ಚನ್ನಪಟ್ಟಣತಾಲ್ಲೂಕಿನ ದಕ್ಷಿಣಾ ಮಹಾಕಾಳಿ ದ್ಯಾವಪಟ್ಟಣ ಶ್ರೀಕ್ಷೇತ್ರದಲ್ಲಿ ಹುಣ್ಣಿಮೆ ನಿಮಿತ್ತ ಕೊರೋನಾ ಮಹಾಮಾರಿ ನಿರ್ಮೂಲನೆ ಹಾಗೂ ಲೋಕ ಕಲ್ಯಾಣಾರ್ಥ ಪ್ರತ್ಯಾಂಗಿರಾ ದೇವಿ ಹೋಮ ಹಮ್ಮಿಕೊಳ್ಳಲಾಗಿತ್ತು.ಬೆಂಗಳೂರಿನ ಮಹೇಶ್ ಭಟ್ ಅವರು ಹೋಮ ನಡೆಸಿಕೊಟ್ಟರು.
ದಕ್ಷಿಣ ಮಹಾಕಾಳಿ ಶ್ರೀಕ್ಷೇತ್ರದ ಧರ್ಮಾಧಿಕಾರಿ ದ್ಯಾವಪಟ್ಟಣ ಶ್ರೀ ಕಾಳಿ ಮಹೇಶ್,ಪ್ರಧಾನ ಅರ್ಚಕ ಮಹೇಂದ್ರ ಹೋಮದ ನೇತೃತ್ವ ವಹಿಸಿದ್ದರು.
ಬೆಂಗಳೂರಿನ ರಿಷಿಕುಮಾರ ಸ್ವಾಮೀಜಿ,ಕೇರಳದ ಬ್ರಹ್ಮಾನಂದ ಸ್ವಾಮೀಜಿ,ಬೆಳಗಾವಿಯ ಶ್ರೀ ಕಂಠೇಶ್ವರ ಸ್ವಾಮೀಜಿ, ಸರ್ದಾರ್ ಸೇವಲಾಲ್ ಸ್ವಾಮೀಜಿಗಳು ಶ್ರೀಕ್ಷೇತ್ರಕ್ಕೆ ಆಗಮಿಸಿ ಹೋಮ- ಹವನದ ಸಾನ್ನಿಧ್ಯ ವಹಿಸಿದ್ದರು.
ಗಾಂಧಿ ಜಯಂತಿ ನಿಮಿತ್ತ ಹಾಲು ಉತ್ಪಾದಕ ರೈತರಿಗೆ ಸಾಲ ವಿತರಣೆ
ದಕ್ಷಿಣ ಮಹಾಕಾಳಿ ಶ್ರೀಕ್ಷೇತ್ರದ ಧರ್ಮಾಧಿಕಾರಿ ದ್ಯಾವಪಟ್ಟಣ ಶ್ರೀ ಕಾಳಿ ಮಹೇಶ್ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ಪ್ರತಿ ಹುಣ್ಣಿಮೆ ಹಾಗೂ ಅಮಾವಾಸ್ಯೆಗಳಂದು ವಿಶೇಷ ಪೂಜೆ, ಹೋಮ-ಹವನಗಳು ಜರುಗುತ್ತವೆ. ಈ ಬಾರಿ ವಿಶೇಷವಾಗಿ ವಿಶ್ವಮಾರಿ ಕೊರೋನಾ ನಿರ್ಮೂಲನೆಗಾಗಿ ಪ್ರತ್ಯಾಂಗಿರ ಹೋಮ ಹಮ್ಮಿಕೊಳ್ಳಲಾಗಿತ್ತು. ಭಕ್ತಾದಿಗಳು ಹೋಮಕ್ಕೆ ಮೆಣಸಿನಕಾಯಿ ಅರ್ಪಣೆ ಮಾಡುವ ಮೂಲಕ ವಿಶೇಷ ಪ್ರಾರ್ಥಿಸಿ, ಕೊರೋನಾ ನಿರ್ಮೂಲನೆ ಹಾಗೂ ಲೋಕ ಕಲ್ಯಾಣಕ್ಕಾಗಿ ಬೇಡಿಕೊಂಡರು ಎಂದರು.
ಗಾಂಧಿ ಜಯಂತಿ ಪ್ರಯುಕ್ತ ರೋಟರಿ ಸಿಲ್ಕ್ ಸಿಟಿವತಿಯಿಂದ ಬೆಡ್‍ಶೀಟ್ ವಿತರಣೆ.
ಕನಕಪುರದ ಸಂಪತ್ ಕುಟುಂಬ, ಬೆಂಗಳೂರಿನ ಕಾಂತಮಣಿ ಶಿವ ಶಂಕರ್ ಕುಟುಂಬ, ಸಾತನೂರಿನ ನಾರಾಯಣಪ್ಪ ಕುಟುಂಬ, ದ್ಯಾವಪಟ್ಟಣ ಹಾಗೂ ಅರಳಾಳುಸಂದ್ರದ ಭಕ್ತರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.