ಚನ್ನಪಟ್ಟಣ :- ಸ್ವಾತಂತ್ರ್ಯಗಳಿಸುವ ಸಲುವಾಗಿ ಲಕ್ಷಾಂತರ ಮಹಾತ್ಮರು ತ್ಯಾಗ ಬಲಿದಾನ ಮಾಡಿದ್ದು ಅವರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್ .ಮರೀಗೌಡ ತಿಳಿಸಿದರು .
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು .ಇಂದಿನ ಯುವ ಪೀಳಿಗೆ ಸ್ವಾತಂತ್ರ್ಯದ ಮಹತ್ವ ಅರಿತು ದೇಶಭಕ್ತಿಯನ್ನು ಮೈಗೂಡಿಸಿಡಿಸಿಕೊಳ್ಳಬೇಕಿದ್ದು, ತ್ಯಾಗ, ಬಲಿದಾನಗಳ ಮೂಲಕ ದೊರೆತ ಸ್ವಾತಂತ್ರ್ಯವನ್ನು ದುರುಪಯೋಗಪಡಿಸದೇ ದೇಶದ ಅಭಿವೃದ್ಧಿಗೆ ಪೂರಕವಾಗಿಸಿಕೊಳ್ಳಬೇಕು ಎಂದರು.
ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಮಾತನಾಡಿ ಪುಣ್ಯಭೂಮಿ ಭಾರತ ದೇಶದಲ್ಲಿ ಜನಿಸಿರುವ ನಾವುಗಳೇ ಧನ್ಯರು . ಉದಾತ್ತ ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ದೇಶದ ಹಿರಿಮೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಭಾರತೀಯರಾದ ನಮ್ಮೆಲ್ಲರ ಮೇಲಿದೆ,ಹಾಗಾಗಿ ಎಲ್ಲರೂ ರಾಗ ದ್ವೇಷಗಳನ್ನು ಬಿಟ್ಟು ಐಕ್ಯತೆ ಮತ್ತು ಸೌಹಾರ್ದತೆಯಿಂದ ಬಾಳ್ವೆ ನಡೆಸುವುದರ ಜೊತೆಗೆ ದೇಶದ ಅಭಿವೃದ್ಧಿಗೆ ಕಂಕಣಬದ್ಧರಾಗಿ ದುಡಿಯಬೇಕು ಎಂದರು .
ಅಧೀಕ್ಷಕ ಪ್ರಶಾಂತ್ ಶರ್ಮಾ ಮಾತನಾಡಿ ಸ್ವಾತಂತ್ರ್ಯ ಸಿಕ್ಕಿದ್ದಲ್ಲ , ಹೋರಾಟದಿಂದ ಪಡೆದದ್ದು ,ನಮ್ಮ ದೇಶವನ್ನು ಬ್ರಿಟೀಷರ ಸಂಕೋಲೆಯಿಂದ ಬಿಡಿಸಿಕೊಳ್ಳಲು ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಆದ್ದರಿಂದ ಪ್ರತಿಯೊಬ್ಬರು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದಾಗಬೇಕು, ನಮ್ಮ ದೇಶದ ಸ್ವಾತಂತ್ರ್ಯವನ್ನು ಗೌರವದಿಂದ ಕಂಡು ನಾಡು ನುಡಿಸಂಸ್ಕೃತಿ ಪರಂಪರೆಯನ್ನು ಬೆಳೆಸಬೇಕು ಎಂದರು .
ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ ಬಾಬು , ಶಿಕ್ಷಣ ಸಂಯೋಜಕರಾದ ರಾಜಲಕ್ಷ್ಮಿ ,ಜಿನ್ನಾ ,ವಿಷಯನಿರ್ವಾಹಕರಾದ ಚಂದ್ರೇಗೌಡ ,ಮಧು, ಮಂಜುನಾಥ್ ,ಶಿಕ್ಷಕರಾದ ಮಂಜುಳಾ, ಸಂಗಯ್ಯ ಹಿರೇಮಠ್ ,ಪಂಚಲಿಂಗಯ್ಯ ,ಜಬಿ, ಕಾರ್ತಿಕ್ ,ಚೈತ್ರ ಮೊದಲಾದವರು ಉಪಸ್ಥಿತರಿದ್ದರು .