರುದ್ರೇಶ್ವರ್ ಫೇಸ್ಬುಕ್ ವಾಲ್