ನಮ್ಮ ರಾಮನಗರ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಈ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಪರ ಸಂಘಟನೆಗಳು ನಗರದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತ್ಯೇಕವಾಗಿ ಜಮಾವಣೆಗೊಂಡ ದಲಿತ ಸೇನೆ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಭಾರತೀಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಒಂದಷ್ಟು ಹೊತ್ತು ಮೆರವಣಿಗೆ ಹಾಗೂ ಪ್ರತಿಭಟನೆ ನಡೆಸಿದರು. ಆನಂತರ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡರ ಮುಖೇನ ರಾಷ್ಟ್ರಪತಿ ಅವರಿಗೆ ತಮ್ಮ ಅಹವಾಲುಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದರು.
ಸೇವಾ ಭದ್ರತೆಗಾಗಿ ಒತ್ತಾಯಿಸಿ ಆರೋಗ್ಯ ಇಲಾಖೆಯ ಎನ್ಎಚ್ಎಂ, ಗುತ್ತಿಗೆ, ಹೊರಗುತ್ತಿಗೆ ನೌಕರರ ಮುಷ್ಕರ
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ಉತ್ತರ ಪ್ರದೇಶದ ಹತ್ರಾಸ್ ಪಟ್ಟಣದಲ್ಲಿ ದಲಿತ ಯುವತಿ ಮನಿಷಾ ವಾಲ್ಮೀಕಿ ಎಂಬಾಕೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ನಾಲ್ವರು ಅರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಕುಟುಂಬ ಸದಸ್ಯರಿಗೇ ಗೊತ್ತಾಗದಂತೆ ಅತ್ಯಾಚಾರ ಸಂತ್ರಸ್ತೆಯ ಶವಸಂಸ್ಕಾರ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವರ್ತನೆ ಬಗ್ಗೆಯೂ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳಿಗೂ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ದಕ್ಷಿಣಾ ಮಹಾಕಾಳಿ ದ್ಯಾವಪಟ್ಟಣ ಶ್ರೀಕ್ಷೇತ್ರದಲ್ಲಿ ಕೊರೋನಾ ಮಹಾಮಾರಿ ನಿರ್ಮೂಲನೆಗಾಗಿ ಹೋಮ
ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಯೋಗಿ ಆದಿತ್ಯನಾಥ ಸರ್ಕಾರ ಅಧಿಕಾರಕ್ಕೆ ಬಂದ ನಂತರವಂತೂ ಆ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಶೋಷಿತ ಹಣ್ಣುಮಕ್ಕಳ ಮೇಲೆ ಮುಂದುವರೆದ ಸಮುದಾಯದವರು ನಿರಂತರವಾಗಿ ಅತ್ಯಾಚಾರ, ಕೊಲೆ, ಲೈಂಗಿಕ ದೌರ್ಜನ್ಯ ಎಸಗುತ್ತಿದ್ದು, ಸರ್ಕಾರ ಇದನ್ನು ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದರು.
ಆಡಳಿತ ನಡೆಸುವಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪೂರ್ಣ ರೋಗಿಯಂತಾಗಿದ್ದು ಅವರಿಗೇ ಚಿಕಿತ್ಸೆ ಕೊಡಿಸಬೇಕಿದೆ. ಹಿಂದುತ್ವ ಪ್ರತಿಪಾದಿಸುವ ಇವರು ಹಿಂದುಳಿದ ವರ್ಗಗಳ ಹಿಂದುಗಳನ್ನು ರಕ್ಷಿಸುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ತಾವು ಅಧಿಕಾರಕ್ಕೆ ಬಂದಾಗಿನಿಂದಲೂ ಮೇಲ್ವರ್ಗದವರನ್ನು ಮಾತ್ರ ಸಮರ್ಥಿಸಿಕೊಳ್ಳುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ವಿರೋಧಿಯಾದ ಉತ್ತರ ಪ್ರದೇಶ ಸರ್ಕಾರವನ್ನು ಈ ಕೂಡಲೇ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ದಲಿತ ಸೇನೆ ಜಿಲ್ಲಾಧ್ಯಕ್ಷ ಅಶೋಕ್, ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್, ಯುವ ಘಟಕದ ಜಿಲ್ಲಾಧ್ಯಕ್ಷ ನರೇಶ್, ಪದಾಧಿಕಾರಿ ತುಂಗಣಿ ಉಮೇಶ್, ರಾಮನಗರ ತಾಲ್ಲೂಕು ಅಧ್ಯಕ್ಷ ಆನಂದ್, ಮಾಗಡಿ ಅಧ್ಯಕ್ಷ ನಾಗರಾಜು, ಮಹಿಳಾ ಪದಾಧಿಕಾರಿಗಳಾದ ಗಿರಿಜಮ್ಮ, ಯಶೋಧ, ಶೈಲಜಾ ಇದ್ದರು.
ದೇವಸ್ಥಾನದಲ್ಲಿ ಗಂಟೆಯ ನಾದ, ಭಕ್ತಿಯಿಂದ ನಮಿಸಿದ ನವಿಲು ಅಚ್ಚರಿ ಆದರೂ ಸತ್ಯ.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಂಗಳೂರು ವಿಭಾಗೀಯ ಸಂಚಾಲಕ ಪಿ.ಸೋಮಶೇಖರ್, ದಲಿತ ಮುಖಂಡ ಶಿವಕುಮಾರ ಸ್ವಾಮಿ, ಜಿಲ್ಲಾ ಸಂಘಟನಾ ಸಂಚಾಲಕ ಗುರುಲಿಂಗಯ್ಯ,ಬಿ.ಸುರೇಶ್, ಗೋವಿಂದರಾಜು, ವೆಂಕಟರಾಮಯ್ಯ, ಎಚ್.ಎಸ್.ಸಿದ್ದಯ್ಯ, ಕೃಷ್ಣಯ್ಯ,ಕನಕಪುರದ ರಮೇಶ್ ಕುಮಾರ್, ಗಂಗಾಧರ್ ಸ್ವಾಮಿ ಹಾಗೂ ಭಾರತೀಯ ವಿದ್ಯಾರ್ಥಿ ಸಂಘದ ಪ್ರಮುಖ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
-Hemanthgowda