ನಮ್ಮ ರಾಮನಗರ

ಗಾಂಧಿ ಜಯಂತಿ ನಿಮಿತ್ತ ಹಾಲು ಉತ್ಪಾದಕ ರೈತರಿಗೆ ಸಾಲ ವಿತರಣೆ

ನಮ್ಮ ರಾಮನಗರ ಬಿಡದಿ ಹೋಬಳಿಯ ಕೆಂಪಯ್ಯನಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಗಾಂಧಿ ಜಯಂತಿ ಹಾಗೂ ಗ್ರಾಮ ಸಂಪರ್ಕ ಅಭಿಯಾನ ಪ್ರಯುಕ್ತ ಐವತ್ತಕ್ಕೂ ಹೆಚ್ಚು ಹೈನುಗಾರಿಕೆ ಫಲಾನುಭವಿಗಳಿಗೆ ಹಸು ನಿರ್ವಹಣೆಗಾಗಿ ಕಿರು ಸಾಲ ನೀಡಲಾಯಿತು.
ಗಾಂಧೀಜಿ-ಶಾಸ್ತ್ರೀಜಿ ಜಯಂತಿ ನಿಮಿತ್ತ ಸಂಘದ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಹಸು ಸಾಕಾಣಿಕೆ ದಾರರಿಗೆ ಸಾಲ ಮಂಜೂರಾತಿ ಪತ್ರಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು.

ಗಾಂಧಿ ಜಯಂತಿ ಪ್ರಯುಕ್ತ ರೋಟರಿ ಸಿಲ್ಕ್ ಸಿಟಿವತಿಯಿಂದ ಬೆಡ್‍ಶೀಟ್ ವಿತರಣೆ.
ಎಂಪಿಸಿಎಸ್ ಕಾರ್ಯದರ್ಶಿ ಚನ್ನಕೇಶವ ರೆಡ್ಡಿ ಮಾತನಾಡಿ, ಕಿಸಾನ್ ಸಮ್ಮಾನ್ ಯೋಜ‌ನೆಯಡಿ ಬಿಡದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ಕಿರುಸಾಲವನ್ನು ಅರ್ಹ ಫಲಾನುಭವಿಗಳಿಗೆ ನೀಡುತ್ತಿದೆ ಎಂದರು.
ಒಂದು ಹಸು ನಿರ್ವಹಣೆಗೆ ತಲಾ ಹದಿನಾಲ್ಕು ಸಾವಿರದಂತೆ ಹಾಲು ಉತ್ಪಾದಕ ರೈತರ ಬಳಿ ಇರುವಷ್ಟು ಹಸುಗಳ ಸಂಖ್ಯೆಗೆ ಅನುಗುಣವಾಗಿ ಸಾಲ ನೀಡಲಾಗುತ್ತಿದೆ. ಇದು ದೀರ್ಘಾವಧಿಯ ಸಾಲವಾಗಿದ್ದು, ವಾರ್ಷಿಕ ಶೇಕಡ ಏಳರಷ್ಟು ಬಡ್ಡಿ ಯನ್ನು ಫಲಾನುಭವಿಗಳು ಪಾವತಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ವಿಕ್ಟೋರಿಯಾ ಆಸ್ಪತ್ರೆಯ ಪಿ.ಆರ್ .ಓ ಚನ್ನಪಟ್ಟಣದ ಗಿರೀಶ್ ಗೆ ಕಾಯಕಲ್ಪ ಪುರಸ್ಕಾರ
ಜಿಪಂ ಸದಸ್ಯ ಮಂಜುನಾಥ್, ತಾಪಂ ಸದಸ್ಯ ಪ್ರಕಾಶ್, ಡಿ.ಎಂ.ಗಣೇಶ್, ಸೂಪರ್ ವೈಸರ್ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!