ಸಿನಿಮಾ

ಗಾನ ಗಾರುಡಿಗ ಪದ್ಮಭೂಷಣ, ಪದ್ಮಶ್ರೀ ಡಾ: ಎಸ್.ಪಿ. ಬಾಲಸುಬ್ರಮಣ್ಯಂ ಜನುಮ ದಿನ

ಎಸ್.ಪಿ. ಬಾಲಸುಬ್ರಮಣ್ಯಂರವರ 73ನೇ ಜನುಮ ದಿನ ಇಂದು. ಸುಮಾರು 16ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿ ಗಿನ್ನಿಸ್ ದಾಖಲೆ ಬರೆದ ಎಸ್.ಪಿ.ಬಿ. ರವರಿಗೆ ಜನುಮದಿನದ ಶುಭಾಶಯಗಳು,


ಆಂದ್ರ ಪ್ರದೇಶ ಚಿತ್ತೂರಿನ ಕೊನೇಟಮ್ಮ ಪೇಟಾ ಎಂಬಲ್ಲಿನ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜೂನ 4, 1946ರಲ್ಲಿ .ಬಾಲಸುಬ್ರಮಣ್ಯಂ ಜನಿಸಿದರು. ಬಾಲುರವರು ವ್ಯವಸ್ಥಿತವಾಗಿ ಸಂಗೀತವನ್ನು ಕಲಿತವರಲ್ಲ. ಹರಿಕಥೆ ಹೇಳುತ್ತಿದ್ದ ತಂದೆ ಎಸ್.ಪಿ. ಸಾಂಬಮೂರ್ತಿಯವರೇ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೊನಿಯಂ, ಕೊಳಲುಗಳನ್ನು ತಮ್ಮಿಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆದದ್ದು ಇತಿಹಾಸ.

ಎಸ್.ಪಿ.ಬಿ ರವರು ಹಾಡುಗಾರಷ್ಟೇ ಅಲ್ಲದೇ ನಟರಾಗಿ, ಸಂಗೀತ ಸಂಯೋಜಕರಾಗಿ, ಚಲನಚಿತ್ರ ನಿರ್ಮಾಪಕರಾಗಿ ಸಂಗೀತ ಕಾರ್ಯಕ್ರಮಗಳ ನಿರ್ವಹಣೆಯ ಮೂಲಕವೂ ಸಾಕಷ್ಟು ಜನಮನ್ನಣೆಯನ್ನುಗಳಿಸಿದ್ದಾರೆ.

ಶಂಕರಾಭರಣಂ, ಪಂಚಾಕ್ಷರಿಗವಾಯಿ, ಸಾಗರ ಸಂಗಮಂ, ಸ್ವಾತಿಮುತ್ಯಂ, ರುದ್ರವೀಣ, ಏಕ್‍ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ಬಾಲು ರಾಷ್ಟ್ರ ಪ್ರಶಸ್ತಿಗ ಪಡೆದಿದ್ದಾರೆ. ಪದ್ಮಶ್ರೀ, ಪದ್ಮಭೂಷಣ, ಹಲವು ಡಾಕ್ಟರೇಟ್ ಪದವಿಗಳು ಸಾವಿರಾರು ಇನ್ನಿತರ ಗೌರವ ಪ್ರಶಸ್ತಿಗಳು ಇವರನ್ನು ಹುಡುಕಿಗೊಂಡು ಬಂದಿವೆ.

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗನಾನಮ್ಮ……ಎಂದೂ ಶ್ರೀನಾಥ್‍ಗೆ ದಡಸೇರಿಸಿ ನಲಿವಾ ಗುಲಾಬಿ ಹೂವೇ…ಅಂತ ಹೇಳಿ. ದೀಪಾವಳಿ ದೀಪವಾಳಿ…..ಆನಂದ ಲೀಲಾವಳಿ…ಎಂದೇಳಿ ಕನ್ನಡಿಗರ ಹೃದಯದಲ್ಲೂ ಶಾಶ್ವತ ಸ್ಥಾನಪಡೆದ ಎಸ್.ಪಿ.ಬಿ.ಇನ್ನಷ್ಟು ಸಾಧನೆಗಳನ್ನು ಮಾಡಲಿ ಆ ಭಗವಂತ ಆರೋಗ್ಯ ಆಯುಷ್ಯವನ್ನು ನೀಡಲಿ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!