ನಮ್ಮ ರಾಮನಗರ

“ಸಹಕಾರ ರತ್ನ ಪ್ರಶಸ್ತಿ”ಗೆ ಭಾಜನರಾದ ಕೆಎಂಎಫ್ ಮಾಜಿ ಅಧ್ಯಕ್ಷ ಪಿ. ನಾಗರಾಜು.

ಸುಮಾರು 25 ವರ್ಷಗಳಿಂದ ಸಹಕಾರಿ ರಂಗದಲ್ಲಿದ್ದು, 1999ರಿಂದ ಇಲ್ಲಿಯವರೆಗೂ ಸತತ 5 ಬಾರಿ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾಗಿ , 2001-2006ಅವಧಿಯ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ ಹಾಗೂ 2019-2014ರ ಅವಧಿಯ ಕೆಎಂಎಫ್ ಅಧ್ಯಕ್ಷರಾಗಿ ಸದಾ ರೈತ ಪರ ಚಿಂತನೆಯನ್ನು ಮೈ ಗೂಡಿಸಿಕೊಂಡು ಸಹಕಾರಿ ರಂಗದ ಹೈನುಗಾರಿಕೆ ಕ್ಷೇತ್ರಕ್ಕೆ ಗಣನೀಯ ಕೊಡುಗೆಗಳನ್ನು ನೀಡಿರುವ ಕೆಎಂಎಫ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಬೆಂಗಳೂರು ಒಕ್ಕೂಟದ ನಿರ್ದೇಶಕರಾಗಿರುವ ಮಾಯಗಾನಹಳ್ಳಿ ಪಿ. ನಾಗರಾಜು ಈ ಬಾರಿಯ ಸಹಕಾರ ರತ್ನ ಪಶಸ್ತಿಗೆ ಭಾಜನರಾಗಿದ್ದಾರೆ.

1963ರಲ್ಲಿ ಲೇ ಪುಟ್ಟಸ್ವಾಮಯ್ಯನವರ ಮಗನಾಗಿ ಜನಿಸಿದ ಪಿ. ನಾಗರಾಜು ಪದವಿವರೆಗೂ ವಿದ್ಯಾಭ್ಯಾಸವನ್ನು ಮಾಡಿ ನಂತರ ಪ್ರೋ. ನಂಜುಂಡಸ್ವಾಮಿಯವರ ನೇತೃತ್ವದ ರೈತ ಚಳುವಳಿಯ ಮೂಲಕ ಸಾರ್ವಜನಿಕ ರಂಗಕ್ಕೆ ಪಾದರ್ಪಣೆ ಮಾಡಿ ರೈತ ಹೋರಾಟಕ್ಕಾಗಿ ಬೆಳಗಾವಿ ಜೈಲಿನಲ್ಲಿಯೂ ಇದ್ದವರು. ಮಾಯಗಾನಹಳ್ಳಿ ಪಂಚಾಯಿತಿ ಸದಸ್ಯರಾಗಿ, ಜಿಲ್ಲಾಪಂಚಾಯಿತಿ ಸದಸ್ಯರಾಗಿ ಜನನಾಯಕರಾಗಿ ಬೆಳೆದು ಸಹಕಾರ ರಂಗದಲ್ಲಿ ಏನಾದರು ಸಾಧಿಸಬೇಕೆಂಬ ಅದಮ್ಯ ಛಲದೊಂದಿಗೆ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾಗುವ ಮೂಲಕ ಸಹಕಾರ ರಂಗಕ್ಕೆ ಪ್ರವೇಶಿಸಿದರು ನಂತರ ನಡೆದದ್ದೆಲ್ಲ ಇತಿಹಾಸ.

ಹಾಲು ಉತ್ಪಾದಕರಿಗೆ ಸೂಕ್ತ ಬೆಲೆ ಸಿಗಬೇಕು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ನಂದಿನಿ ಉತ್ಪನ್ನಗಳು ದೊರಕಬೇಕು ಸಹಕಾರ ರಂಗ ಅಭಿವೃದ್ದಿಯತ್ತ ಮುನ್ನಡೆಯಬೇಕು ಎಂಬ ಆಶಯದಂತೆ ಒಬ್ಬರಿಗಾಗಿ ಎಲ್ಲರೂ ಎಲ್ಲರಿಗಾಗಿ ಒಬ್ಬರು ಎಂತ ಸಹಕಾರ ತತ್ವದಂತೆ ಸರ್ವರ ಒಳಿತಿಗಾಗಿ ಎಲ್ಲಾ ಮಂಡಳಿ ನಿರ್ದೇಶಕರ ಸಹಕಾರ, ಸಮಸ್ತ ಹಾಲು ಉತ್ಪಾದಕರ ಪ್ರೋತ್ಸಾಹದಿಂದ ಹಲವಾರು ಅಭಿವೃದ್ದಿ ಕೆಲಸಗಳನ್ನು ಕೈಗೊಂಡಿದ್ದರು. ಸಸಿ ನೆಟ್ಟ ತಕ್ಷಣ ಫಲ ಕೊಡುವುದಿಲ್ಲ ಅದು ನಿಧನವಾಗಿ ಬೆಳೆಯಬೇಕು ಬೆಳೆದು ಫಲ ನೀಡಬೇಕು ಆ ರೀತಿ ಆರೋಗ್ಯವಂತ ಹಸು ಐಶ್ವರ್ಯ ಉತ್ಪನ್ನ ಎಂಬ ಧೈಯವಾಕ್ಯದಂತೆ ಹಾಲು ಉತ್ಪಾದಕರ ರಾಸುಗಳು ಆರೋಗ್ಯವಂತವಾಗಿದ್ದರೆ ಐಶ್ವರ್ಯ ತರುವಂತ ಉತ್ಪನ್ನಗಳನ್ನು ತಯಾರಿಸಬಹುದು ಆಗಾಗಿ ತಳಿ ಅಭಿವೃದ್ದಿ, ಪಶುಆಹಾರ ಈ ಕ್ಷೇತ್ರಗಳಿಗೆ ಹೆಚ್ಚು ಒತ್ತುಕೊಟ್ಟು ಮಾರುಕಟ್ಟೆ ವಿಸ್ತರಣೆ, ಮೂಲಭೂತ ಸೌಕರ್ಯ ಅಭಿವೃದ್ದಿಗೆ 1500 ಕೋಟಿಗೂ ಹೆಚ್ಚು ನನ್ನ ಅಧಿಕಾರವಧಿಯಲ್ಲಿ ವಿನಿಯೋಗಿಸಲಾಗಿರುತ್ತದೆ.

ಇವರು ಸಹಕಾರ ಚಳುವಳಿಯ ಬೆಳವಣಿಗೆಗೆ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಈ ಬಾರಿಯ ಸಹಕಾರ ರತ್ನ ಪ್ರಶಸ್ತಿಗೆ ಪಿ. ನಾಗರಾಜುರವರನ್ನು ಆಯ್ಕೆ ಮಾಡಿದೆ. ದಿನಾಂಕ 14.11.2020ರಂದು ವಿಧಾನ ಸೌಧದ ಬಾಂಕ್ವೇಟ್ ಹಾಲ್ ನಲ್ಲಿ ನಡೆಯುವ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಲಾಳ ಶ್ರೀ ಬಿ.ಎಸ್. ಯಡಿಯೂರಪ್ಪನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಇದು ನಮ್ಮ ರಾಮನಗರ ಜಿಲ್ಲೆಗೆ ಸಂದ ಗೌರವವಾಗಿದ್ದು, ಪಕ್ಷಾತೀತವಾಗಿ ಎಲ್ಲರೂ ಶ್ರೀ ಪಿ. ನಾಗರಾಜುರವರನ್ನು ಅಭಿನಂದಿಸಿದ್ದಾರೆ.

ಪಿ. ನಾಗರಾಜು ರವರು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರು ಮತ್ತು ಕೆಎಂಎಫ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸರ್ಕಾರ ಮತ್ತು ಮಂಡಳಿ ನಿರ್ದೇಶಕರ, ಹಾಲು ಉತ್ಪಾದಕರ ಸಹಕಾರದೊಂದಿಗೆ ಹೈನುಗಾರಿಕೆ ಕ್ಷೇತ್ರಕ್ಕೆ ನೀಡಿದ ಗಣನೀಯ ಕೊಡುಗೆಗಳ ಪಟ್ಟಿ.

 ರಾಸುಗಳ ಪಶು ಆಹಾರದ ಗುಣಮಟ್ಟದ ಪಶು ಆಹಾರ ತಜ್ಞರ ಜೊತೆ ಸಮಾಲೋಚಿಸಿ ರಾಸುಗಳಿಗೆ ಉತ್ತಮ ಪೌಷ್ಟಿಕಾಂಶದಿಂದ ಕೂಡಿರುವ ಪಶು ಆಹಾರ ತಯಾರಿಸುವ ನಿಟ್ಟಿನಲ್ಲಿ ಸೂತ್ರಬದಲಾವಣೆ ತಂದು ರಾಜ್ಯದ ಹಾಲು ಉತ್ಪಾದಕರ ಮನೆಮಾತಾಗಿರುವ ಉತ್ತಮ ಗುಣಮಟ್ಟದ ನಂದಿನಿ ಗೋಲ್ಡ್ ಪಶು ಆಹಾರವನ್ನು ಬಿಡುಗಡೆಗೊಳಿಸಲಾಗಿರುತ್ತದೆ. ಇದರಿಂದ ರಾಸುವಿನ ಆರೋಗ್ಯವು ಉತ್ತಮವಾಗಿದ್ದು, ಇದರಿಂದ ಹಾಲಿನ ಫ್ಯಾಟ್ 3.5.ರಿಂದ 4.5 ರವರೆಗೆ ಹಾಗೂ ಎಸ್.ಎನ್.ಎಫ್ ಸಹ ಹೆಚ್ಚಾಗಿರುವುದಲ್ಲದೆ ಹಾಲಿನ ಇಳುವರಿ ಗಣನೀಯವಾಗಿ ಹೆಚ್ಚಾಗುವ ಮೂಲಕ ರಾಜ್ಯದ ಹೈನುಗಾರಿಕೆಗೆ ಹೆಚ್ಚು ಲಾಭದಾಯಕವಾಗಿದೆ.

 ಹಾಲಿನ ಪುಡಿ ಘಟಕಗಳಿಗೆ ಹಾಲನ್ನು ನೀಡಿ ಹಾಲಿನ ಪೌಡರ್ ಮಾಡುವ ವಿಧಾನದಲ್ಲಿ ಸುಧಾರಣೆ ತಂದು ಪರಿವರ್ತನೆ ಬೆಲೆಯಲ್ಲಿ ಕಡಿಮೆಯಾಗಿ ವಾರ್ಷಿಕ ಸರಿಸುಮಾರು 20ರಿಂದ30 ಕೋಟಿ ಒಕ್ಕೂಟ/ಕೆಎಂಎಫ್ ಗೆ ಉಳಿತಾಯವಾಗಿರುತ್ತದೆ.

 ಹೈದರಾಬಾದ್ ಮತ್ತು ಮುಂಬಯಿಯಲ್ಲಿ ನಂದಿನಿ ಹಾಲು ಮಾರುಕಟ್ಟೆ ವಿಸ್ತರಣೆ: ಮುಂಬಯಿಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ: ವಿರೇಂದ್ರ ಹೆಗಡೆಯವರಿಂದ ನಂದಿನಿ ಹಾಲು ಮಾರಟಕ್ಕೆ ಚಾಲನೆ ಮಾಡಿಸಲಾಗಿರುತ್ತದೆ. ಪ್ರಸ್ತುತ ಹೈದರಾಬಾದ್ ನಲ್ಲಿ 1 ಲಕ್ಷ ಲೀ. ಮತ್ತು ಮುಂಬಯಿಯಲ್ಲಿ ಸರಾಸರಿ 2 ಲಕ್ಷ ಲೀ ಹಾಲು ಮಾರಾಟ ಮಾಡಲಾಗುತ್ತಿದೆ.

 ಉತ್ತರ ಕರ್ನಾಟಕ ಡೈರಿ ಅಭಿವೃದ್ಧಿ ಉಚಿತ ರೂ. 80ಕೋಟಿ ಅನುಧಾನ ನೀಡುವ ಮೂಲಕ ಉತ್ತರ ಕರ್ನಾಟಕ ಹೈನು ಅಭಿವೃದ್ದಿಗೆ ಸಹಕಾರ ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಧಾರವಾಡ ಪೌಡರ್ ಪ್ಲಾಂಟ್‍ಗೆ 20 ಕೋಟಿ ಅನುಧಾನ ನೀಡಲಾಗಿರುತ್ತದೆ.

 ರಾಜ್ಯದ ಹಾಲು ಉತ್ಪಾದಕರ ಸಹಕಾರ ಸಂಘಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ 3 ಲಕ್ಷ ಅನುಧಾನ ನೀಡಲಾಗಿರುತ್ತದೆ.

 ರಾಮನಗರ ಜಿಲ್ಲೆಯಲ್ಲಿ 106 ಹಾಲು ಉತ್ಪಾದಕರ ಸಹಕಾರ ಸಂಘಗಳ ರಚನೆ ಮತ್ತು 96 ಸ್ವಂತ ಕಟ್ಟಡಗಳ ನಿರ್ಮಾಣ

 ಬೆಣ್ಣೆ ತಯಾರಿಸುವ ವೆಚ್ಚ ಅಧಿಕವಾಗಿದ್ದನ್ನು ಮನಗಂಡು ಸುಧಾರಣೆ ಮೂಲಕ ಕಡಿಮೆ ವೆಚ್ಚದಲ್ಲಿ ಬೆಣ್ಣೆ ತಯಾರಿಸಲು ಕ್ರಮವಿಡಲಾಗಿ ಕೆಎಂಎಫ್ ಗೆ ವಾರ್ಷಿಕ 10 ಕೋಟಿ ಉಳಿತಾಯವಾಗಿರುತ್ತದೆ.

 ಪಶು ಆಹಾರ ತಯಾರಿಕೆಗೆ ಬಳಸುವ ಕಚ್ಚಾ ಪದಾರ್ಥಗಳನ್ನು ಸುಗ್ಗಿಕಾಲ (ಸೀಸನ್) ಖರೀದಿ ಮಾಡಲು ಸೂಚಿಸಿ, ಸುಗ್ಗಿಕಾಲದಲ್ಲಿ ಎನ್.ಸಿ.ಡಿ.ಎಫ್ ಇ.ಟೆಂಡರ್ ಮೂಲಕ ನೇರವಾಗಿ ಪಶು ಆಹಾರ ಬಳಕೆಗೆ ಮುಖ್ಯವಾಗಿ ಬಳಸುವ ಕಚ್ಚಾ ಪದಾರ್ಥವಾದ ಉತ್ತಮ ಗುಣಮಟ್ಟದ ಮುಸುಕಿನ ಜೋಳವನ್ನು ಖರೀದಿ ಮಾಡಿದರ ಪರಿಣಾಮ ಕಹಾಮಕ್ಕೆ ವಾರ್ಷಿಕ 35 ರಿಂದ 40 ಕೋಟಿ ಉಳಿತಾಯವಾಗಿರುತ್ತದೆ.

 ಪೌಚ್ ಫಿಲಂ ಕೆಜಿಗೆ ರೂ. 165 ರಿಂದ 170 ನೀಡುತ್ತಿದ್ದು, ನ್ಯೂನ್ಯತೆಯನ್ನು ಸರಿಪಡಿಸಿ ಟೆಂಡರ್‍ನಲ್ಲಿ ಹೆಚ್ಚಿನವರು ಭಾಗವಹಿಸಲು ವ್ಯವಸ್ಥೆ ಮಾಡಿದ ಪರಿಣಾಮ ಪ್ರತಿ ಕೆ.ಜಿ.ಗೆ ರೂ. 20/- ರಿಂದ 30/- ರವರೆಗೂ ಕಡಿಮೆ ದರ ಆಗಿ ಇದರಿಂದ ಒಟ್ಟಾರೆಯಾಗಿ ಕಹಾಮ/ಒಕ್ಕೂಟಗಳಿಗೆ ಸುಮಾರು 35 ರಿಂದ 40 ಕೋಟಿ ಉಳಿತಾಯವಾಗಿರುತ್ತದೆ.

 ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ರಾಸುಗಳಿಗೆ 2005-06ರಲ್ಲಿ ಗುಂಪು ವಿಮಾ ಸೌಲಭ್ಯವನ್ನು ಕಲ್ಪಿಸುವ ಯೋಜನೆಯನ್ನು ಜಾರಿಗೆ ತಂದು ಸುಮಾರು ಮೂವತ್ತು ಸಾವಿರ ರಾಸುಗಳಿಂದ ಪ್ರಾರಂಭವಾಗಿ ಇಂದು ಸುಮಾರು 2 ಲಕ್ಷ ರಾಸುಗಳಿಗೆ ವಿಮೆ ಸೌಲಭ್ಯ ವಿಸ್ತರಣೆಯಾಗಿ ರಾಜ್ಯದಲ್ಲೇ ಮೊದಲನೆಯದಾಗಿರುತ್ತದೆ. ಈ ಯೋಜನೆ ದೇಶದಲ್ಲೇ ಮುಂಚೂಣಿಯದಾಗಿರುತ್ತದೆ.

 ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ಕನ್ನಮಂಗಲ ಗ್ರಾಮದ ವ್ಯಾಪ್ತಿಯಲ್ಲಿನ ಕಹಾಮ ನಿವೇಶನದಲ್ಲಿ 100 ಮೆ:ಟನ್ ಸಾಮಥ್ರ್ಯದ ಹಾಲಿನ ಪುಡಿ ತಯಾರಿಕಾ ಘಟಕವನ್ನು ಅಂದಾಜು ರೂ.300 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುತ್ತದೆ.

 ಕನಕಪುರದಲ್ಲಿ ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ಹಾಲು ಉತ್ಪನ್ನ ಘಟಕ ಸ್ಥಾಪಿಸಲಾಗಿರುತ್ತದೆ.ಇದಕ್ಕೆ ಸುಮಾರು 450 ಕೋಟಿ ವೆಚ್ಚವಾಗಿರುತ್ತದೆ.

 

 

 ದಕ್ಷಿಣ ಕನ್ನಡ ಹಾಲು ಒಕ್ಕೂಟವು ರೂ.30 ಕೋಟಿ ವೆಚ್ಚದಲ್ಲಿ ದಿನಂಪ್ರತಿ 80 ಸಾವಿರ ಲೀಟರ್ ಸಾಮಥ್ರ್ಯದ ಪ್ಲೆಕ್ಸಿ ಪ್ಯಾಕ್ ಘಟಕದ ಸ್ಥಾಪನೆ ಯೋಜನೆಯು ಪೂರ್ಣಗೊಂಡು ಉದ್ಘಾಟನೆಯಾಗಿ ವಾಣಿಜ್ಯ ಉತ್ಪಾದನೆ ಪ್ರಾರಂಭಿಸಲಾಗಿರುತ್ತದೆ.

 ತುಮಕೂರು ಹಾಲು ಒಕ್ಕೂಟದಲ್ಲಿ ಅಂದಾಜು ರೂ.25 ಕೋಟಿ ವೆಚ್ಚದಲ್ಲಿ 80 ಸಾವಿರ ಲೀಟರ್ ಸಾಮಥ್ರ್ಯದ ಪ್ಲೆಕ್ಸಿ ಪ್ಯಾಕ್ ಘಟಕ ನಿರ್ಮಾಣ ಮಾಡಲಾಗಿರುತ್ತದೆ.

 ಹಸುಗಳು ಗಂಡು ಕರು ಹಾಕುತ್ತಿದ್ದರಿಂದ ರೈತರಿಗೆ ಲಾಭವಿಲ್ಲದಂತಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಸುಗಳು ಕೇವಲ ಹೆಣ್ಣು ಕರುಗಳನ್ನೇ ನೀಡುವಂತೆ ಲಿಂಗ ನಿರ್ಧರಿತ ವೀರ್ಯ ನಳಿಕೆಯ ಬಗ್ಗೆ ತಿಳುವಳಿಕೆ ನೀಡಲು “ ಲಿಂಗ ನಿರ್ಧಾರಿತಾ ವೀರ್ಯನಳಿಕೆಗಳ ಹಿಂದಿನ ಸ್ಥಿತಿಗತಿ ಮತ್ತು ಭವಿಷ್ಯದಲ್ಲಿ ಅದಕ್ಕಿರುವ ಅವಕಾಶದ” ( ಸೆಕ್ಸಡ್ ಸೆಮೆನ್) ಬಗ್ಗೆ 24.01.2015ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಿ ರೈತರಿಗೆ ಮಾಹಿತಿ ನೀಡಲಾಗಿರುತ್ತದೆ. ಸದರಿ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿರ್ದೇಶಕರು, ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ ಹಾಗೂ ನಿರ್ದೇಶಕರು, ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿರವರುಗಳು ಆ ದಿನವನ್ನು “ಸುವರ್ಣ ದಿನ “ ವೆಂದು ಬಣ್ಣಿಸಿರುತ್ತಾರೆ. ಹಾಗೂ ಮುಂದಿನ ದಿನಗಳಲ್ಲಿ ವಿದೇಶಗಳಿಂದ ಲಿಂಗ ನಿರ್ಧರಿತ ವೀರ್ಯ ನಳಿಕೆಯನ್ನು ಆಮದು ಮಾಡಿಕೊಳ್ಳಲಾಗುವ ಯೋಜನೆಯಿದ್ದು ಇದರಿಂದಾಗಿ ಶೇ 92 ರಷ್ಟು ಹೆಣ್ಣುಕರುಗಳೇ ಜನಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. “ ಸೆಕ್ಸಡ್ ಸೆಮೆನ್” ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರವು ಸಬ್ಸಿಡಿ ನೀಡಲಾಗಿರುತ್ತದೆ.

 ರಾಸುಗಳಿಗೆ ಕಾಲುಬಾಯಿ ಜ್ವಾರ ಉಲ್ಬಣವಾದಾಗ ರಾಮನಗರ ತಾಲ್ಲೂಕಿನ ಹಳ್ಳಿ ಹಳ್ಳಿಗೆ ತೆರಳಿ ಹಾಲು ಉತ್ಪಾದಕರ ಸಂಘಗಳ ಸಿಬ್ಬಂದಿಗಳು ಹಾಲು ಉತ್ಪಾದಕರ ಸಹಕಾರದೊಂದಿಗೆ ಟ್ಯಾಕ್ಟರ್‍ಗಳ ಮೂಲಕ ಔಷಧಿ ಸಿಂಪಡಿಸುವ ಕಾರ್ಯವನ್ನು ಮಾಡಿ ಎಲ್ಲರಲ್ಲೂ ಜಾಗೃತಿ ಮೂಡಿಸಿ ಕಾಲು ಬಾಯಿ ಜ್ವಾರ ನಿಯಂತ್ರಣಕ್ಕೆ ಬರುವಂತೆ ಮಾಡಲಾಗಿರುತ್ತದೆ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!