ಕೆಎಂಎಫ್ ಸುದ್ದಿ

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರಾಟ ಪ್ರಾರಂಭ

ಕರ್ನಾಟಕ ಹಾಲು ಮಹಾ ಮಂಡಳಿ (ಕೆ.ಎಂ.ಎಫ್) ರಾಷ್ಟ್ರದ 2 ನೇ ಅತಿ ದೊಡ್ಡ ಸಹಕಾರಿ ಹಾಲು ಮಹಾ ಮಂಡಳಿಯಾಗಿದ್ದು, ಪ್ರತಿನಿತ್ಯ ರಾಜ್ಯದ ಹೈನುಗಾರ ರೈತರಿಂದ 90 ಲಕ್ಷ ಲೀಟರ್ ಹಾಲು ಶೇಖರಣೆ ಮಾಡಿ ನಿತ್ಯ ಅಂದಾಜು ರೂ.24 ಕೋಟಿ ಹಣ ರೈತರಿಗೆ ಪಾವತಿಸಲಾಗುತ್ತಿದೆ. ರಾಜ್ಯದ ರೈತರಿಂದ ಶೇಖರಿಸುವ ಹಾಲನ್ನು ಸಂಸ್ಕರಿಸಿ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಕøಷ್ಟ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಲಸ್ಸಿ, ತುಪ್ಪ, ಬೆಣ್ಣೆ, ಸುವಾಸಿತ ಹಾಲು, ಯೋಗರ್ಟ್, ಪನೀರ್, ಚೀಸ್, ಪೇಡ, ಏಲಕ್ಕಿ ಪೇಡ, ಬಾದಾಮ್ ಬರ್ಪಿ, ಕ್ಯಾಶು ಬರ್ಫಿ, ಇನ್‍ಸ್ಟಂಟ್ ಪಾಯಸ ಮಿಕ್ಸ್, ರಸಗುಲ್ಲಾ ಇನ್ನೂ ಅನೇಕ ಉತ್ಪನ್ನಗಳನ್ನು ನಂದಿನಿ ಬ್ರಾಂಡ್‍ನಲ್ಲಿ ಸಕಾಲದಲ್ಲಿ ಒದಗಿಸುತ್ತಾ ಬರುತ್ತಿದೆ.

ಕಹಾಮವು ನಿತ್ಯ 45 ಲಕ್ಷ ಲೀಟರ್ ಹಾಲು ಸ್ಯಾಚೆ, ಯುಹೆಚ್‍ಟಿ, ಪ್ಲೆಕ್ಸಿ ಪೊಟ್ಟಣಗಳ ರೂಪದಲ್ಲಿ ಮಾರಾಟ ಮಾಡುವುದರ ಜೊತೆಗೆ ರಾಷ್ಟ್ರದ ಇತರೆ ಪ್ರಮುಖ ನಗರ ಪ್ರದೇಶಗಳಲ್ಲಿನ ಗ್ರಾಹಕರಿಗೂ ಸಹ ಗುಣಮಟ್ಟದ ಹಾಲು ದೊರಕುವಂತೆ ಮಾಡುವುದರ ಜೊತೆಗೆ ನಂದಿನಿ ಚಿಲ್ಲರೆ ಹಾಲು ಮಾರಾಟ ವಿಸ್ತರಿಸುವ ಉದ್ದೇಶದಿಂದ ನೆರೆರಾಜ್ಯಗಳ ಪ್ರಮುಖ ನಗರಗಳಾದ ಮುಂಬೈ, ಪುಣೆ, ಚೆನೈ, ಹೈದರಬಾದ್, ವಿಜಯವಾಡ, ಸೊಲ್ಲಾಪುರ್ ಮತ್ತು ಗೋವಾ ಪ್ರದೇಶಗಳಲ್ಲಿ ಪ್ರತಿದಿನ 3.0 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದ್ದು, ಅಲ್ಲಿನ ಸ್ಥಳೀಯರಿಂದ ನಂದಿನಿ ಹಾಲಿನ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ರಾಷ್ಟ್ರ ಮಟ್ಟದಲ್ಲಿ ನಂದಿನಿ ಬ್ರಾಂಡ್ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ.

ಪ್ರಸ್ತುತ, ನಂದಿನಿ ಹಾಲಿನ ಮಾರಾಟ ವಿಸ್ತರಣೆಯಲ್ಲಿ ಮತ್ತೊಂದು ಮೈಲುಗಲ್ಲು ಆಗಿ ದಿನಾಂಕ 01.08.2021 ರಂದು ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ “ನಂದಿನಿ ಹಾಲು ಮತ್ತು ಮೊಸರು” ಮಾರಾಟ ಪ್ರಾರಂಭಿಸಲಾಗಿದ್ದು, ಮಹಾರಾಷ್ಟ್ರ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳು ಹಾಗು ಹಾಲಿ ವಿರೋಧ ಪಕ್ಷದ ನಾಯಕರಾದ ಶ್ರೀ. ದೇವೆಂದ್ರ ಫಡ್ನಾವಿಸ್ ರವರು ನಂದಿನಿ ಹಾಲು ಮಾರಾಟ ವಿಸ್ತರಣೆಗೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ನಾಗ್‍ಪುರ್ ನಗರದ ಘನ ಪೂಜ್ಯ ಮಹಾಪೌರರಾದ ಶ್ರೀ ದಯಾಶಂಕರ್ ತಿವಾರಿಯವರು ಉಪಸ್ಥಿತರಿದ್ದು ನಾಗ್‍ಪುರ್‍ದಲ್ಲಿ ಉತ್ತಮ ದರ ಗುಣಮಟ್ಟದ ನಂದಿನಿ ಹಾಲು ಬಿಡುಗಡೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಕಹಾಮದ ಅಧ್ಯಕ್ಷರಾದ ಶ್ರೀ. ಬಾಲಚಂದ್ರ ಲ. ಜಾರಕಿಹೊಳಿ ರವರು, ವಿಜಯಪುರ ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀ. ಸಾಂಬಾಜಿ ಎಸ್ ಮಿಸಳೆ ರವರು, ಕಹಾಮ ಹಾಗು ವಿಜಯಪುರ ಹಾಲು ಒಕ್ಕೂಟದ ಆಡಳಿತ ಮಂಡಳಿ ಸದಸ್ಯರುಗಳು, ಕಹಾಮದ ವ್ಯವಸ್ಥಾಪಕ ನಿರ್ದೇಶಕರು ಆದ ಶ್ರೀ. ಬಿ ಸಿ ಸತೀಶ್, ಕೆಸಿಎಸ್ ರವರು ಉಪಸ್ಥಿತರಿದ್ದರು.

 

 

 

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!