ಕೆಲ ದಿನಗಳ ಹಿಂದೆ ಧರ್ಮಸ್ಥಳದಲ್ಲಿ ಭೀಕರ ಜಲಕ್ಷಾಮ ಎದುರಾಗಿತ್ತು. ನೇತ್ರಾವತಿ ನದಿ ಬತ್ತಿ ಹೋಗಿತ್ತು. ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ನೀರಿನ ಸಮಸ್ಯೆ. ಧರ್ಮಾಧಿಕಾರಿಗಳು ಧರ್ಮಸ್ಥಳದ ಪ್ರವಾಸವನ್ನು ಮುಂದೂಡಿ ಎಂದು ಮನವಿಯನ್ನು ಮಾಡಿದ್ದನ್ನು ನೀವು ಓದಿರುತ್ತೀರಿ. ಇದೀಗ ಧರ್ಮಸ್ಥಳದಲ್ಲಿ ನೇತ್ರಾವತಿ ತುಂಬಿ ಹರಿಯುತ್ತಿದ್ದಾಳೆ.
ವಾಯು ಚಂಡಮಾರುತದಿಂದ ರಾಜ್ಯದ ಕರಾವಳಿ, ದಕ್ಷಿಣ ಕನ್ನಡ, ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಪ್ರಸಿದ್ದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳದಲ್ಲಿ ಜಲಕ್ಷಾಮ ನಿವಾರಣೆಯಾಗಿದೆ. ಭಕ್ತರು ತುಂಬಾ ಖುಷಿಯಿಂದ, ಭಕ್ತಿಯಿಂದ ನೇತ್ರಾವತಿಯಲ್ಲಿ ಮಿಂದು ದೇವರ ದರ್ಶನ ಪಡೆಯುತ್ತಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಬಿರುಗಾಳಿ ಸಹಿತ ಬಾರಿ ಮಳೆ ಸುರಿಯುತ್ತಿದ್ದು, ನೇತ್ರಾವತಿ ತುಂಬಿ ಹರಿಯುತ್ತಿದ್ದಾಳೆ. ಪ್ರಕೃತಿಗಿರುವ ಶಕ್ತಿಯೇ ಇದು ಕೆಲ ದಿನಗಳ ಹಿಂದೆ ಜಲಕ್ಷಾಮ. ಇದೀಗ ತುಂಬಿ ಹರಿಯುತ್ತಿರುವ ನೇತ್ರಾವತಿ.