ಕಳೆದ 2018ರಲ್ಲಿ ನಡೆದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕ ಒಟ್ಟು 24 ಮಂದಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಧಾರವಾಡದ ರಾಹುಲ್ ಶರಣಪ್ಪ ಸಂಕನೂರು 17ನೇ Rank ಪಡೆದಿದ್ದಾರೆ. ಯುಪಿಎಸ್‍ಸಿ 2018ರ ಮೊದಲ Rankನ್ನು ಕನಿಷ್ಕ್ ಕಟಾರಿಯ್ ಪಡೆದುಕೊಂಡಿದ್ದಾರೆ.
ಈ ಭಾರಿ 795 ಅಭ್ಯರ್ಥಿಗಳು ಐಎಎಸ್ ಮತ್ತು ಐಪಿಎಸ್ ಶ್ರೇಣಿಗೆ ಆಯ್ಕೆಯಾಗಿದ್ದು, ಇವರಲ್ಲಿ 182 ಮಹಿಳೆಯರು ಇರುವುದು ವಿಶೇಷವಾಗಿದೆ. ಅದರಲ್ಲಿ ನಕ್ಷಲ್ ಪೀಡಿತ ದಂತೇವಾಡ ನಮ್ರತಾ ಜೈನ್ 12ನೇ Rankಪಡೆದಿದ್ದಾರೆ.
ಕರ್ನಾಟಕ ಅಭ್ಯರ್ಥಿಗಳು: ಎನ್. ಲಕ್ಷ್ಮೀ, ಎಸ್. ಆಕಾಶ್, ಕೃತಿಕಾ, ಎಚ್.ಆರ್. ಕೌಶಿಕ್, ಎಚ್. ಬಇ. ವಿವೇಕ್, ನಿವೇದಿತಾ, ಗಿರೀಶ್ ಧವ್ರ್ಮರಾಜ್, ಮಿರ್ಜಾ ಕದರ್ ಬೇಗ್, ಯು.ಪಿ. ತೇಜಸ್, ಬಿ.ಜೆ.ಹರ್ಷವರ್ಧನ್, ಪಕೀರೇಶ್ ಕಲ್ಲಪ್ಪ ಬಾದಾಮಿ, ಡಾ. ನಾಗಾರ್ಜುನ ಗೌಡ, ಬಿ.ವಿ. ಅಶ್ವಿಜಾ ಆರ್. ಮಂಜುನಾಥ್ ಎಸ್. ಬೃಂದಾ, ಹೇಮಂತ್, ಎಂ.ಕೆ. ಶೃತಿ, ವೆಂಕಟರಾಮ್, ಸಂತೋಷ್ ಎಚ್. ಎಸ್, ಅಶೋಕ್ ಕುಮಾರ್ , ಎನ್. ರಾಘವೇಂದ್ರ ಮತ್ತು ಶಶಿಕಿರಣ್ Rank ಪಡೆದ ಅಭ್ಯರ್ಥಿಗಳಾಗಿದ್ದಾರೆ.
24 ಮಂದಿ ರ್ಯಾಂಕ್ ವಿಜೇತರಲ್ಲಿ 17 ಮಂದಿ ಡಾ. ರಾಜ್ ಕುಮಾರ್ ಐಎಎಸ್ ಅಕಾಡಮಿಯಲ್ಲಿ ತರಬೇತಿ ಪಡೆದಿದ್ದಾರೆ ಎಂದು ಅಕಾಡಮಿ ತಿಳಿಸಿದೆ. ಒಟ್ಟಾರೆ ಯುಗಾದಿ ಸಂಭ್ರಮದಲ್ಲಿ ರಾಜ್ಯದ ಜನತೆಗೆ ಇದು ಸಿಹಿ ಸುದ್ಧಿಯಾಗಿದೆ.
ಈ ಪ್ರತಿಭೆಗಳಿಗೆ ನಿಮ್ಮದೊಂದು ಶುಭಾಶಯವಿರಲಿ. ಲೈಕ್ ಮಾಡಿ ಶೇರ್ ಮಾಡಿ.