ಸಿನಿಮಾ

ಸಕತ್ ಸದ್ದು ಮಾಡುತ್ತಿರುವ ಕುರುಕ್ಷೇತ್ರ ಸಿನಿಮಾ! ಇವತ್ತು ಮತ್ತೊಂದು ಟ್ರೈಲರ್ ಬಿಡುಗಡೆ

ರಾಜಕೀಯದ ಕುರಕ್ಷೇತ್ರ ಒಂದೆಡೆ ಮುಗಿದು ಎಲ್ಲವೂ ತಣ್ಣಗಾಗಿರುವ ಈ ಹೊತ್ತಿನಲ್ಲಿ ಸಿನಿಮಾ ಕುರುಕ್ಷೇತ್ರ ಸದ್ದು ಮಾಡುತ್ತಿದೆ. ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಕುರುಕ್ಷೇತ್ರ ಚಿತ್ರತಂಡದಿಂದ ಏನಾದರು ವಿಶೇಷವಾದ ಸರಪ್ರೈಸ್ ಸಿಗಬಹುದೆಂಬ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ಚಿತ್ರತಂಡ ಮತ್ತೊಂದು ಟ್ರೈಲರ್ ಬಿಡುಗಡೆಗೆ ಅಣಿಯಾಗಿದೆ.

ಸ್ವತ: ಚಾಲೆಂಜಿಗ್ ಸ್ಟಾರ್ ದರ್ಶನ್ ರವರೆ ತಮ್ಮ  ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ. ಇಂದು (24 ಜುಲೈ) ಮಧ್ನಾಹ್ನಕ್ಕೆ ಟ್ರೈಲರ್ ಬಿಡುಗಡೆಗೊಳ್ಳಲಿದೆ. ಕಳೆದ ವಾರವಷ್ಟೇ ಟ್ರೈಲರ್ ಬಿಡುಗಡೆಗೊಳಿಸಿದ್ದರು. ಆ ಟ್ರೈಲರ್ ನೋಡಿದ ಪ್ರೇಕ್ಷಕ ಪ್ರಭುಗಳು ಸಕತ್ ಫೀದಾ ಆಗಿದ್ದಾರೆ.

ಈಗಾಗಲೇ ಬಿಡುಗಡೆಗೊಂಡಿರುವ ಮೂರು ಹಾಡುಗಳು  ಸೂಪರ್ ಹಿಟ್ ಆಗಿವೆ. ಹೊಸ ಟ್ರೈಲರ್ ಹೇಗಿರುತ್ತದೆಂಬ ಕೂತುಹಲ ಎಲ್ಲರಿಗೂ ಇದೆ. ಈ ಚಿತ್ರ ಮುನಿರತ್ನರವರ ಮಹತ್ವಾಕಾಂಕ್ಷೆಯ ಚಿತ್ರ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಅದ್ದೂರಿ ತಾರಗಣವಿದೆ. ಕನ್ನಡ, ತೆಲುಗು, ಹಿಂದಿ, ಮಲೆಯಾಳಂ, ಭಾಷೆಗಳಲ್ಲಿಯೂ ಬಿಡುಗಡೆಗೊಳ್ಳುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!