ಬಾಲ ಪ್ರತಿಭೆ ಸಮನ್ವಿ ನಮ್ಮನ್ನಗಲಿ ಈಗಾಗಲೇ ಒಂದುವಾರ ಆಗುತ್ತಾ ಬಂದಿದೆ. ಇತ್ತಿಚೆಗೆ ಖಾಸಗಿ ವಾಹಿನಿಯೊಂದಿಗೆ ಅಮೃತ ನಾಯ್ಡು ಮಾತನಾಡಿದ್ದು, ನಿಜಕ್ಕೂ ಮತ್ತೊಮ್ಮೆ ಎಲ್ಲರೂ ಕಣ್ಣೀರು ಹಾಕುವಂತೆ ಆಗಿದೆ. ಸಮನ್ವಿ ತಾಯಿ ಅಮೃತ ನಾಯ್ಡು ಅತೀವ ದು:ಖದಲ್ಲಿದ್ದಾರೆ. ಆ ನೋವಿನಲ್ಲೂ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ್ದು, ತುಂಬಾ ಸಂಕಟವನ್ನು ತೊಡಿಕೊಂಡಿದ್ದಾರೆ. ಮಗಳು ಸಮನ್ವಿ ಆಯುಷ್ಯವೇ ಅಷ್ಟೀತ್ತು ಅವಳು ನಮ್ಮನ್ನು ಬಿಟ್ಟು ಹೋಗಿದ್ದಾಳೆ, ಯಾರು ಕೂಡ ಮಕ್ಕಳು ಸಾಯಲು ನೋಡುವುದಿಲ್ಲ! ಕೆಲವು ಯೂಟ್ಯೂಬ್ ಚಾನೆಲ್ ನಲ್ಲಿ ಸಮನ್ವಿ ತಾಯಿ ಗರ್ಭಿಣಿ ಟೂ ವಿಲರ್ ನಲ್ಲಿ ಹೋಗಬಾರದಿತ್ತು ಕಾರ್‍ನಲ್ಲಿ ಹೋಗಿದ್ದರೆ ಈಗಾಗುತ್ತಿರಲಿಲ್ಲ. ಎಂಬಂತಹ ಮಾತುಗಳನ್ನು ಹಾಡಿದ್ದಾರೆ.
ಇದೂ ನಿಜಕ್ಕೂ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಈಗಾಗಲೇ ನಾವು ಸಾಕಷ್ಟು ನೋವಲ್ಲಿ ಇದ್ದೇವೆ ದಯಮಾಡಿ ಈ ರೀತಿ ಎಲ್ಲೋ ಕೂತು ಸುದ್ದಿ ಮಾಡಬೇಡಿ ಅಂತ ಮನವಿ ಮಾಡಿದ್ದಾರೆ. ಜೊತೆಗೆ ಸಮನ್ವಿಗೆ ಕಾರು ಇಷ್ಟವಾಗುತ್ತಿರಲಿಲ್ಲ! ಅವಳಿಗೆ ಟೂವಿಲರ್ ಇಷ್ಟ ಮತ್ತು ಅಂತರ ಕಡಿಮೆ ಇದ್ದುದ್ದರಿಂದ ಎಂದಿನಂತೆ ನಾವು ಮೆಟ್ರೋ ಗೆ ಹೋಗಲು ಟೂ ವಿಲರ್ ನಲ್ಲಿ ಹೋಗಿದ್ದು, ವಿಧಿ ನಿಯಮ ಮೀರಿ ಇಲ್ಲಿ ಏನು ಇಲ್ಲ ಅವಳ ಆಯುಷ್ಯ ಇದ್ದದ್ದು ಅಷ್ಟೇ ಏನೋ ಅಂತ ಮನಸ್ಸು ಬಿಚ್ಚಿ ನೋವನ್ನು ತೊಡಿಕೊಂಡಿದ್ದಾರೆ. ಏನೆ ಆಗಲಿ ಮನುಷ್ಯರಾದ ನಾವು ಸಂಕಟದಲ್ಲಿರುವವರಿಗೆ ಧೈರ್ಯತುಂಬಬೇಕು ಮತ್ತಷ್ಟು ನೋವನ್ನು ಕೊಡಬಾರದು ಅಲ್ಲವೇ!. ನೀವೂ ಕೂಡ ಸಮನ್ವಿತಾಯಿಗೆ ಕಾಮೇಂಟ್ ಮೂಲಕ ಧೈರ್ಯವೇಳಿ. ಧನ್ಯವಾದಗಳು