ನಮ್ಮ ರಾಮನಗರ

ಪ್ರಗತಿಪರ ಕೃಷಿಕ ತ್ಯಾಗರಾಜು ತೋಟದಲ್ಲಿ ಮಾವು ಪುನಶ್ಚೇತನ ತರಬೇತಿ, ತಾಂತ್ರಿಕ ಪ್ರಾತ್ಯಕ್ಷಿಕೆ

ನಮ್ಮ ರಾಮನಗರ: ಮಾವು ಸಮೃದ್ಧ ಇಳುವರಿಗೆ ವರ್ಷಕ್ಕೊಂದು ಬಾರಿ ಟ್ರಿಮ್ (ಅನಗತ್ಯ ಕೊಂಬೆಗಳನ್ನು ಕತ್ತರಿಸುವುದು) ಅತ್ಯಗತ್ಯ ಎಂದು
ಬೆಂಗಳೂರಿನ ಐಐಎಚ್ಆರ್ ವಿಜ್ಞಾನಿ ಡಾ.ಬಿ.ನಾರಾಯಣಸ್ವಾಮಿ ಕಿವಿಮಾತು ಹೇಳಿದರು.

ತಾಲ್ಲೂಕಿನ ಪೇಟೆ ಕುರುಬರಹಳ್ಳಿಯ ಪ್ರಗತಿಪರ ಕೃಷಿಕ, ಹಿರಿಯ ಪತ್ರಕರ್ತ ಆಭರಣ ತ್ಯಾಗರಾಜು ಅವರ ಮಾವು ತೋಟದಲ್ಲಿ ಶನಿವಾರ ರೈತರಿಗಾಗಿ ಹಮ್ಮಿಕೊಂಡಿದ್ದ ಮಾವು ಪುನಶ್ಚೇತನ ತರಬೇತಿ ಕಾರ್ಯಕ್ರಮದಲ್ಲಿ ತಾಂತ್ರಿಕ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ನೀಡಿ ಅವರು ಮಾತನಾಡಿದರು.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ, ರಾಮನಗರ ಜಿಲ್ಲೆಯ ಮಣ್ಣು ಮತ್ತು ನೀರು ಇಂದಿಗೂ ಅತ್ತ್ಯುತ್ತಮವಾಗಿದ್ದು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹೇಳಿ ಮಾಡಿಸಿದಂತಿವೆ. ಜೂನ್‌-ಜುಲೈನಲ್ಲಿ ಮಾವು ಪುನಶ್ಚೇತನ ಕೆಲಸಕ್ಕೆ ಕೈ ಹಾಕಬೇಕು. ತೋಟಗಾರಿಕಾ ತಜ್ಞರು ಅಥವಾ ಸ್ಥಳೀಯ ತೋಟಗಾರಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಕಾಲ ಕಾಲಕ್ಕೆ ಅನುಗುಣವಾಗಿ ಮಾರ್ಗದರ್ಶನ ಹಾಗೂ ಮಾಹಿತಿಗಳನ್ನು ಪಡೆದುಕೊಂಡು ಮಾವು ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ಸಲಹೆ ನೀಡಿದರು.
ರೈತರು ತಮ್ಮ ಹೊಲಗಳಲ್ಲಿ ಹತ್ತು ಬೆಳೆ ಬೆಳೆದರೂ ಅವುಗಳಿಗೆ ಕೃಷಿ ಅಥವಾ ತೋಟಗಾರಿಕೆ ಇಲಾಖೆಯವರು ಶಿಫಾರಸ್ಸು ಮಾಡಿದ ಪೋಷಕಾಂಶಗಳನ್ನು ಅಯಾ ಬೆಳೆಯ ಬುಡಕ್ಕೆ ನೀಡಬೇಕಾಗುತ್ತದೆ. ಮಾವು ಬೆಳೆಗೂ ಕೂಡ ಇದೇ ನೀತಿಯನ್ನು ಅನುಸರಿಸಬೇಕಾಗುತ್ತದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಹರ್ಷ ಮಾತನಾಡಿ, ಮಣ್ಣು ಹಾಗೂ ನೀರು ಪರೀಕ್ಷೆಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಟ್ಟರು.ಪ್ರಗತಿಪರ ಮಾವು ಬೆಳೆಗಾರ ತ್ಯಾಗರಾಜು ತಮ್ಮ ಕೃಷಿ ಅನುಭವವನ್ನು ರೈತರೊಂದಿಗೆ ಹಂಚಿಕೊಂಡರು.
ವಿಜ್ಞಾನಿ ಡಾ.ಅರ್.ವೆಂಕಟಕುಮಾರ್, ತೋಟಗಾರಿಕೆ ಅಧಿಕಾರಿ ಶಿವಶಂಕರ್ , ಪ್ರಗತಿಪರ ರೈತ ಮಹಿಳೆ ಶಶಿಕಲಾ ತ್ಯಾಗರಾಜು ಹಾಗೂ ಐವತ್ತಕ್ಕೂ ಹೆಚ್ಚು ಮಾವು ಬೆಳೆಗಾರರು ಭಾಗವಹಿಸಿದ್ದರು.

-Hemanthgowda

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!