ವಿಟಮಿನ್ ಎ ಮತ್ತು ಮಿಟಮಿನ್ ಡಿ ಒಳಗೊಂಡಿರುವ ನಂದಿನಿ ಹಾಲು ಇನ್ನು ಮುಂದೆ ಗ್ರಾಹಕರಿಗೆ ಲಭ್ಯವಾಗಲಿದೆ. ಇಂದು (30.07.2019)ಕಹಾಮ ಕೇಂದ್ರ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ: ಸಿ.ಎನ್. ಮಂಜುನಾಥ್‍ರವರು ಈ ಹಾಲಿನ ಫ್ಯಾಕೇಟ್‍ಗಳನ್ನು ಬಿಡುಗಡೆಗೊಳಿಸಿದರು.
ಇಪ್ಪತ್ತ್ಮೂರು ದೇಶಗಳಲ್ಲಿ ‘ನಾರಿ ಗೌರವ್’ ಬೈಕ್ ಅಭಿಯಾನ
ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲದೇ ಪ್ರಸ್ತುತ ಇರುವ ದರದಲ್ಲಿ ವಿಟಮಿನ್ ಎ ಮತ್ತು ಡಿ ಯನ್ನು ಸೇರಿಸಿ ಕೊಡಲಾಗುತ್ತದೆಂದು ಕಹಾಮ ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ಶ್ರೀ ಎಂ.ಟಿ. ಕುಲಕರ್ಣಿರವರು ತಿಳಿಸಿದರು. ಸದರಿ ಯೋಜನೆಯನ್ನು ಟಾಟಾ ಟ್ರಸ್ಟ್ ಮತ್ತು ಎನ್.ಡಿ.ಡಿ.ಬಿ ಇವರ ಸಹಯೋಗದೊಂದಿಗೆ ಆರಂಭಿಸಲಾಗಿದ್ದು. ಇದೊಂದು ಅತ್ಯಂತ ಉತ್ತಮವಾದ ಕಾರ್ಯಕ್ರಮವೆಂದು ತಿಳಿಸಿದರು.
ಕಾಫಿ ಡೇ ಎಂ.ಡಿ. ಸಿದ್ದಾರ್ಥ್ ನಾಪತ್ತೆ ಕೇಸ್? ಏನಾಗಿದೆ ಓದಿ.
ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾದ ಡಾ: ಸಿ.ಎನ್. ಮಂಜುನಾಥ್‍ರವರು ಮಾತನಾಡಿ ವಿಟಮಿನ್ ಎ ಮತ್ತು ಡಿ ಕೊರತೆಯಿಂದ ಇರುಳುಗಣ್ಣು ರಿಕೆಟ್ಸ್ ಗಳಂತ ಕಾಯಿಲೆಗಳಲ್ಲದೆ ಹೃದ್ರೋಗ ಸಮಸ್ಯೆಗಳು ಕೂಡ ಬರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ವಿಟಮಿನ್ ಎ ಮತ್ತು ಡಿ ಇರುವಂತಹ ನಂದಿನಿ ಹಾಲನ್ನು ಬಳಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು. ಇಂದು ಮನುಷ್ಯನಿಗೆ ಆರೋಗ್ಯ ಚೆನ್ನಾಗಿರಬೇಕಾದರೆ ಬಹಳ ಮುಖ್ಯವಾಗಿ 5 ಅಂಶಗಳು ಪ್ರಮುಖವಾಗಿ ಬೇಕಾಗುತ್ತದೆ ಅದರಲ್ಲಿ ಕ್ರಮವಾಗಿ ಸನ್, ಡಯಟ್, ಎಕ್ಸ್‍ಜ್, ರೆಸ್ಟ್, ಮತ್ತು ಮಿಲ್ಕ್ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹೊಸದಾಗಿ ನಂದಿನಿ ಸಿರಿಧಾನ್ಯ ಲಡ್ಡು ಮತ್ತು ಸಿರಿಧಾನ್ಯ ಶಕ್ತಿ ನೂತವಾಗಿ ಬಿಡುಗಡೆಗೊಳಿಸಲಾಯಿತು. ಈ ಉತ್ಪನ್ನಗಳು ಆರೋಗ್ಯ ದೃಷ್ಟಿಯಿಂದ ಅತ್ಯಂತ ಉತ್ತಮವಾಗಿದ್ದು, ಗ್ರಾಹಕರು ಇದನ್ನು ಬಳಸುವಂತೆ ಮನವಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಟಾಟಾಟ್ರಸ್ಟ್ ಮತ್ತು ಎನ್.ಡಿ.ಡಿ.ಬಿ ಪ್ರತಿನಿಧಿಗಳು ಹಾಗೂ ಕಹಾಮದ ನಿರ್ದೇಶಕರುಗಳು ಮತ್ತು ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.