ಸುದ್ದಿ

ನೀರಿನ ಅಭಾವ ಧರ್ಮಸ್ಥಳದ ಭೇಟಿ ಕೆಲವು ದಿನ ಮುಂದೂಡಿ- ಡಿ. ವೀರೇಂದ್ರ ಹೆಗ್ಗಡೆ.

ಬೇಸಿಗೆಯ ಬೇಗೆಯಿಂದ ಎಲ್ಲೆಡೆ ನೀರಿನ ಅಭಾವ, ನೀರಿಗೆ ಕೊರತೆ, ನೀರಿಲ್ಲದೇ ಯಾವ ಕೆಲಸವೂ ಇಲ್ಲ! ನೀರಿನ ಅಭಾವದಿಂದ ಧರ್ಮಸ್ಥಳದ ಭೇಟಿಯನ್ನು ಸ್ವಲ್ಪದಿನ ದಿನದ ಮಟ್ಟಿಗೆ ಮುಂದೂಡಿಯೆಂದು ಸ್ವತ: ಧರ್ಮಾಧಿಕಾರಿ ಡಾ: ವೀರೇಂದ್ರ ಹೆಗ್ಗಡೆಯವರೇ ಮನವಿ ಮಾಡಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಅವರ ಪತ್ರದಲ್ಲಿರುವಂತೆ, ಈ ತಿಂಗಳಿನಲ್ಲಿ ಬೇಸಿಗೆಯ ಬಿಸಿಲಿನ ತೀವ್ರತೆಯಿಂದಾಗಿ ದೇಶದಾದ್ಯಂತ ನೀರಿನ ಅಭಾವವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನೀರಿಗಾಗಿ ಜನರು ತುಂಬಾ ಕಷ್ಟಪಡುತ್ತಿದ್ದಾರೆ. ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟವಾದಂತೆ ರೇಶನ್ ಮುಖಾಂತರ ನೀರನ್ನು ಜಿಲ್ಲಾಡಳಿತವು ವಿತರಣೆ ಮಾಡುತ್ತಿದ್ದು ವಾರಕ್ಕೆ 2 ಅಥವಾ 3 ದಿನ ಮಾತ್ರ ಜನರಿಗೆ ನೀರು ದೊರಕುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೂಡಾ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನೇತ್ರಾವತಿ ನದಿಯಲ್ಲಿ ನೀರಿನ ಹರಿವು ತೀವ್ರ ತರದಲ್ಲಿ ಕಡಿಮೆಯಾಗುತ್ತಿದೆ.

ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳ ಉಪಯೋಗಕ್ಕೆ ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ಆದುದರಿಂದ ಭಕ್ತಾದಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡಿ ಸಹಕರಿಸುವಂತೆ ಕೋರುತ್ತೇವೆ- ಡಿ. ವೀರೇಂದ್ರ ಹೆಗ್ಗಡೆಯವರು.

ಈ ರೀತಿ ಪತ್ರಿಕಾ ಪ್ರಕಟಣೆಯನ್ನು ಧರ್ಮಸ್ಥಳದಿಂದ ಹೊರಡಿಸಿದ್ದು, ಇದನ್ನು ಎಲ್ಲರಿಗೂ ತಲುಪಿಸಿ ಧರ್ಮಸ್ಥಳದ ಭೇಟಿಯನ್ನು ಪ್ರವಾಸಿಗಳು/ಭಕ್ತಾದಿಗಳು ಮುಂದೂಡಲು ಸಹಕರಿಸಬೇಕಾಗಿ ಮನವಿ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!