ನಮ್ಮ ರಾಮನಗರ

ಸಂಸದ ಡಿ.ಕೆ. ಸುರೇಶ್‍ರವರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಡಿ.ಕೆ ಸುರೇಶ್‍ರವರು ಸದಾ ಲವಲವಿಕೆಯಿಂದ ಕ್ಷೇತ್ರದಲ್ಲಿ ಸುತ್ತಾಡುತ್ತಾ ಜನರ ಕಷ್ಟಸುಖಗಳಿಗೆ ಭಾಗಿಯಾಗುವ ಮೂಲಕ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವುದು ಹಾಗೂ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಬೇಕಾದ ಕೆಲಸಗಳನ್ನು ಅತ್ಯಂತ ಮುತುವರ್ಜಿ ವಹಿಸಿ ಮಾಡಿಸುವುದು ಸರ್ಕಾರದ ಸವಲತ್ತುಗಳನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಸಾರ್ವಜನಿಕರ ಮನಸ್ಸಿನಲ್ಲಿ ಉತ್ತಮ ಸಂಸದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನೀರು ಏಕೆ ಬೇಕು? ಹೇಗೆ ಕುಡಿಯಬೇಕು?


ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮನೆ ಮನೆಗೆ ಸರ್ಕಾರ ಯೋಜನೆಗಳು ಅವುಗಳನ್ನು ಪಡೆಯಲು ಏನುಮಾಡಬೇಕು ಎಂಬ ಮಾಹಿತಿ ಇರುವ ಕರಪತ್ರಗಳನ್ನು ತಲುಪಿಸಿ ಜನಸ್ನೇಹಿಯಾಗಿದ್ದರು.


ಈಗ ಸಹಾಯವಾಣಿಯನ್ನು ತೆರೆಯುವ ಮೂಲಕ ಮತ್ತಷ್ಟು ಕ್ಷೇತ್ರದ ಜನತೆಗೆ ಹತ್ತಿರವಾಗಿದ್ದಾರೆ. ಕ್ಷೇತ್ರದ ಜನತೆಯ ಕುಂದು ಕೊರತೆಗಳನ್ನು ಹೇಳಲು, ಸರ್ಕಾರದ ಯೋಜನೆಗಳು ಸವಲತ್ತುಗಳನ್ನು ತಿಳಿಯಲು ಮತ್ತು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು 080 37121133 ನಂಬರನ್ನು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಸಂಪರ್ಕಿಸಲು ಮಾನ್ಯ ಡಿ.ಕೆ. ಸುರೇಶ್ ರವರು ತಮ್ಮ ಕ್ಷೇತ್ರದ ಜನತೆಯಲ್ಲಿ ವಿನಂತಿ ಮಾಡಿದ್ದಾರೆ.
ಮಾನ್ಯ ಸಂಸದರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

ಗ್ರಾಮೀಣ ಪ್ರತಿಭೆ ಮಂಜುಪಾವಗಡಗೆ ಒಲಿದ ಬಿಗ್‍ಬಾಸ್ 8ನೇ ಸೀಸನ್ ವಿನ್ನರ್ ಕಪ್!

 

 

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!