ಸಿನಿಮಾ

ಹಗಲು ಕನಸಿನಲ್ಲಿ ಮಾಸ್ಟರ್ ಆನಂದ್!

ಸದಾ ಲವಲವಿಕೆಯ ಮಾ: ಆನಂದ್ ಕನ್ನಡ ಚಿತ್ರ ಪ್ರೇಮಿಗಳಿಗೆ ಇಷ್ಟವಾದ ನಟ. ಬಾಲನಟನಾಗಿ ಮಾ: ಆನಂದ್ ನಟನೆ ಯಾರು ಮರೆಯುವಂತಿಲ್ಲ. ಕರ್ಪೂರದ ಬೊಂಬೆ ಚಿತ್ರದಲ್ಲಿ ದೊಡ್ಡಣ ಅವರ ಜೊತೆಯ ಜುಗಲ್‍ಬುಂದಿ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಗೌರಿ ಗಣೇಶಚಿತ್ರದ ಅಭಿನಯವಂತೂ ಎಲ್ಲರ ಹೃದಯದಲ್ಲೂ ಶಾಶ್ವತವಾಗಿ ಉಳಿದಿದೆ.

Image result for hagalu kanasu
ಮಾ: ಆನಂದ್ ಬಾಲನಟನಾಗಿ ಚಿತ್ರರಂಗಕ್ಕೆ ಬಂದು 33 ವರ್ಷಗಳಿಗೂ ಅಧಿಕವಾಗಿದೆ. ದೊಡ್ಡವನಾದ ಮೇಲೆಯೂ ಕೂಡ ಮಾ: ಆನಂದ್ ಎಂದೇ ಎಲ್ಲರೂ ಪ್ರೀತಿಯಿಂದ ಕರೆಯುತ್ತಾರೆ. ಕಿರುತೆರೆಯ ರಿಯಾಲಿಟಿ ಶೋ ಗಳಲ್ಲಿ ತಮ್ಮ ಪ್ರತಿಭೆಯನ್ನು ತೊರಿಸಿ, ನಿರ್ದೇಶಕರಾಗಿ, ನಟರಾಗಿ ಸದ್ಯ ಜಿ ವಾಹಿನಿಯಲ್ಲಿ ಕಾಮಿಡಿ ಕಿಲಾಡಿಗಳು ಶೋ ನ ನಿರೂಪಕರಾಗಿ ಎಲ್ಲರ ಮನೆಯ ಟಿವಿ ಪರದೆಯ ಮೂಲಕ ಇನ್ನಷ್ಟೂ ಹತ್ತಿರವಾಗಿದ್ದಾರೆ.

Image result for hagalu kanasu
ಏನಪ್ಪಾ ಇದು ಇಷ್ಟೇಲ್ಲಾ ಹಿನ್ನೆಲೇ ಏಕೆ ಇಲ್ಲಿ ಅನ್ಕೊಂಡ್ರಾ, ಹೌದು ಸದ್ದಿಲ್ಲದೆ ಚಿತ್ರಿಕರಣಗೊಂಡಿರುವ ಹಗಲು ಕನಸು ಚಿತ್ರದಲ್ಲಿ ಮಾ: ಆನಂದ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇವರ ಜೊತೆ ನಾಯಕಿ ಯಾಗಿ ಸನಿಹ ಯಾದವ್ ನಟಿಸಿದ್ದಾರೆ. ಈ ಚಿತ್ರದ ಟ್ರೈಯರ್ ನೋಡಿದರೆ ಸಾಕು ಗೊತ್ತಾಗುತ್ತೆ ಇದು ಹಾಸ್ಯ ಪ್ರಧಾನ ಚಿತ್ರ ಅಂತ. ಈ ಚಿತ್ರದ ನಿರ್ದೇಶಕರು ಅವೃತವರ್ಷಿಣಿಯಂತಹ ಅತ್ಯದ್ಬುತ ಚಿತ್ರಕೊಟ್ಟ ದಿನೇಬ್‍ಬಾಬು. ಅಂದ ಹಾಗೆ ಈ ಚಿತ್ರ ಡಿಸೆಂಬರ್ 6ಕ್ಕೆ ತೆರೆಗೆ ಬರುತ್ತಿದೆಯಂತೆ. ಈ ಚಿತ್ರ ಶತದಿನೋತ್ಸವ ಆಚರಿಸಲಿ ಎಂಬುದೇ ನಮ್ಮ ಆಶಯ.
ಆಶಯ.

-Naveen Ramanagara

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!