ರಂಗಕರ್ಮಿ, ನಟ ಮಾಸ್ಟರ್ ಹಿರಣ್ಣಯ್ಯನವರು ಇಂದು (ಗುರುವಾರ) ವಿಧವಶರಾಗಿದ್ದಾರೆ. ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ನಟ ಮಾಸ್ಟರ್ ಹಿರಣ್ಣಯ್ಯನವರು ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ.
ಮಾಸ್ಟರ್ ಹಿರಣ್ಣಯ್ಯನವರ ತಂದೆ ಕೆ. ಹಿರಣ್ಣಯ್ಯನವರು ಅವರೂ ಕೂಡ ನಟರು. ಕಲ್ಚರ್ಡ್ ಕಮೆಡಿಯನ್ ಎಂದೇ ಖ್ಯಾತರು. ತಾಯಿ ಶಾರದಮ್ಮ. ತಂದೆ 1940ರಲ್ಲಿ ರಚಿಸಿ, ನಿರ್ದೇಶಿಸಿದ ಚಲನಚಿತ್ರ ವಾಣಿಯಲ್ಲಿ ಮಾಸ್ಟರ್ ಹಿರಣ್ಣಯ್ಯನವರು ಬಾಲನಟನಾಗಿ ಪಾದಾರ್ಪಣ ಮಾಡಿದ್ದರು.
ಹಿರಣ್ಣಯ್ಯ ಮಿತ್ರ ಮಂಡಲಿ ಸ್ಥಾಪಿಸಿದ್ದ ಹಿರಣ್ಣಯ್ಯನವರು ಲಂಚಾವತಾರ ನಾಟಕ ರಚಿಸಿ ರಂಗ ಪ್ರಯೋಗ ಪ್ರಾರಂಭಿಸಿದ್ದರು. ನಟರತ್ನಾಕರ ಬಿರುದು ಹಿರಣ್ಣಯನವರಿಗಿತ್ತು. ನಾಟಕಗಳಲ್ಲಿ ಸಮಾಜದ ಓರೆಕೋರೆಗಳನ್ನು ತಿದ್ದುವುದಕ್ಕೆ ಆದ್ಯತೆ ನೀಡುತ್ತಿದ್ದರು. ಸಾಮಾಜಿಕ ವಿಷಯವೇ ನಾಟಕದ ವಿಷಯ ಆಗಿರುತ್ತಿತ್ತು. ಹಿರಣ್ಣಯ್ಯನವರ ನಾಟಕಗಳು ವಿದೇಶದಲ್ಲಿ ಜನಪ್ರಿಯಗೊಂಡಿದ್ದವು.
ನೇರ ನಡೆ ನುಡಿಯ ಮಾಸ್ಟರ್ ಹಿರಣ್ಣಯ್ಯನವರು ವಿಡಂಬನಾತ್ಮಕ ನಾಟಕಗಳು, ಧಾರಾವಾಹಿಗಳಿಗೆ ಹೆಸರುವಾಸಿ. ಅವರ ಲಂಚಾವತಾರ ನಡುಬೀದಿ ನಾರಾಯಣ ನಾಟಕಗಳು ಮತ್ತು ಎತ್ತಂಗಡಿ ವೆಂಕಟಪ್ಪ ಧಾರಾವಾಹಿಗಳು ಜನಮಾನಸದಲ್ಲಿ ಸದಾ ಉಳಿದಂತವು.
ಮಾಸ್ಟರ್ ಹಿರಣ್ಣಯ್ಯನವರಿಗೆ ಭಾವಪೂರ್ಣ ನುಡಿನಮನಗಳು.