ನಮ್ಮ ರಾಮನಗರ

ಸಾವಯವ ಕೃಷಿಯಲ್ಲಿ ಮಣ್ಣಿನ ಫಲವತ್ತತೆ ನಿರ್ವಹಣೆ ತರಬೇತಿ

ರಾಮನಗರ:ರೈತಾಪಿಗಳ ಶ್ರೇಯೋಭಿವೃದ್ಧಿಗೆ ಹುಟ್ಟಿಕೊಂಡಿರುವ ತೆನೆ ರೈತ ಉತ್ಪಾದಕ ಕಂಪೆನಿ ನಿಯಮಿತ ವತಿಯಿಂದ ತಾಲ್ಲೂಕಿನ ನಿಜಯಪ್ಪನದೊಡ್ಡಿ ಪ್ರಕೃತಿ ಸಂಪನ್ಮೂಲ ಕೇಂದ್ರದಲ್ಲಿ ಭಾನುವಾರ “ರೈತರೊಂದಿಗೆ ನೇರ ಮಾತುಕತೆ ಹಾಗೂ ಸಾವಯವ ಕೃಷಿಯಲ್ಲಿ ಮಣ್ಣಿನ ಫಲವತ್ತತೆಯ ನಿರ್ವಹಣೆ” ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೃಷಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ತಿಪಟೂರಿನ ಅಕ್ಷಯ ಕಲ್ಪ ಫಾರ್ ಅಂಡ್ ಫುಡ್ ಪ್ರೈ.ಲಿ ನ ಮಣ್ಣಿನ ತಜ್ಞ ಸಾಯಿಲ್ ವಾಸು ಅವರು ಮಣ್ಣಿನ ಫಲವತ್ತತೆಯ ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು. ತಪೋವನಂ ಆರ್ಗ್ಯಾನಿಕ್ ಎಲ್‌ವಿ ಫಾರ್ಮಿಂಗ್ ಸಿಸ್ಟಮ್, ಬೆಂಗಳೂರಿನ ಆರ್ಗ್ಯಾನಿಕ್, ಆಯುಶ್ಯಾನ್ ಭವ ಆಗೋ ವೆಂಚರ್
ಪ್ರೈ.ಲಿ, ಜನನಿ ವತ್ಸಲ ಹಾಗೂ ನೇರ ಖರೀದಿದಾರರು, ಕೃಷಿ ಇಲಾಖಾಧಿಕಾರಿಗಳು, ಭಾರತೀಯ ಗ್ರಾಮೀಣ ಸಮಗ್ರ ಅಭಿವೃದ್ಧಿ ಸಂಸ್ಥೆ, ತೆನೆ ರೈತ ಉತ್ಪಾದಕ ಕಂಪೆನಿ ನಿಯಮಿತದ ನಿರ್ದೇಶಕರು ಪಾಲ್ಗೊಂಡು ಕೃಷಿ ಉತ್ಪನ್ನಗಳ ಖರೀದಿ, ಮೌಲ್ಯವರ್ಧನೆ, ಪ್ಯಾಕಿಂಗ್, ಗ್ರೇಡಿಂಗ್ ವ್ಯವಸ್ಥೆ ಹಾಗೂ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಮಾಹಿತಿ ಜೊತೆಗೆ ಕಡಿಮೆ ಧರದಲ್ಲಿ ಕೃಷಿ ಪರಿಕರಗಳ ಒದಗಿಸುವಿಕೆ, ಉತ್ತಮ ಗುಣಮಟ್ಟದ ನರ್ಸರಿ ಸಸ್ಯಗಳನ್ನು ಒದಗಿಸುವುದು, ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವುದು, ರೈತರ ಸಂತೆಗಳ ಬಾಡಿಗೆಗೆ ಆಯೋಜನೆ ಸೇರಿದಂತೆ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ರೈತರೊಡನೆ ಹಂಚಿಕೊಂಡರು.

ತೆನೆ ರೈತ ಉತ್ಪಾದಕ ಕಂಪೆನಿಸಂಸ್ಥೆಯ ಮುಖ್ಯಸ್ಥ ಸುರೇಂದ್ರ,ಭಾರತೀಯ ಗ್ರಾಮೀಣ ಸಮಗ್ರ ಅಭಿವೃದ್ಧಿ ಸಂಸ್ಥೆ ಸಂಚಾಲಕ ಚೇತನ್ ಗೌಡ, ಕೃಷಿ ಇಲಾಖೆ ಅಧಿಕಾರಿಗಳು, ಪ್ರಗತಿಪರ ಕೃಷಿಕರು, ಜಿಲ್ಲೆಯ ನೈಸರ್ಗಿಕ, ಸಾವಯವ ಕೃಷಿಕರು ಹಾಗೂ ಸಾಮಾನ್ಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

-Hemanth

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!