ನಮ್ಮ ರಾಮನಗರ

ಅನಿಕೇತನ ಕನ್ನಡ ಸಾಂಸ್ಕೃತಿಕ ಬಳಗದ ವತಿಯಿಂದ ಪರಾಕ್ರಮ ದಿನಾಚರಣೆ ಕಾರ್ಯಕ್ರಮ 

ಚನ್ನಪಟ್ಟಣ :- ನೇತಾಜಿ ಸುಭಾಸ್ ಚಂದ್ರ ಬೋಸ್ ರವರು ಅಪ್ರತಿಮ ದೇಶಭಕ್ತ , ರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿ ಭಾರತೀಯರ ಏಕತೆ ಮತ್ತು ಸಮಗ್ರತೆಗಾಗಿ ಹೋರಾಡಿ  ದೇಶವನ್ನು ದಾಸ್ಯಮುಕ್ತವನ್ನಾಗಿ ಮಾಡಲು ಶ್ರಮಿಸಿದ ಭರತಮಾತೆಯ ಧೀರ ಕುವರ ಎಂದು   ಡಿವೈಎಸ್ಪಿ ಕೆ .ಎನ್. ರಮೇಶ್ ತಿಳಿಸಿದರು .

ಪಟ್ಟಣದ ಸಾರ್ವಜನಿಕ ಒಕ್ಕಲಿಗರ ವಿದ್ಯಾಸಂಸ್ಥೆ ಆವರಣದಲ್ಲಿ ಅನಿಕೇತನ ಕನ್ನಡ ಸಾಂಸ್ಕೃತಿಕ ಬಳಗದ ವತಿಯಿಂದ ಆಯೋಜಿಸಿದ್ದ  ಸುಭಾಷ್ ಚಂದ್ರ ಬೋಸ್ ರವರ ಜಯಂತಿ ಹಾಗೂ ಪರಾಕ್ರಮ ದಿನಾಚರಣೆ  ಕಾರ್ಯಕ್ರಮದಲ್ಲಿ ಬೋಸ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ  ಮಾತನಾಡಿದ ಅವರು ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಶ್ರಮಿಸಿದ ನೇತಾಜಿ ಅವರ ಜೀವನದ ಆದರ್ಶಗಳನ್ನು‌ ಮುಂದಿನ‌ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ. ಭಾರತವನ್ನು ಬ್ರಿಟಿಷ್ ದಾಸ್ಯದಿಂದ  ಮುಕ್ತಗೊಳಿಸಿ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ತಮ್ಮದೇ ಆದಂಥ ಉಪಾಯಗಳನ್ನು ಹೂಡಿ ಯಶಸ್ವಿಯಾಗಿದ್ದರು. ಇದರ ಪರಿಣಾಮವಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮೊದಲ ಬಾರಿಗೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟು ಅಲ್ಲಿ ತಿರಂಗಾ ಹಾರಿಸುವಲ್ಲಿ ಅವರು ಯಶಸ್ವಿಯಾಗಿದ್ದರು.ಇಂಥ     ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ   ತ್ಯಾಗ ಮತ್ತು ಬಲಿದಾನದಿಂದ ನಾವೆಲ್ಲ ಇಂದು  ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ನೇತಾಜಿ ಅವರ ಸಂದೇಶಗಳು ಇಂದಿಗೂ ಅನುಕರಣೀಯ. ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಸಿಂ .ಲಿಂ .ನಾಗರಾಜು ಮಾತನಾಡಿ ನೇತಾಜಿ ಅವರ‌ ಮೇಲೆ ಬಹುಮುಖ್ಯವಾಗಿ ಪ್ರಭಾವ ಬೀರಿದವರು ಸ್ವಾಮಿ ವಿವೇಕಾನಂದರು. ಮಹಾತ್ಮ ಗಾಂಧಿ ಅವರಿಗೆ ನೇತಾಜಿ ಅವರ ಅಪ್ರತಿಮ ಶಕ್ತಿಯ ಬಗ್ಗೆ ಅದಮ್ಯ ನಂಬಿಕೆಯಿತ್ತು. ಆದರೆ ಗಾಂಧಿಯವರದ್ದು ಶಾಂತಿಪಥ, ನೇತಾಜಿಯವರದ್ದು ಕ್ರಾಂತಿಪಥ. ಸ್ವಾತಂತ್ರ್ಯ ಗಳಿಸಲು ರಕ್ತವನ್ನು ಬೇಕಿದ್ದರೂ ಕೊಡುತ್ತೇನೆ. ಸ್ವಾತಂತ್ರ್ಯ ಪುಕ್ಕಟೆಯಾಗಿ ದೊರಕುವಿದಲ್ಲ ಎಂದು ಹೇಳುವುದರ ಮೂಲಕ ದೇಶದ ಜನತೆಯನ್ನು ನೇತಾಜಿ ಬಡಿದೆಬ್ಬಿಸಿದ್ದರು.ಬ್ರಿಟಿಷರನ್ನು‌ ಬಗ್ಗು ಬಡೆಯಲು ಕ್ರಾಂತಿಯ ಮಾರ್ಗವೇ ಸರಿ ಎಂದು ಹೋರಾಡಿದ ನೇತಾಜಿ ಅವರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದರು.

ಸಮನ್ವಿ ಮನೆಗೆ ಡಿ.ಕೆ. ಶಿವಕುಮಾರ್ ಭೇಟಿ. ಪೋಷಕರಿಗೆ ಸಾಂತ್ವನ ಹೇಳಿದ ಡಿಕೆಶಿ

ಅನಿಕೇತನ ಕನ್ನಡ ಬಳಗದ ಅಧ್ಯಕ್ಷ ಯೋಗೇಶ್ ಚಕ್ಕೆರೆ  ಮಾತನಾಡಿ  ಸುಭಾಷ್ ಚಂದ್ರ ಬೋಸ್ ರವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣದ ಹಂಗು ತೊರೆದು ಹೋರಾಡಿದ ಸ್ವಾತಂತ್ರ್ಯ  ಪ್ರೇಮಿ ಹಾಗೂ ಭಾರತದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ವೀರ ಮೇಧಾವಿ. ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ, ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ, ಅದು ನಾವು ಪಡೆದುಕೊಳ್ಳಬೇಕಾದದ್ದು  ಎಂಬುದಾಗಿ  ಕ್ರಾಂತಿಯ ಕಿಡಿಗಳನ್ನು ಹಬ್ಬಿಸಿ ಯುವಕರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ನಾಯಕರಲ್ಲಿ ಸುಭಾಷ್ ಚಂದ್ರ ಬೋಸ್ ಅಗ್ರಗಣ್ಯರಾಗಿದ್ದಾರೆ ಎಂದರು .

ಕನ್ನಡ ಪರಿಚಾರಕ ಓಂಕಾರಪ್ರಿಯ ಬಾಗೇಪಲ್ಲಿ  ಮಾತನಾಡಿ ಭಾರತೀಯ ರಾಷ್ಟ್ರೀಯ ಸೇನೆಯನ್ನು ಕಟ್ಟಿ  ದೇಶದ  ಸ್ವಾತಂತ್ರ್ಯಕ್ಕಾಗಿ ದಿಟ್ಟ ಹೋರಾಟ ಮಾಡಿದ  ಬೋಸ್ ರವರು   ಭಾರತದ ಯುವತಲೆಮಾರಿಗೆ ಸ್ಫೂರ್ತಿಯಾಗಿದ್ದಾರೆ.   ಸುಭಾಷರ ಜೀವನ ಮತ್ತು  ಅವರು ನಡೆದ ಹಾದಿ ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯ  ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್  ಮಾಜಿ ಅಧ್ಯಕ್ಷ ಎಂ. ಶಿವಮಾದು ,ಕವಿ ಕೂರಣಗೆರೆ ಕೃಷ್ಣಪ್ಪ ರವರು ಸುಭಾಷ್ ಚಂದ್ರ ಬೋಸರನ್ನು ಕುರಿತು  ಮಾತನಾಡಿದರು .ಕಾರ್ಯಕ್ರಮದಲ್ಲಿ ಭಾರತ ವಿಕಾಸ ಪರಿಷತ್ ಅಧ್ಯಕ್ಷ ವಸಂತಕುಮಾರ್, ಕಾರ್ಯದರ್ಶಿ ಬಿ.ಎನ್. ಕಾಡಯ್ಯ ,    ಎಸ್ಡಿಎಂಸಿ ಸಮನ್ವಯ ವೇದಿಕೆ ರಾಜ್ಯ ಉಪಾಧ್ಯಕ್ಷ ಎನ್ .ಎಂ. ಶಂಭೂಗೌಡ ,ಅಖಿಲ ಭಾರತ ವೀರಶೈವ ಮಹಾಸಭಾದ  ಜಿಲ್ಲಾಧ್ಯಕ್ಷ ಗುರುಮಾದಯ್ಯ , ಕವಿ ಸಿ .ಕೆ .ಯೋಗಾನಂದ , ಲಿಪಿಕ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಪ್ರಶಾಂತ್ ಶರ್ಮಾ, ರಂಗಕಲಾವಿದರಾದ ದಶವಾರ ಮಹೇಶ್ , ಕುಂತೂರುದೊಡ್ಡಿ ಪುಟ್ಟರಾಜು ,    ಬೆಸ್ಕಾಂ ಶಿವಲಿಂಗಯ್ಯ,   , ಸೈಯದ್ ಅಸ್ಮತುಲ್ಲಾ , ಎನ್ .ರಾಜು, ಎಚ್.ರಮೇಶ , ನಾರಾಯಣಗೌಡ, ನೀತಾ ಗೌಡ ,ಪ್ರೀತಂ ಗೌಡ, ಸಂದೇಶ್ ನಾಯಕ್ ,ಮೊದಲಾದವರು  ಉಪಸ್ಥಿತರಿದ್ದರು .ಗಾಯಕಿ ಮಾಲತಿ ಸುರೇಶ್ ದೇಶಭಕ್ತಿ ಗೀತಗಾಯನ ನಡೆಸಿಕೊಟ್ಟರು .

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!