ನಮ್ಮ ರಾಮನಗರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಬಗೆಯ ಗುತ್ತಿಗೆ, ಎನ್ಎಚ್ಎಂ ಹಾಗೂ ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯವ್ಯಾಪಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಬೆಂಬಲಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲಾ ಬಗೆಯ ಗುತ್ತಿಗೆ, ಎನ್ಎಚ್ಎಂ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ದಕ್ಷಿಣಾ ಮಹಾಕಾಳಿ ದ್ಯಾವಪಟ್ಟಣ ಶ್ರೀಕ್ಷೇತ್ರದಲ್ಲಿ ಕೊರೋನಾ ಮಹಾಮಾರಿ ನಿರ್ಮೂಲನೆಗಾಗಿ ಹೋಮ
ನಗರದ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಎದುರು ಸೋಮವಾರ ಜಮಾಯಿಸಿದ ವೈದ್ಯರು, ಶುಶ್ರೂಷಕರು, ಗುತ್ತಿಗೆ, ಎನ್ಎಚ್ಎಂ ಹಾಗೂ ಹೊರಗುತ್ತಿಗೆ ನೌಕರರು, ಕೊರೋನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ತಮ್ಮಗಳ ಬೇಡಿಕೆಗಳನ್ನು ವಿಶೇಷವಾಗಿ ಪರಿಗಣಿಸಿ, ಸಮಸ್ಯೆಗಳಿಗೆ ತುರ್ತಾಗಿ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒಕ್ಕೊರಲಾಗಿ ಒತ್ತಾಯಿಸಿದರು.
ರಾಮ್ ಘಡ್ ರಾಕರ್ಸ್ ಚಾರಣ -5 |Ramghad Rockers Trekking –
ಈ ಸಂದರ್ಭರದಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರು, ರಾಜ್ಯ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಯೋಜನೆಯಡಿಯಡಿ ಎನ್ಎಚ್ಎಂ, ಒಳಗುತ್ತಿಗೆ, ಹೊರಗುತ್ತಿಗೆಯಂತಹ ವಿವಿಧ ರೀತಿಯಲ್ಲಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ತಜ್ಞ ವೈದ್ಯರು, ಶುಶ್ರೂಷಕರು, ಪ್ರಯೋಗ ಶಾಲಾ ತಂತ್ರಜ್ಞರು, ಕಚೇರಿ ಸಿಬ್ಬಂದಿ, ಗಣಕಯಂತ್ರ ಸಹಾಯಕರು, ಆಪ್ತ ಸಮಾಲೋಚಕರು, ಗ್ರೂಪ್ ಡಿ, ಚಾಲಕರು ಹಾಗೂ ಕ್ಷೇತ್ರ ಸಿಬ್ಬಂದಿಗಳಂತಹ ಹಲವಾರು ವೃಂದದ 500ಕ್ಕೂ ಹಚ್ಚು ಸಿಬ್ಬಂದಿಗಳು ಇದ್ದೇವೆ ಎಂದರು.
ಕೊನೆಗೂ ಸಿಕ್ತು ಕೊರೊನಾಗೆ ಮದ್ದು!? ಓದಿ.
ಅದೇ ರೀತಿ ರಾಜ್ಯವ್ಯಾಪಿ 30 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿದ್ದು, ನಮ್ಮ ಬೇಡಿಕೆಗಳಾದ ಸೇವಾಭದ್ರತೆ, ಸಮಾನ ವೇತನ, ಎಚ್.ಆರ್. ಪಾಲಿಸಿ ಸೇರಿದಂತೆ ವಿವಿಧ ಭತ್ಯೆಗಳಂತಹ ಬೇಡಿಕೆಗಳ ಈಡೇರಿಕೆಗಾಗಿ ಸಂಘವು ಕಳೆದ ತಿಂಗಳ 24ರಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು, ಇದನ್ನು ಬೆಂಬಲಿಸಿ ಜಿಲ್ಲಾ ಘಟಕದ ಎಲ್ಲಾ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇವೆ ಎಂದು ತಿಳಿಸಿದರು.
ಎನ್ ಎಚ್ ಎಂ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಪದ್ಮರೇಖಾ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ, ವೈದ್ಯರಾದ ಡಾ.ಮಂಜುನಾಥ್, ಡಾ.ರಾಜು, ಡಾ.ಜಗದೀಶ್, ವೈದ್ಯಕೀಯ ಸಿಬ್ಬಂದಿಗಳಾದ ವಸುಂಧರಾ, ಪರಿಕ್ಷೀತ್ ಗೌಡ, ಜಿಲ್ಲಾ ತಂಬಾಕು ನಿಯಂತ್ರಣಾ ಕಚೇರಿಯ ಎ.ಜಿ.ಚಂದ್ರಶೇಖರ್ ಸೇರಿದಂತೆ ಅನೇಕರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಬೆಂಬಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಬಗೆಯ ಗುತ್ತಿಗೆ, ಎನ್ಎಚ್ಎಂ ಹಾಗೂ ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಲ್ಲಾ ಬಗೆಯ ಗುತ್ತಿಗೆ, ಎನ್ಎಚ್ಎಂ ಹಾಗೂ ಹೊರಗುತ್ತಿಗೆ ನೌಕರರ ಸಂಘವು ರಾಜ್ಯವ್ಯಾಪಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ಪ್ರತಿಭಟನಾಕಾರರ ಜೊತೆ ಸಾಂಕೇತಿಕವಾಗಿ ಭಾಗವಹಿಸುವ ಮೂಲಕ ನೌಕರರಿಗೆ ನೈತಿಕ ಶಕ್ತಿ ತುಂಬಿತು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ.ಬೈರಲಿಂಗಯ್ಯ,ರಾಜ್ಯ ಪರಿಷತ್ ಸದಸ್ಯ ಕೆ.ಸತೀಶ್, ಶಿವಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
-Hemanthgowda